ಕುಮಟಾ : ಶ್ರೀ ಚೌಡೇಶ್ವರಿ ಕ್ರೀಡಾ ಬಳಗ ಬರ್ಗಿ, ಗ್ರಾಮ ಪಂಚಾಯತ ಬರ್ಗಿ ಹಾಗೂ ಊರ ನಾಗರಿಕರ ಸಹಕಾರದೊಂದಿಗೆ 9 ನೇ ವಲಯ ಮಟ್ಟದ ಆಹ್ವಾನಿತ ಹೊನಲು ಬೆಳಕಿನ ಧೀರು ಟ್ರೋಪಿ ಎಂಬ ವಾಲಿಬಾಲ್ ಪಂದ್ಯಾವಳಿ ಫಟಬೀರ ದೇವಸ್ಥಾನದ ಹತ್ತಿರ ಜರುಗಿತು.

ಈ ಕಾರ್ಯಕ್ರಮವನ್ನು ಮಾಜಿ ಶಾಸಕ ದಿನಕರ ಶೆಟ್ಟಿ ಅವರು ಉದ್ಭಾಟಿಸಿದರು ನಂತರ ಮಾತಾಡಿದ ಅವರು ಆಧುನಿಕ ಜಗತ್ತಿನಲ್ಲಿ ಮನುಷ್ಯ ಒತ್ತಡಮಯ ಜೀವನ ನಡೆಸುತ್ತಿರುವರಿಂದ ಅನೇಕ ರೀತಿಯ ಆರೋಗ್ಯ ಸಮಸ್ಯೆಗಳು ಕಾಡುತ್ತಿದೆ. ಕ್ರೀಡೆಗಳಲ್ಲಿ ತೊಡಗಿಸಿಕೊಳ್ಳುವುದರಿಂದ ಉತ್ತಮ ಆರೋಗ್ಯ ಹೊಂದಲು ಸಾಧ್ಯ ಎಂದರು.

ಕ್ರೀಡಾಂಗಣವನ್ನು ಉದ್ಧಾಟಿಸಿದ ಜಿಲ್ಲಾ ಪಂಚಾಯತ್ ಸದಸ್ಯ ಪ್ರದೀಪ ನಾಯಕ ದೇವರ ಬಾವಿ ಅವರು ಮಾತನಾಡಿ ನಮ್ಮ ಸುತ್ತಮುತ್ತಲು ಅನೇಕ ಉತ್ತಮ ಕ್ರೀಡಾಪಟುಗಳಿದ್ದರೂ ಅವರ ಕ್ರೀಡಾ ಪ್ರತಿಭೆ ಹೊರ ಬರಲು ಸೂಕ್ತ ವೇದಿಕೆ ಇಲ್ಲದ ಅವರು ಅವಕಾಶಗಳಿಂದ ವಂಚಿತರಾಗುತ್ತಾರೆ.ಆದರೆ ಇಂತಹ ಕ್ರೀಡಾ ಚಟುವಟಿಕೆಗಳು ಜರುಗಿದಾಗ ಅಂತಹ ಪ್ರತಿಭಾವಂತ ಕ್ರೀಡಾಪಟುಗಳಿಗೆ ಸ್ತೂಕ ವೇದಿಕೆ ದೊರೆಯುತ್ತದೆ ಎಂದರು ದ್ವಿತೀಯ ಬಹುಮಾನ ಪ್ರಯೋಜಕತ್ವವನ್ನು ವಹಿಸಿದ ವಿಶೇಷ ಆಹ್ವಾನಿತರಾಗಿ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಮನುಷ್ಯನಿಗೆ ಎಲ್ಲಾ ಬಾಗ್ಯಗಳಲ್ಲಿ ಆರೋಗ್ಯಭಾಗ್ಯವೇ ಶ್ರೇಷ್ಠವಾದದ್ದು. ಏನನ್ನಾದರೂ ಸಾಧನೆಗೈಯಲು ಮೊದಲು ನಾವು ಆರೋಗ್ಯವಂತರಾಗಿರಬೇಕು. ಕ್ರೀಡೆಗಳು ನಮ್ಮ ಶರೀರಕ್ಕೆ ವ್ಯಾಯಾಮ ನೀಡುವುದರೊಂದಿಗೆ ದೈಹಿಕ ಹಾಗೂ ಮಾನಸಿಕ ಸದೃಢತೆಯನ್ನು ಒದಗಿಸುತ್ತವೆ. ಕ್ರೀಡೆಗಳು ಮನರಂಜನೆಯನ್ನು ಕೂಡಾ ಒದಗಿಸುತ್ತವೆ. ಸ್ಪರ್ಧಾಳುಗಳು ಆರೋಗ್ಯಕರವಾದ ಸ್ಪರ್ಧಾ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಶ್ರೀ ಚೌಡೇಶ್ವರಿ ಕ್ರೀಡಾ ಬಳಗದವರು ಊರ ನಾಗರಿಕರ ಸಹಕಾರದೊಂದಿಗೆ ಕಳೆದ 9 ವರ್ಷಗಳಿಂದ ನಿರಂತರವಾಗಿ ಇಂತಹ ಕಾರ್ಯಕ್ರಮವನ್ನು ಆಯೋಜಿಸುತ್ತಿರುವುದು ನಿಜಕ್ಕೂ ಅವರ ಕ್ರೀಡಾಪ್ರೇಮವನ್ನು ಮೆಚ್ಚುವಂತಾಗಿದೆ. ಮುಂದಿನ ದಿನಗಳಲ್ಲೂ ಇಂತಹ ಕಾರ್ಯಕ್ರಮಗಳು ಹೆಚ್ಚೆಚ್ಚು ಜರುಗಲಿ ಇದಕ್ಕೆ ತಮ್ಮ ಸಹಾಯ, ಸಹಕಾರ ಸದಾ ಇರಲಿದೆ ಎಂದು ನುಡಿದರು.

RELATED ARTICLES  ನಾಗಾಂಜಲಿ ನಾಯ್ಕ ಮನೆಗೆ ಭೇಟಿ ನೀಡಿ ಸನ್ಮಾನಿಸಿದ ಕೇಂದ್ರ ಮಂತ್ರಿ ಅನಂತಕುಮಾರ ಹೆಗಡೆ.

ಬರ್ಗಿ ಗ್ರಾಮ ಪಂಚಾಯತದ ಅಧ್ಯಕ್ಷರಾದ ರಾಮಾ ಕೆ. ಪಟಗಾರ ಅವರು ಕಾರ್ಯಕ್ರಮದಲ್ಲಿ ಅಧ್ಯಕ್ಷೀಯ ಭಾಷಣ ಮಾಡಿದರು.

ಈ ಸಂದರ್ಭದಲ್ಲಿ ಜಿ.ಪಂ.ಸದಸ್ಯ ಕೃಷ್ಣ ಜೆ. ಗೌಡ, ಸೂರಜ ನಾಯ್ಕ ಸೋನಿ, ತಾ.ಪಂ.ಸದಸ್ಯ ಭಾಸ್ಕರ ಕೆ. ಪಟಗಾರ ಸೇರಿದಂತೆ ಹಲ;ವರು ಉಪಸ್ಥಿತರಿದ್ದರು.

RELATED ARTICLES  ಪರಿವರ್ತನಾ ಯಾತ್ರೆಯ ಪ್ರಚಾರಕ್ಕೆ ಕಾರನ್ನು ವಿಶೇಷವಾಗಿ ಮಾರ್ಪಡಿಸಿಕೊಂಡ ಸೂರಜ್ ನಾಯ್ಕ ಸೋನಿ.