ಭಟ್ಕಳ: ಇಲ್ಲಿನ ಮಾರುಕೇರಿ ಕಿತ್ರೆಯ ಶ್ರೀ ಕ್ಷೇತ್ರ ದುರ್ಗಾಪರಮೇಶ್ವರಿ ದೇವಿ ದೇವಸ್ಥಾನದ ವರ್ಧಂತಿ ಮಹೋತ್ಸವ ಮತ್ತು ರಥೋತ್ಸವ ಕಾರ್ಯಕ್ರಮವೂ ಜ.25 ರಿಂದ 28ರ ತನಕ ನಡೆಯಲಿದ್ದು, ಈ ಅಂಗವಾಗಿ ವಿವಿಧ ಧಾರ್ಮಿಕ ಕಾರ್ಯಕ್ರಮ ಹಾಗೂ ಜ.26ರಂದು ಉಚಿತ ಬೃಹತ್ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ ಎಂದು ಹೊಸನಗರ ಶ್ರೀ ರಾಮಚಂದ್ರಾಪುರ ಮಠದ ವಲಯದ ಸಂಪರ್ಕಾಧಿಕಾರಿ ಎಮ.ಎಮ್. ಹೆಬ್ಬಾರ ತಿಳಿಸಿದರು.
ಅವರು ಸುದ್ದಿಗಾರರೊಂದಿಗೆ ಖಾಸಗಿ ಹೋಟೇಲ್‍ನಲ್ಲಿ ಏರ್ಪಡಿಸಲಾಗಿದ್ದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಜ.25ರಂದು ಬೆಳಿಗ್ಗೆ 9 ಗಂಟೆಗೆ ಗಣೇಶ ಪೂಜೆ, ದೇವತಾಪ್ರಾರ್ಥನೆ, ನಾಂದಿ ಪುಣ್ಯಾಹ, ಮಹಾಸಂಕಲ್ಪ, ಮಹಾಗಣಪತಿ ಪ್ರೀತ್ಯರ್ಥ ಅಥರ್ವಶೀರ್ಷಹವನ ಮಹಾಪೂಜೆ, ತೀರ್ಥ ಪ್ರಸಾದ ಅನ್ನ ಸಂತರ್ಪಣೆ ನಡೆಯಲಿದ್ದು, ಸಂಜೆ 5 ಗಂಟೆಗೆ ಶ್ರೀ ರಾಘವೇಶ್ವರ ಮಹಾಸ್ವಾಮಿಗಳ ಆಗಮನ, ಪೂರ್ಣಕುಂಭ ಸ್ವಾಗತ, ಧೂಳಿ ಪೂಜೆ ನಡೆಯಲಿದೆ. ಅಂದು ಸಂಜೆ ಖ್ಯಾತ ಸಿತಾವಾದಕ, ಧಾರವಾಡ ವಿಶ್ವವಿದ್ಯಾಲಯದ ಉಪನ್ಯಾಸಕ ಅರಣ್ಯಕುಮಾರ ಅವರಿಂದ ಸಿತಾರ್ ಮತ್ತು ದಿಲ್ರುಬಾ ವಾದನ ಇವರಿಗೆ ಬಾಲಚಂದ್ರ ಹೆಬ್ಬಾರ ಅವರು ತಬಲ ಸಾಥ ನೀಡಲಿದ್ದಾರೆ.
