ಶಿರಸಿ : ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಹಾಗೂ ಉತ್ತರ ಕನ್ನಡ ಜಿಲ್ಲಾ ಕೊಂಕಣಿ ಪರಿಷತ್ ಅವರ ಸಂಯುಕ್ತ ಆಶ್ರಯದಲ್ಲಿ ಇಲ್ಲಿನ ಮಹಾವಿಷ್ಣು ದೇವಾಲಯದ ದ್ವಾರಕಾನಾಥ ಸಭಾಭವನದಲ್ಲಿ ನಡೆಯುತ್ತಿರುವ ಎರಡು ದಿನಗಳ ಕೊಂಕಣಿ ಗೀತ ಗಾಯನ ತರಬೇತಿ ಶಿಬಿರ ಕಾರ್ಯಕ್ರಮಕ್ಕೆ ಶನಿವಾರ ಚಾಲನೆ ದೊರಕಿತು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ರೋಟರಿ ಚಾರಿಟೇಬಲ್ ಟ್ರಸ್ಟ್ ಅಧ್ಯಕ್ಷ ಲಕ್ಷ್ಮೀದಾಸ ಕಾಸರಗೋಡ ” ಕೊಂಕಣಿ ಭಾಷೆಯ ಅಭಿವೃದ್ಧಿಗೆ ನಾವೆಲ್ಲರೂ ಶ್ರಮಿಸಬೇಕು. ಸರ್ಕಾರ ಕನ್ನಡ ಭಾಷೆಗೆ ಆದ್ಯತೆ ನೀಡುತ್ತಾ ಬಂದಿದೆ.‌ಅದರಂತೆ ಕೊಂಕಣಿ ಭಾಷೆಗೂ ಹೆಚ್ಚಿನ ಆದ್ಯತೆ ಸಿಗಬೇಕು. ಈಗಾಗಲೇ ಕೊಂಕಣಿ ಅಕಾಡೆಮಿಯ ಸ್ಥಾಪನೆಯಾಗಿದೆ. ಅದರ ಮುಖೇನ ನಮ್ಮಲ್ಲಿನ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ ಕೆಲಸ ಆಗಬೇಕು ” ಎಂದರು.

RELATED ARTICLES  ಸಾಧಕ ವೆಂಕಟೇಶ್ ನಾರಾಯಣ ಪ್ರಭು ರವರನ್ನು ಸನ್ಮಾನಿಸಿದ ಶಾಸಕರು.

ಸಾಹಿತಿ ಶ್ಯಾಮ ಕೃಷ್ಣ ರಾವ್ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿ ತರಬೇತಿ ಎನ್ನುವುದು ಎಲ್ಲಾ ಕಲಿಕೆಗೂ ಅಗತ್ಯವಿದೆ. ಸೈಕಲ್ ಹೊಡೆಯುವುದನ್ನು ಕಲಿಯುವಾಗಲೂ ತರಬೇತಿಯನ್ನು ನೀಡುತ್ತಾರೆ. ತರಬೇತಿಯಿಂದ ಶಿಸ್ತು ಬರುತ್ತದೆ ಎಂದ ಅವರು, ಭಾರತ ಸರ್ಕಾರ ಮಾನ್ಯತೆ ನೀಡಿದ ಲಿಪಿ ಕೊಂಕಣಿಯಾಗಿದೆ. ಆದರೆ ಕೊಂಕಣಿಗರು ಬೇರೆ ಬೇರೆ ಕಡೆಗಳಲ್ಲಿ ಹಂಚಿಹೋದ ಕಾರಣ ಅಲ್ಲಿಯ ಸ್ಥಾನಿಕ ಭಾಷೆಗಳನ್ನು ಬರವಣಿಗೆಗೆ ಬಳಸಿಕೊಂಡಿದ್ದಾರೆ. ಆದರೆ ಕೊಂಕಣಿಯ ಲಿಪಿ ದೇವನಾರ್ ಲಿಪಿಯಾಗಿದೆ. ನಾವು ಅದನ್ನು ಸಾಹಿತ್ಯಿಕವಾಗಿ ಬಳಸಬೇಕು ಎಂದರು.

RELATED ARTICLES  ಸೇತುವೆಯ ಕೆಳಗೆ ಉರುಳಿದ ಕಾರು : ಹೊನ್ನಾವರದ ಹಡಿನಬಾಳ ಸಮೀಪ ಓರ್ವನ ದುರ್ಮರಣ

ಕೊಂಕಣಿ ಗೀತ ಗಾಯ ಶಿಬಿರದಲ್ಲಿ ಜಿಲ್ಲೆಯ ವಿವಿಧ ತಾಲೂಕುಗಳಿಂದ ಸುಮಾದು ೬೦ ಸಂಗೀತಾಸಕ್ತರು ಭಾಗವಹಿಸಿದ್ದಾರೆ.

ಈ ಸಂದರ್ಭದಲ್ಲಿ ಪ್ರಮುಖರಾದ ಉಲ್ಲಾಸ ಪ್ರಭು, ವಿಷ್ಣುದಾಸ ಕಾಸರಗೋಡ, ಶೈಲಜಾ ಮಂಗಳೂರಕರ್ ಮುಂತಾದವರು ಇದ್ದರು.