ಹೊನ್ನಾವರ : ಹೊನ್ನಾವರ ಮತ್ತು ಭಟ್ಕಳ ಕುಮುಟಾ, ತಾಲೂಕಿನ ಭಾರತೀಯ ಕಿಸಾನ್ ಸಂಘ, ಜಿಲ್ಲಾ ಕೃಷಿಕ ಸಮಾಜ, ಎ.ಬಿ.ವಿ.ಪಿ ತೆಂಗು ಬೆಳೆಗಾರರ ಒಕ್ಕೂಟ, ಗ್ರಾಮ ಪ್ರೇರಣಾ ಸಂಸ್ದೆ, ಧರ್ಮಸ್ದಳ ಗ್ರಾಮಾಭಿವೃದ್ದಿ ಯೋಜನೆ ಮತ್ತು ವಿವಿಧ ಸಂಘ ಸಂಸ್ದೆಗಳ ಆಶ್ರಯದಲ್ಲಿ ವಿವಿದ ಬೇಡಿಕೆಗಳನ್ನು ಇಡೇರಿಸುವಂತೆ ಆಗ್ರಹಿಸಿ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಹಾಗಾ ಅರಣ್ಯ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಹೊನ್ನಾವರದ ಶರಾವತಿ ಸರ್ಕನಿಂದ ಹೊರಟು ಪ್ರತಿಭಟನಾಕಾರರು ಉಪ ಅರಣ್ಯ ಸಂರಕ್ಷಣಾದ್ದಿಕಾರಿಗಳ ಕಚೇರಿಯ ಸಮಿಪದಲ್ಲಿರುವ ಪೋಲೀಸ್ ಪೆರೆಡ್ ಮೈದಾನದಲ್ಲಿ ಪ್ರತಿಭಟನಾ ಸಭೆ ನಡೆಸಿ ಅಧಿಕಾರಿಗಳ ಗಮನ ಸೇಳೆದರು.
ಈ ಸಂದರ್ಭದಲ್ಲಿ ಭಾರತೀಯ ಕಿಸಾನ್ ಸಂಘದ ಜಿಲ್ಲಾ ಅಧ್ಯಕ್ಷ ಶಿವರಾಮ ಗಾಂವಕರ ಮಾತನಾಡಿ ಇಂದು ತೆಂಗು ಬೆಳೆಗಾರರು ಬೆಳೆದ ಬೆಳೆ ಮಂಗನ ಪಾಲಾಗುತ್ತಿದೆ. ಮಂಗಗಳನ್ನು ಹಿಡಿದು ಅಭಯಾರಣ್ಯಕ್ಕೆ ಬಿಡಬೇಕು. ಅರಣ್ಯ ಇಲಾಖೆಯವರು ಸಾವಿರಾರು ಸಂಖ್ಯೆಯಲ್ಲಿ ಗಿಡಗಳನ್ನು ಪ್ರತಿವರ್ಷ ನಾಟಿಕಾರ್ಯ ಮಾಡುತ್ತಾರೆ. ಆದರೆ ಇನ್ನು ಮುಂದೆ ಪ್ರತಿ5 ಗಿಡದಲ್ಲಿ ಒಂದು ಗಿಡ ಹಣ್ಣಿನ ಗಿಡ ಬೆಳೆಸಬೇಕು. ರೈತರ ಇವರೆಗಿನ ಬೆಳೆ ಹಾನಿಗೆ ಸೂಕ್ತ ಪರಿಹಾರ ನೀಡಬೇಕು. ಉದ್ಯೂಗಖಾತರಿ ಯೋಜನೆಯನ್ವಯ ಕಾವಲುಗಾರರ ನೇಮಕ ಮಾಡಬೇಕು. ಕಾಡುಪ್ರಾಣಿಗಳಿಗೆ ನೀರಿನ ಹೊಂಡ ಕಾಡಿನಲ್ಲಿ ನಿರ್ಮಿಸಿ ಕಾಡುಪ್ರಾಣಿಗಳಿಗೆ ಕುಡಿಯಲು ನೀರಿನ ವೈವಸ್ದೆ ಮಾಡಬೇಕು. ರೈತರ ಜಮಿನಿಗೆ ಹೋಗಲು ಫಾರೆಸ್ಟ ಜಾಗ ಬಂದಲ್ಲಿ ಕಾಲುದಾರಿ ಬೆಡಬೇಕು ಈ ಎಲ್ಲಾ ಬೇಡಿಕೆಯ ಈಡೇರಿಕೆಗಾಗಿ ಬೃಹತ ಪ್ರತಿಭಟನೆ ಮೂಲಕ ಸರ್ಕಾರದ ವಿರುದ್ದ ಗೋಷಣೆ ಕೂಗುತ್ತಾ ಬ್ರಹತ್ತ ಪ್ರತಿಭಟೆನೆ ಕೈಗೋಂಡು ಆಕ್ರೋಶ ವ್ಯಕ್ತಪಡಿಸಿ ಮನವಿ ಸಲ್ಲಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಮಾತನಾಡಿದ ಉಪ ಅರಣ್ಯ ಸಂರಕ್ಷಣಾದ್ದಿಕಾರಿಗಳಾದ ವಸಂತ ರೆಡ್ಡಿ ಕೆ ವಿ ಮಾತನಾಡಿ, ಸರ್ಕಾದ ಗಮನಕ್ಕೆ ತಂದು ಸೂಕ್ತಕ್ರಮ ಕೈಗೊಳ್ಳುವ ಬರವಸೆ ನೀಡಿದರು.
ಈ ಸಂಧರ್ಭದಲ್ಲಿ ನಾಗರಾಜ್ ನಾಯಕ ತೊರ್ಕೆ,ದಿನಕರ ಶೆಟ್ಟಿ, ವೆಂಕಟ್ರಮಣ ಹೆಗಡೆ, ಸುರಜ್ ನಾಯ್ಕ ಸೋನಿ, ಜಿ ಎನ್ ಗೌಡ, ಮುಂತಾದವರು ಇದ್ದರು,