ಕುಮಟಾ: ಶ್ರೀ ಮಹಾಗಣಪತಿ ಕ್ರೀಡಾ ಬಳಗ ದಿವಳ್ಳಿ. ಹಾಗೂ ಊರ ನಾಗರಿಕರ ಸಂಯುಕ್ತ ಆಶ್ರಯದಲ್ಲಿ ಜಿಲ್ಲಾ ಮಟ್ಟದ ಹಾಲಕ್ಕಿ ಸಮಾಜದ 4 ನೇ ವರ್ಷದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯು ಶ್ರೀ ದುರ್ಗಾ ಪgಮೇಶ್ವರಿ ದೇವಸ್ಥಾನದ ಆವರಣದಲ್ಲಿ ದಿನಾಂಕ 19/01/2018 ರಂದು ಜರುಗಿತು.

ಈ ಕಾರ್ಯಕ್ರಮವನ್ನು ಮಾಜಿ ಶಾಸಕ ದಿನಕರ ಶೆಟ್ಟಿ ಅವರು ಉದ್ಘಾಟಿಸಿ ಮಾತಾಡಿದ ಅವರು ಕ್ರೀಡೆಗಳು ಮಾನವನ ಜೀವನದ ಅವಿಭಾಜ್ಯ ಅಂಗವಾಗಿದೆ. ಮತ್ತು ಮಾನವನ ದೈಹಿಕ, ಮಾನಸಿಕ ಉನ್ನತೀಕರಣಕ್ಕೆ ಕಾರಣವಾಗಿದೆ. ಮನರಂಜನಾ ಕಾರ್ಯಕ್ರಮಗಳೊಂದಿಗೆ ಇಂತಹ ಕ್ರೀಡಾ ಚಟುವಟಿಕೆಗಳು ಕೂಡಾ ಹೆಚ್ಚೆಚ್ಚು ಜರುಗಲಿ ಎಂದು ಶುಭ ಹಾರೈಸಿದರು.

IMG 20180120 WA0025

ಟ್ರೋಫಿ ಅನಾವರಣಗೊಳಿಸಿ ಸನ್ಮಾನ ಕಾರ್ಯಕ್ರಮವನ್ನು ನೆರವೇರಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಮನುಷ್ಯನಿಗೆ ಶಿಕ್ಷಣದಷ್ಟೇ ಮನರಂಜನೆ ಹಾಗೂ ಕ್ರೀಡೆಗಳು ಕೂಡಾ ಅಷ್ಟೇ ಅಗತ್ಯವಾಗಿದೆ. ಮನರಂಜನಾ ಕಾರ್ಯಕ್ರಮಗಳು ಮನಸ್ಸಿಗೆ ಸಂತೋಷವನ್ನು ನೀಡಿದರೆ ಕ್ರೀಡೆಗಳು ಮನರಂಜನೆಯೊಂದಿಗೆ ದೈಹಿಕ ಮತ್ತು ಮಾನಸಿಕ ಸ್ಥಿತಿಯನ್ನು ಉನ್ನತೀಕರಿಸುತ್ತದೆ. ಯಾಂತ್ರಿಕ ಬದುಕಿನಲ್ಲಿ ನಮ್ಮ ಆರೋಗ್ಯವನ್ನು ಕೂಡಾ ಕಡೆಗಣಿಸುವಂತಾಗಿದೆ. ಇಂತಹ ಯಾಂತ್ರಿಕ ಒತ್ತಡಮಯ ಬದುಕಿನಿಂದ ಹೊರಬಂದು ಕ್ರೀಡೆ ಹಾಗೂ ಇಂತಹ ಮನರಂಜನಾ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ಹಾಲಕ್ಕಿ ಸಮಾಜ ಬಾಂಧವರಲ್ಲಿ ಸಂಘಟನಾ ಮನೋಭಾವನೆ ಕಂಡುಬರುತ್ತಿರುವುದು ಸಂತಸದಾಯಕವಾಗಿದೆ. ಸಂಘmನೆಯಿಂದ ಮಾತ್ರವೇ ನಮ್ಮ ಸಮಾಜ ಮುಂದುವರಿಯಲು ಸಾಧ್ಯ. ಈ ವೇದಿಕೆಯಲ್ಲಿ ನಾಟಿ ವೈದ್ಯರನ್ನು ಸನ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಸಮಾಜದಲ್ಲಿನ ಪ್ರತಿಭಾವಂತರನ್ನು, ವಿದ್ಯಾರ್ಥಿಗಳನ್ನು ಮತ್ತು ಸಾಧಕರನ್ನು ಕೂಡಾ ಸನ್ಮಾನಿಸುವಂತಾಗಬೇಕು. ಆಗ ಅವರಲ್ಲಿ ಇನ್ನೂ ಹೆಚ್ಚಿನ ಉತ್ಸಾಹ ಉಂಟಾಗುತ್ತದೆ. ಕಳೆದ ಬಾರಿ ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದು ಈ ಕಾರ್ಯಕ್ರಮಕ್ಕೆ ಆಗಮಿಸಿದ್ದು ಮುಂದಿನ ವರ್ಷದಲ್ಲೂ ಈ ಕಾರ್ಯಕ್ರಮದಲ್ಲಿ ಭಾಗವಹಿಸುವ ಆಶಯವನ್ನು ಹೊಂದಿರುವುದಾಗಿ ವ್ಯಕ್ತಪಡಿಸಿ ಕಾರ್ಯಕ್ರಮದ ಸಂಘಟಕರನ್ನು ಶ್ಲಾಘಿಸಿದರು.

