ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ನಡೆಸಿಕೊಂಡು ಬರುತ್ತಿರುವ ಕೆರೆಮನೆ ಶಂಭು ಹೆಗಡೆ ರಾಷ್ಟ್ರೀಯ ನಾಟ್ಯೋತ್ಸವದ ಒಂಭತ್ತನೇ ಪರ್ವದಲ್ಲಿ ದೇಶದ ವಿಭಿನ್ನ ಸ್ಥಳಗಳಿಂದ ಆಗಮಿಸುತ್ತಿರುವ ವಿವಿಧ ಕಲಾ ಪ್ರಾಕಾರಗಳ, ಕಲಾವಿದರ ಸಮಷ್ಠಿ ಅಧ್ಯಯನಕ್ಕೆ ಪೂರಕವಾಗಿ, ಚಿಂತನ –ಮಂಥನಕ್ಕೆ ಸೇತುವಾಗುವ ದೃಷ್ಠಿಯಿಂದ “ನಾಟ್ಯೋತ್ಸವ ಸಮಗ್ರ ಕಲಾ ವಿಮರ್ಶೆ ಸ್ಪರ್ದೆ”ಯನ್ನು ಏರ್ಪಡಿಸಲಾಗಿದೆ . ಈ ಸ್ಪರ್ದೆಯಲ್ಲಿ ಭಾಗವಹಿಸುವ ಆಸಕ್ತರ ವಯಸ್ಸು 30 ಮೀರಿರಬಾರದು. ದಿನಾಂಕ 27-01-2018 ರಿಂದ 31-01-2018 ರ ವರೆಗೆ ನಡೆಯುವ ಒಂಭತ್ತನೇ ರಾಷ್ಟ್ರೀಯ ನಾಟ್ಯೋತ್ಸವದ 5 ದಿನಗಳ ಕಾಲ ನಡೆಯುವ ಎಲ್ಲಾ ಕಾರ್ಯಕ್ರಮಗಳಲ್ಲಿ ಹಾಜರಿದ್ದು , ಕಲಾ ಪ್ರಾಕಾರಗಳನ್ನು ಸಮ್ಯಕ್ ದೃಷ್ಠಿಯಲ್ಲಿ ವಿಮರ್ಶಿಸಿ 12 ಪುಟಗಳಿಗೆ ಮೀರದಂತೆ ದಿನಾಂಕ 10-02-2018 ರೊಳಗಾಗಿ ಮಂಡಳಿಯ ಮೇಲ್ ಗಾಗಲಿ ([email protected]) ಅಥವಾ ಅಂಚೆ ಮೂಲಕವಾಗಿ ತಲುಪುವಂತೆ ಕಳುಹಿಸಬೇಕು.
ಆಸಕ್ತರು ದಿ : 25-01-2018 ರ ಒಳಗಾಗಿ ತಮ್ಮ ವಯಸ್ಸಿನ ದೃಷ್ಟಿಕರಣದೊಂದಿಗೆ ಶ್ರೀ ಇಡಗುಂಜಿ ಮೇಳ ಕೆರೆಮನೆ ಇವರಲ್ಲಿ [email protected] ಈ ಇ-ಮೇಲ್ ನಲ್ಲಿ ನೋಂದಾಯಿಸಬೇಕು. ನೊಂದಾಯಿಸಿಕೊಂಡು ಆಯ್ಕೆಯಾದವರಿಗೆ ನಾಟ್ಯೋತ್ಸವ ದಲ್ಲಿ ಐದೂ ದಿನ ಉಚಿತ ಊಟ ಮತ್ತು ವಸತಿಯನ್ನು ನೀಡಲಾಗುವುದು. ಈ ಬಗ್ಗೆ ಹೆಚ್ಚಿನ ಮಾಹಿತಿ ಬೇಕಾದಲ್ಲಿ ಎಲ್.ಎಮ್.ಹೆಗಡೆ-9449724630 ಇವರಲ್ಲಿ ಪಡೆಯಬಹುದಾಗಿದೆ.
ಈ ಸ್ಪರ್ದೆಯಲ್ಲಿ ಆಯ್ಕೆಯಾದ ಪ್ರಥಮ,ದ್ವಿತೀಯ ಮತ್ತು ತೃತೀಯ ಸ್ಥಾನಗಳಿಗೆ ಕ್ರಮವಾಗಿ ರೂ.5000, ರೂ.3000, ಮತ್ತು ರೂ.2000 ವನ್ನು ಗೌರವಪೂರ್ವಕವಾಗಿ ಪ್ರಮಾಣ ಪತ್ರದೊಂದಿಗೆ ನೀಡಲಾಗುವುದು. ಹಾಗೆಯೇ ಎರಡು ವ್ಯಕ್ತಿಗಳಿಗೆ ರೂ. 1000 ದ ಸಮಾಧಾನಕರ ಬಹುಮಾನ ನೀಡಲಾಗುವುದು. ಭಾಗವಹಿಸಿದ ಸರ್ವರಿಗೆ ನಾಟ್ಯೋತ್ಸವದ ಗೌರವ ಪ್ರಮಾಣ ಪತ್ರ ನೀಡಲಾಗುವುದುದೆಂದು ಮಂಡಳಿಯ ಮಂಡಳಿಯ ನಿರ್ದೇಶಕರಾದ ಶ್ರೀ ಶಿವಾನಂದ ಹೆಗಡೆಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. ಈ ಸ್ಪರ್ಧೆಯಲ್ಲಿ ಹೆಚ್ಚಿನ ಯುವ ಬರಹಗಾರರು, ಕಲಾಸಕ್ತರು ಭಾಗವಹಿಸಿ ನಾಟ್ಯೋತ್ಸವದ ವ್ಯಾಪ್ತಿಯ ವಿಸ್ತರಣೆಯಲ್ಲಿ ಪಾಲ್ಗೊಳ್ಳಲು ಶ್ರೀ ಇಡಗುಂಜಿ ಮಹಾಗಣಪತಿ ಯಕ್ಷಗಾನ ಮಂಡಳಿ ಕೆರೆಮನೆ ನಿರ್ದೇಶಕರಾದ ಕೆರೆಮನೆ ಶಿವಾನಂದ ಹೆಗಡೆ ವಿನಂತಿಸಿದ್ದಾರೆ.