ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕುಂದರಗಿಯ ಸತತ ಎರಡನೇ ವರ್ಷದ ವಿದ್ಯಾ ಸಿರಿ ಶಾಲಾ ಶೈಕ್ಷಣಿಕ ಹಬ್ಬ ಭಾಗ ೨ ಇದರ ಕಾರ್ಯಕ್ರಮ ಸಂಪನ್ನವಾಯಿತು. ವಿಜ್ಞಾನ ವಸ್ತು ಪ್ರದರ್ಶನ ರಂಗೋಲಿ ವಿಕ್ಷಣೆಯನ್ನು ಅತಿಥಿಗಳು ಕಣ್ತುಂಬಿಕೊಂಡರು ಸಭಾ ಕಾರ್ಯಕ್ರಮ ಶೈಕ್ಷಣಿಕ ಹಬ್ಬದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯ ಎಸ್ ವಿ ಸಂಕನೂರು ಉದ್ಘಾಟಿಸಿದರು ಅಧ್ಯಕ್ಷತೆನ್ನು ಶ್ರಿ ಎನ್ ಎಸ್ ಹೆಗಡೆ ಕುಂದರಗಿ ವಹಿಸಿದರು.ಕುಂದಣ ವಿಶೇಷಾಂಕವನ್ನು ಎಲ್ .ಟಿ ಪಾಟೀಲ್ ಅನಾವರಣ ಗೊಳಿಸಿದರು .
ಅದೇ ರೀತಿ ಮಕ್ಕಳಿಂದ ನಿರ್ಮಾಣವಾದ ಹಸ್ತ ಪತ್ರಿಕೆಯನ್ನು ಶ್ರೀಮತಿ ರೂಪಾ ಬೂರ್ಮನೆ ಬಿಡುಗಡೆ ಗೊಳಿಸಿದರು.ಉದ್ಘಾಟಕರದಾ ಎಸ್.ವಿ.ಸಂಕೂನೂರು ವಿದ್ಯೆಯಿಂದ ಅಧಿಕಾರ ಎಲ್ಲವನ್ನು ಪಡೆದೂಕೊಳ್ಳಬಹುದು.ಅಧಿಕಾರ ಐಶ್ವರ್ಯ ಇವತ್ತು ಹೊಗತದೆ ನಾಳೆ ಬರತದೆ ಆದರೆ ವಿದ್ಯೆ ನಾವು ಭೂಮಿ ಮೇಲೆ ಇರುವವರೆಗೆ ನಮ್ಮ ಜೊತೆಯಲ್ಲಿರುತ್ತದೆ.ಮಕ್ಕಳಿಗೆ ಹಾಗೂ ಪೋಷಕರಿಗೆ ಶಿಕ್ಷಕರಿಗೆ ಕಿವಿ ಮಾತು ಸಲಹೆ ಸೂಚನೆ ಸಹಾಯದ ಬಗ್ಗೆ ಮಾತನಾಡಿಇಲ್ಲಿನ ಎಸ್ ಡಿ ಎಮ್ ಸಿ ಸದಸ್ಯರು ಹಲ ಸರ್ಕಾರಿ ಕನ್ನಡ ಶಾಲೆಯಲ್ಲಿ ಈ ರೀತಿ ಕಾರ್ಯಕ್ರಮ ಸಂಯೋಜನೆ ಮಾಡಿರುವುದು ನಾನು ನೋಡಿರಲಿಲ್ಲ ಎಂದರು.
ಅಧ್ಯಕ್ಷರಾದ ಏನ್ ಎಸ್ ಹೆಗಡೆ ಈ ಒಂದು ಕುಂದರಗಿ ಶಾಲೆ ನಾವು ಯಾವ ರೀತಿಯಲ್ಲಿ ಇಲ್ಲಿ ಸ್ಥಾಪಿಸಿದ್ದೆವೆ ಎಂದ ಹಳೆ ಇತಿಹಾಸವನ್ನು ಬಿಚ್ಚಿಟ್ಟರು.ಡಾ ಜಿ.ಎಲ್ ಹೆಗಡೆ
ಶಿಕ್ಷಣದ ಮಹತ್ವ ಹಾಗೂ ಈಗೀನ ಶಿಕ್ಷಣದ ಪದ್ದತಿ ಹಾಗೂ ಪೋಷಕರು ಹೇಗೆ ಮಕ್ಕಳನ್ನು ಬೆಳೆಸಬೇಕೆಂದರು.
