ಕುಮಟಾ: ತಾಲೂಕಿನ ಬೆಳಕು ಗ್ರಾಮೀಣಾಬಿವೃದ್ಧಿ ಟ್ರಸ್ಟ್ ಹಾಗೂ ಬಿಜೆಪಿ ಕಾರ್ಯಕರ್ತರ ಸಹಕಾರದೊಂದಿಗೆ ಸಂಕ್ರಾಂತಿ ಹಬ್ಬದ ಶುಭ ಸಂದರ್ಭದಂದು ಗಂಗಾವಳಿಯ ಗಂಗಾಮಾತಾ ದೇವಸ್ಥಾನದಲ್ಲಿ 14 ಫಲಾನುಭವಿಗಳಿಗೆ ಪ್ರಧಾನ ಮಂತ್ರಿ ಉಜ್ವಲ ಯೋಜನೆಯಡಿ ಉಚಿತ ಗ್ಯಾಸ್ ಕಿಟ್‍ಗಳೊಂದಿಗೆ ಟ್ರಸ್ಟ್ ವತಿಯಿಂದ ಉಚಿತ ಲೈಟರಗಳನ್ನು ಸಹ ವಿತರಿಸಲಾಯಿತು.

ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರು ಹಾಗೂ ಗ್ರಾಮೀಣಾಬಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಪ್ರಧಾನ ಮಂತ್ರಿ ಉಜ್ವಲ ಯೋಜನೆ ಬಡವರ ಪರ ಯೋಜನೆಯಾಗಿದ್ದು ಈ ಯೋಜನೆಯಡಿ ಗ್ರಾಮೀಣ ಭಾಗದಲ್ಲಿ ಅರ್ಹ ಬಡ ಫಲಾನುಭವಿಗಳನ್ನು ಗುರುತಿಸಿ ಅವರು ಹಣ, ಸಮಯ ವ್ಯಯಿಸದೇ, ಅಲೆದಾಟವಿಲ್ಲದೇ ಸುಲಭವಾಗಿ ಉಚಿತ ಗ್ಯಾಸ್ ಕಿಟ್ ಗಳನ್ನು ವಿತರಿಸುತ್ತಿದ್ದೇವೆ. ಆಯಾ ಗ್ರಾಮೀಣ ಭಾಗದಲ್ಲಿ ಪ್ರಥಮ ಮತ್ತು ದ್ವಿತೀಯ ಸುತ್ತಿನಲ್ಲಿ ಎಲ್ಲಾ ಫಲಾನುಭವಿಗಳಿಗೂ ಈ ಯೋಜನೆಯಡಿ ಉಚಿತ ಗ್ಯಾಸ್ ಕಿಟ್ ಗಳನ್ನು ವಿತರಿಸುತ್ತಿದ್ದೇವೆ. ಬಡವರಿಗಾಗಿಯೇ ರೂಪಿಸಿದ ಈ ಯೋಜನೆಯಿಂದ ಬಡವರಿಗೆ ಅನುಕೂಲವಾಗಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿಯವರ ಉದ್ದೇಶ ಕೂಡಾ ಈಡೇರಬೇಕು ಎಂಬುದು ನಮ್ಮ ಆಶಯ. ಸರಕಾರದಿಂದ ಬರುವ ಯಾವುದೇ ಯೋಜನೆಗಳಿರಲಿ ಅವುಗಳನ್ನು ಬಡವರಿಗೆ ತಲುಪಿಸುವ ನಿಟ್ಟಿನಲ್ಲಿ ನಿರಂತರವಾಗಿ ನಮ್ಮ ಟ್ರಸ್ಟ್ ಕಾರ್ಯ ನಿರ್ವಹಿಸಲಿದೆ. ಪ್ರತಿಯೊಬ್ಬರೂ ಕೂಡಾ ಇಂತಹ ಯೋಜನೆಗಳ ಅನುಕೂಲತೆಯನ್ನು ಪಡೆದುಕೊಳ್ಳಬೇಕು ಎಂದು ಸಲಹೆ ನೀಡಿದರು.

RELATED ARTICLES  ಅಂಕೋಲಾ ಬಸ್ ನಿಲ್ದಾಣದ ಶುಚಿತ್ವ ಕಾಪಾಡುವ ಮಹಿಳೆಯನ್ನು ಮೆಚ್ಚಿದ ಆನಂದ ಮಹೇಂದ್ರಾ.