ಜ.26ರಂದು ಗಣೇಶ ಪೂಜೆ, ಪುಣ್ಯಾಹ ಶ್ರೀದೇವರಿಗೆ ಕಲಾವೃದ್ದೀಯಾದಿಹವನ, ವೀರಭದ್ರದೇವರ ಪ್ರೀತ್ಯರ್ಥ ರುದ್ರಹವನ, ಶ್ರೀದೇವರಿಗೆ ಕಲಾಭೀಶೇಕ, ಬಲಿ ರಥಸಂಪ್ರೋಕ್ಷಣೆ ಶ್ರೀ ದೇವರ ರಥಾರೋಹಣ, ಮಹಾರಥೋತ್ಸವ, ತೀರ್ಥವಿತರಣೆ ಅನ್ನಸಂತರ್ಪಣೆ ನಡೆಯಲಿದ್ದು, ಬೆಳಿಗ್ಗೆ 9 ಗಂಟೆಯಿಂದ 3 ಗಂಟೆಯವರೆಗೆ ನಾರಾಯಣ ಹೃದಯಾಲಯದ ಅಂಗಸಂಸ್ಥೆಯಾದ ಸಹ್ಯಾದ್ರಿ ನಾರಾಯಣ ಮಲ್ಟಿಸ್ಪೆಶಾಲಿಟಿ ಆಸ್ಪತ್ರೆ ಶಿವಮೊಗ್ಗ ಇವರ ವತಿಯಿಂದ ಉಚಿತ ಬೃಹತ್ ಆರೋಗ್ಯ ತಪಾಸಣೆ ಹಾಗೂ ರಕ್ತದಾನ ಶಿಬಿರ ನಡೆಯಲಿದೆ. ಸಂಜೆ ಕಲಾಧರ ಯಕ್ಷರಂಗ ಬಳಗ ಜಲವಳ್ಳಿ ಇವರಿಂದ ಕುಶ-ಲವ ಯಕ್ಷಗಾನ ಜರುಗಲಿದೆ. ಮಧ್ಯಾಹ್ನ 2.30ಕ್ಕೆ ಶ್ರೀ ರಾಘವೇಶ್ವರ ಮಹಾಸ್ವಾಮಿಗಳಿಂದ ದಿವ್ಯ ಉಪಸ್ಥಿತಿಯಲ್ಲಿ ಆರ್ಶೀವಚನ ಮತ್ತು ಅನುಗ್ರಹ ಮಂತ್ರಾಕ್ಷತೆ ನಡೆಯಲಿದೆ.
ಜ.27 ರಂದು ವಿವಿಧ ಧಾರ್ಮಿಕ ಕಾರ್ಯಕ್ರಮದ ಜೊತೆಗೆ ಸ್ಥಳಿಯ ಕಲಾವಿದರಿಂದ ಭಜನಾ ಕಾರ್ಯಕ್ರಮ ಹಾಗೂ ಶ್ರೀ ರಾಘವೇಶ್ವರ ಮಹಾಸ್ವಾಮಿಗಳಿಂದ ರಾಮಪದ ಕಾರ್ಯಕ್ರಮ ನಡೆಯಲಿದೆ.
ಜ.28ರಂದು ಶ್ರೀ ಗುರುಗಳ ಪಾದುಕಾ ಪೂಜೆ ಸೇರಿದಂತೆ ಶ್ರೀಗುರುಭೀಕ್ಷೆ ನಡೆಯಲಿದ್ದು ಎಂದು ಹೇಳಿದರು.
ಈ ಸಂಧರ್ಬದಲ್ಲಿ ಶ್ರೀ ಕ್ಷೇತ್ರ ದೇವಿಮನೆ ದೇವಸ್ಥಾನ ಆಡಳಿತ ಕಮಿಟಿ ಅಧ್ಯಕ್ಷ ಶಿವಾನಂದ ಹೆಬ್ಬಾರ, ದೇವಸ್ಥಾನ ಆಡಳಿತ ಕಮಿಟಿ ಸದಸ್ಯರು ಹಾಗೂ ಭವತಾರಿಣಿ ವಲಯದ ಪ್ರಧಾನ ಕಾರ್ಯದರ್ಶಿ ರಾಮಕೃಷ್ಣ ಹೆಬ್ಬಾರ ಮತ್ತು ವಲಯದ ಪ್ರಮುಖರು ತಬಲಾ ವಾದಕ ಬಾಲಚಂದ್ರ ಹೆಬ್ಬಾರ ಉಪಸ್ಥಿತರಿದ್ದರು.