ಸಂಸ್ಥಾಪಕರಾದಂತ ಎನ್ ಎಸ್ ಹೆಗಡೆ ಕುಂದರಗಿ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆ ಗೈದವರಾದಂತ ಸದಾಶಿವ ಗೌಡರ್ ನಿವೃತ್ತ ಪೋಸ್ಟ ಮಾಸ್ಟರ್ ,ನಾಸು ಭರತನಹಳ್ಳಿ ಸಾಹಿತ್ಯ ಕ್ಷೇತ್ರ ಹಾಗೂ ಆರ್ ವಿ ಹೆಗಡೆ ಕೊಟ್ಟಳ್ಳಿ ಶಿಕ್ಷಣ , ಸಹಾಕಾರಿ ಕ್ಷೇತ್ರ ಇವರಿಗಳಿಗೆ ಹಾಗೂ ಇದೇ ಶಾಲೆಯಲ್ಲಿ ಕಲಿತ ಹಳೆಯ ವಿದ್ಯಾರ್ಥಿಗಳಾದ ಉಮೇಶ್ ಗೌಡ ಆರ್ಮಿ ,ಎಮ್ ಎಸ್ ದೇವಡಿಗ ಶಿಕ್ಷಣ ಕ್ಷೇತ್ರ.ಲಕ್ಮಣ ಡಿ ಭಟ್ ಬ್ಯಾಕಿಂಗ್ ಇದೇ ವೇದಿಕೆಯಲ್ಲಿ ಎಮ್ ಟಿ ಪಟಗಾರ ಹಳೆಯ ವಿದ್ಯಾರ್ಥಿ ತಾ.ಪಂ ಸದಸ್ಯರಾದಂತ ಮಂಗಲಾ ನಾಯ್ಕ ,ನಟರಾಜ್ ಗೌಡರ್ ,ಎಪಿ ಎಮ್ ಸಿ ಸದಸ್ಯರಾದ ಹೇರಂಭ ಪಿ ಹೆಗಡೆ ಕುಂದರಗಿ ಗ್ರಾ ಪಂ ಅಧ್ಯಕ್ಷರು ಸರ್ವ ಸದಸ್ಯರು ಅಧಿಕಾರಿಗಳು ಪಾಲ್ಗೊಂಡಿದ್ದರು.ಪ್ರಾಸ್ತಾವಿಕ ಹಾಗೂ ಸ್ವಾಗತವನ್ನು ಎಸ್ ಡಿ ಎಮ್ ಸಿ ಅಧ್ಯಕ್ಷರಾದ ಸತ್ಯನಾರಾಯಣ ಹೆಗಡೆ ಮಾಡಿದರು.ಪ್ರೇಮಾವತಿ ಟೀಚರ್ ವರದಿ ವಾಚನ ಮಾಡಿದರು.ಪುಷ್ಪಾ ಮೋಗೇರ ಹಾಗೂ ಮಂಜುನಾಥ ಭಟ್ ನಿರ್ವಹಣೆ ಮಾಡಿದರು.
ಮದ್ಯಾಹ್ನ ೩.೩೦ ರಿಂದ ವಿವಿಧ ಸ್ಪರ್ದೆಗಳಲ್ಲಿ ಭಾಗವಹಿಸಿ ಗೆದ್ದಂತ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರವನ್ನು ಗ್ರಾ.ಪಂ ಎಲ್ಲ ಸದಸ್ಯರು . ಎಸ್ ಡಿ ಎಂ ಅಧ್ಯಕ್ಷರು ಸದಸ್ಯರು ಸಿ ಆರ್ ಪಿ ನೀಡಿದರು.ನಂತರ ಸುರೇಂದ್ರ ಪಾಲನಕರ್ ಹುಬ್ಬಳ್ಳಿ ಇವರಿಂದ ಮಕ್ಕಳೆಲ್ಲರು ನಿಬ್ಬೆರಾಗುವಂತೆ ಜಾದೂ ಪ್ರದರ್ಶನ ಮಾಡಿದರು. ಎಳನೇ ತರಗತಿಯ ಮಕ್ಕಳಿಗಾಗಿ ವಿಶೇಷ ಮಾತೃಪಿತೃ ಪೂಜನ ಮಾಡಿಸಲಾಯಿತು.೬ ಘಂಟೆಯಿಂದ ಮಕ್ಕಳ ಸಾಂಸ್ಕ್ರತಿಕ ಕಾರ್ಯಕ್ರಮ ಎಲ್ಲರು ಹುಚ್ವೆದ್ದು ಕುಣಿಯುವಂತೆ ಮಾಡಿತು.೮.೩೦ ಕ್ಕೆ ಒಂದೆ ವೇದಿಕೆಯಲ್ಲಿ ಭರತ ಕಡಬಾಳ ದಾರದಿಂದ ಗಣಪತಿ,ಕೃಷ್ಣ,ಶಾರದೆ,ಅರಧನಾರೀಶ್ವರ ಚಿತ್ರವು ಮೂಡುವುದರ ಜೊತೆಗೆ ಸುಪ್ರಿಯಾ ಹೆಗಡೆ ಇವರಿಂದ ಸುಶ್ರಾವ್ಯ ಸುಗಮ ಸಂಗೀತ ಕೇಳಿಬಂತು.