ನಾಡುಮಾಸ್ಕೇರಿ ಗ್ರಾಮ ಪಂಚಾಯತದ ಸದಸ್ಯರಾದ ಶ್ರೀನಿವಾಸ ದೇವಣ್ಣ ನಾಯಕ ಹಾಗೂ ಚಂದ್ರಶೇಖರ ನಾಯ್ಕ ಅವರುಗಳು ಮಾತನಾಡಿ ಸರಕಾರ ಹಲವಾರು ಜನಪರ ಯೋಜನೆಗಳನ್ನು ರೂಪಿಸಿದ್ದರೂ ಕೂಡಾ ಅದು ಪ್ರಾಮಾಣಿಕವಾಗಿ ಬಡವರಿಗೆ ತಲುಪುತ್ತಿಲ್ಲ. ಇದರಿಂದ ಬಡವರು ವಂಚಿತರಾಗುತ್ತಿದ್ದಾರೆ. ಆದರೆ ನಾಗರಾಜ ನಾಯಕ ತೊರ್ಕೆ ಅವರು ತಮ್ಮ ಟ್ರಸ್ಟ್ ವತಿಯಿಂದ ಗ್ರಾಮೀಣ ಭಾಗದ ಎಲ್ಲಾ ಫಲಾನುಭವಿಗಳಿಗೂ ಈ ಯೋಜನೆಯ ಸೌಲಭ್ಯವನ್ನು ಬಡವರ ಮನೆಯಂಗಳದಲ್ಲಿಯೇ ಒದಗಿಸುತ್ತಿರುವುದರಿಂದ ಜನರಿಗೆ ಹೆಚ್ಚಿನ ಅನುಕೂಲತೆಯಾಗುತ್ತಿದೆ ಎಂದು ನಾಗರಾಜ ನಾಯಕ ತೊರ್ಕೆಯವರನ್ನು ಶ್ಲಾಘಿಸಿದರು.

RELATED ARTICLES  ಶ್ರೀ ಶ್ರೀ ಕೈವಲ್ಯಾನಂದ ಸ್ವಾಮಿಗಳಿಗೆ ಗೋಕರ್ಣ ಗೌರವ.

ಈ ಸಂದರ್ಭದಲ್ಲಿ ಜಗದೀಶ ಅಂಬಿಗ, ವೆಂಕಟ್ರಮಣ ಕವರಿ, ರಾಘವೇಂದ್ರ ಗೌಡ, ದೇವೇಂದ್ರ ಗೌಡ, ಗಿರೀಶ ನಾಯಕ ಮುಂತಾದವರು ಉಪಸ್ಥಿತರಿದ್ದರು. ಅರುಣ ಕವರಿ ತೊರ್ಕೆಯವರು ಸ್ವಾಗತಿಸಿದರು.

ಶಾಂತಿ ಗಣಪತಿ ಅಂಬಿಗ, ಜಾನಕಿ ಶಿವು ಗೌಡ, ಕಮಲಾ ಗೋಪಾಲ ತಾಂಡೇಲ, ವೀಣಾ ರಾಮ ನಾಯ್ಕ, ಮಾದೇವಿ ವೆಂಕಟ್ರಮಣ ಗೌಡ, ಮಾದೇವಿ ಅಣ್ಣಪ್ಪ ಗೌಡ, ಶೋಭಾ ಹೊನ್ನಪ್ಪ ಅಂಬಿಗ, ಲಕ್ಷ್ಮೀನಾರಾಯಣ ನಾಯ್ಕ, ಸಾವಿತ್ರಿ ಶಿವಾನಂದ ಗೌಡ, ಉಷಾ ಸುರೇಶ ಆಚಾರಿ, ಗುಲಾಬಿ ಉದಯ ಮಹಾಲೆ, ಶಾಂತಿ ಸುಕ್ರು ಗೌಡ, ಮಾದೇವಿ ಆನಂದು ಗೌಡ, ಸಹನಾ ಸುರೇಶ ಪಡ್ತಿ ಮೊದಲಾದ ಫಲಾನುಭವಿಗಳು ಉಚಿತ ಗ್ಯಾಸ್ ಕಿಟ್ ಗಳನ್ನು ಪಡೆದು ಸಂಭ್ರಮಿಸಿದರು.