ಕುಮಟಾ. ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆ ಗುಡಿಗಾರಗಲ್ಲಿ ಕುಮಟಾದಲ್ಲಿ ಇಂದು ರಾಷ್ಟ್ರೀಯ ಆವಿಷ್ಕಾರ ಅಭಿಯಾನ ಯೋಜನೆ 2017-2018ರ ಅಡಿಯಲ್ಲಿ ಶಾಲೆಯಲ್ಲಿ ಮಕ್ಕಳಿಂದ ಮಾಡಿದ ವಿಜ್ಞಾನ ವಸ್ತುಪ್ರದರ್ಶನ ಕಾರ್ಯಕ್ರಮಗಳನ್ನು ಹಮ್ಮಿಕೊಂಳ್ಳಲಾಗಿತ್ತು.

ವಿಜ್ಞಾನ ವಸ್ತು ಪ್ರದರ್ಶನಕ್ಕೆ ಉದ್ಘಾಟನೆಯನ್ನು ಕುಮಟಾ ಠಾಣೆ ಪಿ.ಎಸ್.ಐ ಸಂಪತ್ ಕುಮಾರ ಅವರು ದೀಪಬೆಳಗಿಸುವ ಮೂಲಕ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.

RELATED ARTICLES  ವಿದ್ಯಾರ್ಥಿಗಳಿಗೆ ಸಮವಸ್ತ್ರ ವಿತರಣೆ ಹಾಗೂ ವಿಶೇಷ ಚೇತನ ವಿದ್ಯಾರ್ಥಿಗಳಿಗೆ ಸಲಕರಣೆ ವಿತರಣೆ

ಈ ಸಂದರ್ಭದಲ್ಲಿ ಮಾತನಾಡಿದ ಪಿ.ಎಸ್.ಐ ಸಂಪತ್ ಕುಮಾರ ಈಗಿನ ಕಾಲದ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯಗಳು ಹಾಗೂ ಸೌಕರ್ಯಗಳನ್ನು ಮಾಡಿಕೊಡಲಾಗುತ್ತದೆ.ಎನ್ನುತ್ತ ಹಿಂದಿನ ಹಾಗೂ ಇಂದಿನ ಶಿಕ್ಷಣದ ಬಗ್ಗೆ ಮಾತನಾಡಿದರು.

RELATED ARTICLES  ತೋಟದ ಬಳಿ ಮೇಯುತ್ತಿದ್ದ ದನವನ್ನು ಕೊಂದು ತಿಂದ ಹುಲಿ : ಜನರಲ್ಲಿ ಆತಂಕ

ಶಿಕ್ಷಕ ಎಂ.ಎಂ ನಾಯ್ಕ ಮಾತನಾಡಿ ಶಾಲೆಗೆ ಒಂದು ಸಭಾಭನದ ಅಗತ್ಯ ಇದ್ದು ಅವುಗಳ ಕಡೆ ಇಲಾಖೆ ಗಮನ ನೀಡಿ ನಮಗೆ ಸಹಕರಿಸಬೇಕು ಎಂದರು.

ಈ ಸಂದರ್ಭದಲ್ಲಿ ಮುಖ್ಯಶಿಕ್ಷಕ ದತ್ತಾತ್ರಯ ಭಟ್ಟ, ಶಾಲಾ ಎಸ್.ಡಿ.ಎಮ್.ಸಿ.ಸದಸ್ಯರು ಹಾಗೂ ಶಿಕ್ಷಕರು ಹಾಗೂ ಮಕ್ಕಳ ಪಾಲಕರು ಭಾಗವಹಿಸಿದರು