ಶಿರಸಿ : ರಾಜ್ಯದ ಪ್ರಸಿದ್ಧ ಶಿರಸಿಯ ಮಾರಿಕಾಂಬಾ ಜಾತ್ರೆಯ ಪ್ರಯುಕ್ತ ಶಿರಸಿ ನಗರಸಭೆಯಲ್ಲಿ ಅಧ್ಯಕ್ಷ ಪ್ರದೀಪ ಶೆಟ್ಟಿ ಅಧ್ಯಕ್ಷತೆಯಲ್ಲಿ ಶುಕ್ರವಾರ ವಿಶೇಷ ಸಭೆ ನಡೆಯಿತು. ನಗರಸಭೆ ಜಾಗವನ್ನು ದೇವಸ್ಥಾನಕ್ಕೆ ಹಸ್ತಾಂತರಿಸುವ ಕುರಿತು, ಅಂಗಡಿಗಳನ್ನು ತೆರವುಗೊಳಿಸವುದರ ಕುರಿತು ಮತ್ತು ಜಾತ್ರಾ ಪ್ರವಾಸಿಗರಿಗೆ, ಭಕ್ತಾದಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದರ ಕುರಿತು ಚರ್ಚಿಸಲಾಯಿತು.

ನಗರಸಭೆಯ ಮಾಲಿಕತ್ವದ ಜಾತ್ರಾ ಗದ್ದುಗೆ ಹಿಂಬಾಗದ ಅಂಗಡಿ/ಮುಂಗಟ್ಟುಗಳನ್ನು ಜನವರಿ 27ರೊಳಗೆ ತೆರವು ಮಾಡಿ ದೇವಸ್ಥಾನ ಸಮಿತಿಗೆ ಬಿಟ್ಟುಕೊಡುವಂತೆ ಆಯಾ ಅಂಗಡಿ ಮಾಲಿಕರಿಗೆ ಸೂಚನೆ ನೀಡಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಅಲ್ಲದೇ ನಗರಸಭೆ ಮಾಲಿಕತ್ವದ ಜಾಗವನ್ನು ಚದರ ಯಾರ್ಡ್‍ಗೆ ರು 70 ರಂತೆ ದರ ನಿಗದಿಪಡಿಸಿ ದೇವಸ್ಥಾನ ಆಡಳಿತ ಮಂಡಳಿಗೆ ಬಾಡಿಗೆಗೆ ನೀಡಲು ನಗರಸಭೆಯ ವಿಶೇಷ ಸಭೆಯಲ್ಲಿ ತೀರ್ಮಾನಿಸಲಾಯಿತು.

RELATED ARTICLES  ಕುಮಟಾದಲ್ಲಿ ಜೆಡಿಎಸ್ ಬ್ರಹತ್ ಮೆರವಣಿಗೆ : ಪ್ರದೀಪ ನಾಯಕರಿಗೆ ಜನ ಬೆಂಬಲ

ವಿಶೆಷ ಸಭೆಯ ಮೊದಲು ನಡೆದ ಬಜೆಟ್ ಪೂರ್ವ ಭಾವಿ ಸಭೆಯಲ್ಲಿ ಅಧ್ಯಕ್ಷ ಪ್ರದೀಪ ಶೆಟ್ಟಿ ಮಾತನಾಡಿ 17-18ನೇ ಸಾಲಿನಲ್ಲಿ ಆಸ್ತಿ ತೆರಿಗೆ, ಖಾತಾ ಬದಲಾವಣೆ, ತರಕಾರಿ ಮಾರುಕಟ್ಟೆ ಬಾಡಿಗೆ ಮತ್ತಿತರ ಮೂಲಗಳಿಂದ 3 ಕೋಟಿ ಆದಾಯ ಬಂದಿದ್ದು, ಎಲ್ಲಾ ನಿರ್ವಹಣೆ ಸೇರಿ 3.84 ಕೋಟಿ ಖರ್ಚಾಗಿದೆ. ಪ್ರಸಕ್ತ ಅವಧಿಯಲ್ಲಿ ವಿವಿಧ ಮೂಲಗಳಿಂದ 4.80 ಕೋಟಿ ಆದಾಯ ನಿರೀಕ್ಷಿಸಲಾಗಿದೆ ಎಂದು ತಿಳಿಸಿದರು.

RELATED ARTICLES  ಕುಮಟಾ ಬಿಜೆಪಿ ಗೆಲುವಿಗೆ ಪಣತೊಟ್ಟ ಗಜಾನನ ಗುನಗಾ

ಸದಸ್ಯ ಶ್ರೀಧರ ಮೊಗೇರ ಮಾತನಾಡಿ, ಮಾರಿಕಾಂಬಾ ಜಾತ್ರೆಯ ಸಂದರ್ಭದಲ್ಲಿ ಹೊರಗಿನಿಂದ ಬರುವ ಮಹಿಳೆಯರು ಮತ್ತು ಪುರುಷರಿಗೆ ಪ್ರತ್ಯೇಕ ಶೌಚಾಲಯ ಅಳವಡಿಸಿ ಮಾಹಿತಿ ಫಲಕ ಹಾಕಬೇಕು. ನಗರದ ದೇವಿಕೆರೆ, ಕೋಟೆಕೆರೆ ಹಾಗೂ ಇತರ ಪ್ರಮುಖ ಸ್ಥಳಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆಯನ್ನು ನಗರಸಭೆಯಿಂದ ಕಲ್ಪಿಸಬೇಕು. ಮೂಲಭೂತ ಸೌಕರ್ಯಗಳಿಗೆ ಹೆಚ್ಚಿನ ಒತ್ತನ್ನು ನೀಡಬೇಕು ಎಂದರು. ಜಾತ್ರೆಯ ವೇಳೆ ನಗರದ ಕೋಟೆಕೆರೆ ಮತ್ತು ದೇವಿಕೆರೆಯಲ್ಲಿ ಬೋಟಿಂಗ್ ನಡೆಸಲು ಅನುವು ಮಾಡಿಕೊಡುವುದಾಗಿ ಪ್ರದೀಪ ಶೆಟ್ಟಿ ತಿಳಿಸಿದರು.

ಈ ವೇಳೆ ಉಪಾಧ್ಯಕ್ಷೆ ಅರುಣಾ ವೆರ್ಣೇಕರ್, ಪೌರಾಯುಕ್ತ ಮಹೇಂದ್ರಕುಮಾರ ಉಪಸ್ಥಿತರಿದ್ದರು.