ಕುಮಟಾ : ತಾಲೂಕಿನ ಯುವ ನಾಮಧಾರಿ ಸಂಘದ ಆಶ್ರಯದಲ್ಲಿ 18/01/2018 ರಂದು ಮಿರ್ಜಾನ ಕ್ರೀಡಾಂಗಣದಲ್ಲಿ ನಾಮಧಾರಿ ಕಬಡ್ಡಿ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಕೆನರಾ ವಿಜಯ ದಿನಪತ್ರಿಕೆಯ ಸಂಸ್ಥಾಪಕ ಅಧ್ಯಕ್ಷರಾದ ಮಂಜುನಾಥ ನಾಯ್ಕ ಅಂಕೋಲಾ ಇವರು ಉದ್ಘಾಟಿಸಿದರು. ನಂತರ ಮಾತನಾಡಿದ ಇವರು ಕಬಡ್ಡಿ ಒಂದು ದೇಶೀಯ ಕ್ರೀಡೆಯಾಗಿದ್ದು ಇಂತಹ ಕ್ರೀಡೆಗಳನ್ನು ಪ್ರೋತ್ಶಾಹಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಬೇಕು ಎಂದು ಶುಭ ಹಾರೈಸಿದರು.

FB IMG 1516358303768

ಟ್ರೋಫಿ ಅನಾವರಣಗೊಳಿಸಿದ ಮಾಜಿ ಶಾಸಕ ದಿನಕರ ಶೆಟ್ಟಿ ಅವರು ಮಾತನಾಡಿ ಇಂದಿನ ಯುವಕರಲ್ಲಿ ಕ್ರಿಕೆಟ ನಲ್ಲಿ ಆಸಕ್ತಿ ಹೆಚ್ಚಾಗುತ್ತಿದ್ದು ನಮ್ಮ ದೇಶೀಯ ಕ್ರೀಡೆಗಳು ಕಣ್ಮರೆಯಾಗುತ್ತಿವೆ. ದೇಶೀಯ ಕ್ರೀಡೆಗಳಲ್ಲಿ ಒಂದಾದ ಕಬಡ್ಡಿ ಪಂದ್ಯಾವಳಿಯನ್ನು ಆಯೋಜಿಸಿರುವ ಯುವ ನಾಮಧಾರಿ ಸಂಘದ ಕಾರ್ಯವನ್ನು ಶ್ಲಾಘನೀಯ ಎಂದರು.

RELATED ARTICLES  ಮಹಾಬಲೇಶ್ವರ ದೇವಾಲಯದ ತ್ರಿಪುರಾಖ್ಯದೀಪೋತ್ಸವ ಸಂಪನ್ನ: ಜನರನ್ನು ಆಕರ್ಷಿಸಿದ ಹೂವಿನ ಅಲಂಕಾರ

ಗೌರವ ಉಪಸ್ಥಿತಿ ವಹಿಸಿದ ಬಿಜೆಪಿ ಮುಖಂಡರು ಹಾಗೂ ಗ್ರಾಮೀಣಾಬಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರೂ ಆದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಕಬಡ್ಡಿ ಒಂದು ಗ್ರಾಮೀಣ ಭಾಗದ ದೇಶೀಯ ಕ್ರೀಡೆಯಾಗಿದೆ. ಇಂತಹ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರಿಂದ ನಮ್ಮ ಸುತ್ತಮುತ್ತಲಿನ ಕ್ರೀಡಾಪಟುಗಳಿಗೆ ಅವರ ಕ್ರೀಡಾ ಪ್ರದರ್ಶನಗಳಿಗೆ ಅವಕಾಶ ದೊರೆಯುತ್ತದೆ. ಕ್ರೀಡೆಗಳು ಮಾನವನ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಹಾಗಾಗಿ ಪ್ರತಿಯೊಬ್ಬರೂ ಕ್ರೀಡೆಯಲ್ಲಿ ತೊಡಗಿಕೊಳ್ಳಬೇಕು. ಒಂದು ಸಮಾಜ ಸಂಘಟಿತಗೊಂಡಾಗ ಮಾತ್ರ ಆ ಸಮಾಜ ಮುಂದುವರಿಯಲು ಸಾಧ್ಯ. ಸಮಾಜದ ಒಗ್ಗೂಡುವಿಕೆಯಲ್ಲಿ ಇಂತಹ ಕಾರ್ಯಕ್ರಮಗಳು ಜರುಗಿದಾಗ ಪರಸ್ಪರರಲ್ಲಿ ಸಾಮರಸ್ಯ ಹಾಗೂ ಒಗ್ಗಟ್ಟು ಬೆಳೆಯುತ್ತದೆ. ಪ್ರತಿಯೊಬ್ಬರೂ ತಮ್ಮ ಸಮಾಜದ ಪ್ರಗತಿಯ ನಿಟ್ಟಿನಲ್ಲಿ ಯೋಚಿಸಿ ಆ ದಿಶೆಯಲ್ಲಿ ಮುಂದುವರಿಯಬೇಕು ಎಂದರು.

ಗೌರವ ಉಪಸ್ಥಿತಿ ವಹಿಸಿದ ಜಿ. ಪಂ. ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ಮಾತನಾಡಿ ಯುವ ನಾಮಧಾರಿ ಸಂಘದ ಕಾರ್ಯವನ್ನು ಶ್ಲಾಘಿಸಿದರು.

RELATED ARTICLES  ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರ ಹೆಡೆಮುರಿ ಕಟ್ಟಿದ ಪೊಲೀಸರು

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಅಮೆಚ್ಯೂರ ಕಬಡ್ಡಿ ಅಸೋಸಿಯೇಶನ್ ನ ರಾಜ್ಯ ಉಪಾಧ್ಯಕ್ಷರಾದ ಸೂರಜ ನಾಯ್ಕ ಸೋನಿ ಅವರು ಮಾತನಾಡಿ ಕಬಡ್ಡಿ ಪಂದ್ಯಾವಳಿಗಳು ಹೆಚ್ಚೆಚ್ಚು ಜರುಗಿದಾಗ ಮಾತ್ರ ಕಬಡ್ಡಿ ಕ್ರೀಡೆಯ ಬಗ್ಗೆ ಯುವ ಜನತೆಯಲ್ಲಿ ಆಸಕ್ತಿ ಬೆಳೆಯುತ್ತದೆ. ಇಂತಹ ಪಂದ್ಯಾವಳಿಗೆ ತಮ್ಮ ಸಹಾಯ ಸಹಕಾರ ಸದಾ ಇರುವುದಾಗಿ ಭರವಸೆ ನೀಡಿದರು.

IMG 20180119 WA0024 1

ಇದೇ ವೇದಿಕೆಯಲ್ಲಿ ಉರಗ ತಜ್ಞ ಪವನ ನಾಯ್ಕ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಮಿರ್ಜಾನಿನ ಗ್ರಾ. ಪಂ. ಉಪಾಧ್ಯಕ್ಷರಾದ ನಾಗರಾಜ ನಾಯ್ಕ, ದಿವಾಕರ ಬಿ. ನಾಯ್ಕ, ಗಂಗಾವಳಿಯ ಉದ್ಯಮಿ ನಾಗರಾಜ ನಾಯ್ಕ ಸೇರಿದಂತೆ ಹಲವರು ಉಪಸ್ಥಿತರಿದ್ದರು.