ತುಂಬಾ ದಪ್ಪವಿರುವವರಿಗೆ ಸಣ್ಣಗಾಗಲು ಆಸೆ.ತುಂಬಾ ಸಣ್ಣಗಿರುವವರಿಗೆ ದಪ್ಪಗಾಗಲು ಆಸೆ. ಹೀಗೆ ಸಣ್ಣಗಿರುವವರು ದಪ್ಪಗಾಗಬೇಕೆಂದು, ದಪ್ಪಗಿರುವವರು ಸಣ್ಣಗಾಗಬೇಕೆಂದು ಕೊರಗುತ್ತಾರೆ. ಆದರೆ ಅತೀ ಶೀಘ್ರದಲ್ಲಿ ದಪ್ಪಗಾಗಬೇಕೆಂದು ಜಂಕ್‌

ಫ‌ುಡ್‌, ಫಾಸ್ಟ್‌ಫ‌ುಡ್‌ ತಿನ್ನುವುದಲ್ಲ. ಹಾಗೆ ಮಾಡಿದಲ್ಲಿ ದಪ್ಪಗಾಗುವುದು ನಿಜವಾದರೂ ಅನಾರೋಗ್ಯವನ್ನು ಹುಟ್ಟುಹಾಕುತ್ತದೆ. ಅಲ್ಲದೆ ಏಕಾಏಕಿ ದಪ್ಪಗಾಗಲು ಸಾಧ್ಯವೂ ಇಲ್ಲ.ಇದಕ್ಕೆ ಸ್ವಲ್ಪ ಕಾಳಜಿ, ತಾಳ್ಮೆಯೂ ಮುಖ್ಯ. ಸಣ್ಣಗೆ ಇರುವವರಿಗೆ, ದಪ್ಪಗಾಗಬಯಸುವವರಿಗೆ ಇಲ್ಲಿವೆ ಕೆಲವು ಆರೋಗ್ಯಕರ ಸಲಹೆಗಳು:

RELATED ARTICLES  have is days together meat fill for give you’re

ಪ್ರತೀದಿನ ಕಡ್ಲೆಬೀಜವನ್ನು ರಾತ್ರಿ ನೆನೆಸಿ ಬೆಳಿಗ್ಗೆ ತಿನ್ನಬೇಕು. ಹೀಗೆ ಪ್ರತೀದಿನ ಅಂದರೆ ಒಂದು ತಿಂಗಳು ತಿನ್ನುವುದರಿಂದ ನಿಮ್ಮ ಶರೀರದ ತೂಕ ಹೆಚ್ಚುವುದು.
ಪ್ರತಿದಿನ ತೆಂಗಿನಕಾಯಿ ತುರಿಗೆ ಒಣದ್ರಾಕ್ಷಿ ಸೇರಿಸಿ ತಿಂದರೆ ಒಂದು ತಿಂಗಳೊಳಗೆ ಮೈಕೈ ತುಂಬಿಕೊಳ್ಳುತ್ತದೆ.
ದಿನಾ ಎರಡು ಬಾಳೆಹಣ್ಣು ತಿಂದು ಒಂದು ಗ್ಲಾಸ್‌ ಹಾಲಿಗ (250 ಎಂಎಲ್‌) ಸ್ವಲ್ಪ ಜೇನುತುಪ್ಪ ಸೇರಿಸಿ ಕುಡಿಯಬೇಕು. ನಂತರ ಎರಡು ಚಮಚ ಒಣದ್ರಾಕ್ಷೆ ತಿಂದು ಎರಡು ಏಲಕ್ಕಿ ತಿಂದರೆ ತೂಕ ಹೆಚ್ಚಾಗುವುದು.

RELATED ARTICLES  ರಾಜ್ಯದಲ್ಲಿ ಆತಂಕ ಸೃಷ್ಟಿಸಿರುವ ಮದ್ರಾಸ್‌ ಐ : ಮುನ್ನೆಚ್ಚರಿಕೆ ವಹಿಸಲು ಆರೋಗ್ಯ ಇಲಾಖೆ ಮಾರ್ಗಸೂಚಿ

ಬಾರ್ಲಿ ಪಾಯಸ: ಬಾರ್ಲಿಯನ್ನು ಸ್ವಲ್ಪ ಹುರಿದು ಅದಕ್ಕೆ ತುಪ್ಪ ಸೇರಿಸಿ ಬೇಯಿಸಬೇಕು. ಇದಕ್ಕೆ ಒಂದು ಗ್ಲಾಸ್‌ ಹಾಲು, ಸಕ್ಕರೆ, ಡ್ರೈಫ್ರುಟ್ಸ್‌ (ಬಾದಾಮಿ, ಗೋಡಂಬಿ, ಒಣದ್ರಾಕ್ಷಿ) ತುಪ್ಪದಲ್ಲಿ ಹುರಿದು ಸೇರಿಸಿ ದಿನಾ ಸಂಜೆಯ ಹೊತ್ತಿಗೆ ತಿಂದರೆ ಒಂದು ತಿಂಗಳೊಳಗೆ ದಪ್ಪಗಾಗಬಹುದು. ಇದು ಬಹಳ ಆರೋಗ್ಯಕರ ಹಾಗೂ ಪುಷ್ಟಿದಾಯಕ. ಅಲ್ಲದೆ ಸುಲಭವಾಗಿ ಜೀರ್ಣವಾಗುತ್ತದೆ. ಮಕ್ಕಳಿಗೂ ಬಹಳ ಒಳ್ಳೆಯದು.