ರಾತ್ರಿ 10 ಘಂಟೆಗೆ ಪೂರ್ಣಚಂದ್ರ ಯಕ್ಷಗಾನ ಮಂಡಳಿ ಕೊಂಡದಕುಳಿ ತಂಡದವರಿಂದ ಅಪರೂಪದ ಆಖ್ಯಾನ “ಕರ್ಣ ಪರ್ವ” ಭಾಗವತರಾಗಿ ಕೇಶವ ಹೆಗಡೆ ಕೊಳಗಿ,ಪ್ರಸನ್ನ ಭಟ್ ಬಾಳಕಲ್ ,ಮೃದಂಗ ಶ್ರೀ ಗಜಾನನ ಭಂಡಾರಿ ,ಚಂಡೆ ಶ್ರೀ ಲಕ್ಷ್ಮೀ ನಾರಯಣ,
ಪಾತ್ರದಲ್ಲಿ ಕರ್ಣ ಪಾತ್ರಧಾರಿಯಾಗಿ ರಾಮಚಂದ್ರ ಹೆಗಡೆ ಕೊಂಡದಕುಳಿ ಕೃಷ್ಣನಾಗಿ ಶ್ರೀ ಗೋಪಾಲ ಆಚಾರಿ ತೀರ್ಥಳ್ಳಿ,ಅರ್ಜುನನಾಗಿ ಸುಬ್ರಹ್ಮಣ್ಯ ಮೂರುರು ,ಶಲ್ಯ ಶ್ರೀ ಸಂಜಯ ಬಿಳಿಯೂರು,ಕೌರವ ಶ್ರೀ ನಾಗೇಶ ಗೌಡ ಕೂಳಿಯುರು ,ಧರ್ಮಸೇನ ಶ್ರೀ ಮಾರುತಿ ನಾಯ್ಕ ಬೈಲಮನೆ,ಬ್ರಾಹ್ಮಣನಾಗಿ ಶ್ರೀಧರ್ ಹೆಗಡೆ ಚಪ್ಪರಮನೆ ,ವೇಷ ಭೂಷಣ ಲಕ್ಷ್ಮಣ ನಾಯ್ಕ ಮಂಕಿ ನೆರದಿದಿದ್ದ ಯಕ್ಷಭಿಮಾನಿಗಳಿಗರೆ ಯಕ್ಷ ರಸಕಾವ್ಯವನ್ನು ಊಣಬಡಿಸಿ ಚಪ್ಪಾಳೆ ಮೂಲಕ ಪ್ರೋತ್ಸಾಹಿಸಿದರು.
ಕಲಾವಿದರಿಗೆ ಎಸ್ ಡಿ ಎಂ ಅಧ್ಯಕ್ಷರ ಸಂಯೋಜರಾದ ಸತೀಶ ಹೆಗಡೆ ಕುಂದರಗಿ ಹಾಗೂ ಸಂಘಟಕರು ವೇದ ಮೂರ್ತಿ,ಯಕ್ಷಪ್ರೇಮಿ,ಯಕ್ಷಕಲಾವಿದರಾದ ಪದ್ಮನಾಭ ಭಟ್ ಗೌರವ ಕಾಣಿಕೆ ನೀಡಿ ಸನ್ಮಾನಿಸಿದರು.