RELATED ARTICLES  ಅಂಜುಮಾನ್ ತಾಂತ್ರಿಕ ಮಹಾವಿದ್ಯಾಲಯ ಭಟ್ಕಳದಲ್ಲಿ ನ್ಯಾಯವಾದಿ 2023 ಕಾರ್ಯಕ್ರಮ.

ಅಂಕಣ ಉದ್ಭಾಟಿಸಿದ ರವಿಕುಮಾರ ಶೆಟ್ಟಿ ಅವರು ಮಾತನಾಡಿ ಎಲ್ಲಾ ತಂಡಗಳು ಸ್ಪರ್ಧಾ ಮನೋಭಾವನೆಯೊಂದಿಗೆ ಕ್ರೀಡೆಯಲ್ಲಿ ಪಾಲ್ಗೊಳ್ಳಬೇಕೆಂದು ತಂಡಗಳಿಗೆ ಶುಭ ಹಾರೈಸಿದರು.

RELATED ARTICLES  ಗ್ರಾಮ ಒಕ್ಕಲು ಯುವ ಬಳಗದಿಂದ ಆರ್ಥಿಕ ಸಹಾಯ

ಇದೇ ವೇದಿಕೆಯಲ್ಲಿ ನಾಟಿವೈದ್ಯ ಹುಲಿಯಪ್ಪ ಸುಗ್ಗಿ ಗೌಡ, ಹಟ್ಟಿಕೇರಿ ಇವರನ್ನು ಸನ್ಮಾನಿಸಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತದ ಉಪಾಧ್ಯಕ್ಷೆ ಶೈಲಾ ಜೆ. ಗೌಡ, ವಿಷ್ಣು ಸುಕ್ರು ಪಟಗಾರ, ಮುಕುಂದ ನಾಯ್ಕ, ದಾಮೋದರ ಗೌಡ, ವಿನಾಯಕ ವಿ. ಭಟ್ಟ, ಜೋಗಿ ಜಟ್ಟು ಗೌಡ, ತಿಮ್ಮು ಹನುಮಂತ ಗೌಡ, ಪ್ರಭಾಕರ ಆವಾರಿ ದಿವಳ್ಳಿ ಮುಂತಾದವರು ಉಪಸ್ಥಿತರಿದ್ದರು.