ಸಾಂದರ್ಭಿಕ ಚಿತ್ರ.

ದಾಂಡೇಲಿ : ವಿವೇಕಾನಂದ ಜಯಂತಿ ಪ್ರಯುಕ್ತ ನಗರದ ಭಜರಂಗದಳ ಘಟಕದ ಆಶ್ರಯದಲ್ಲಿ ಇಂದು ಮಧ್ಯಾಹ್ನ 3.30 ಗಂಟೆಗೆ ಹಳೆ ನಗರಸಭೆ ಮೈದಾನದಿಂದ ಬಂಗೂರನಗರ ಡಿಲಕ್ಸ್ ಮೈದಾನವರೆಗೆ ಬೈಕ್ ರ್ಯಾಲಿಯನ್ನು ಹಮ್ಮಿಕೊಳ್ಳಲಾಗಿದೆ.
ಡಿಲಕ್ಸ್ ಮೈದಾನದಲ್ಲಿ ಸಂಜೆ ಸಭಾ ಕಾರ್ಯಕ್ರಮ ನಡೆಯಲಿದ್ದು, ಸಚಿಜೆ 6 ಗಂಟೆಯಿಂದ ಉಡುಪಿಯ ಯುವ ವಾಗ್ಮಿ ಮತ್ತು ಚಿಂತಕರಾದ ಚೈತ್ರಾ ಕುಂದಾಪುರ ದಿಕ್ಸೂಚಿ ಭಾಷಣವನ್ನು ನೀಡಲಿದ್ದಾರೆ. ಅತಿಥಿಗಳಾಗಿ ಗ್ರಾಮ ವಿಕಾಸ ಪ್ರಾಂತ ಸಂಚಾಲಕರಾದ ರಾಜಶೇಖರ ಭಾಗವಹಿಸಲಿದ್ದು, ಈ

RELATED ARTICLES  ಹವ್ಯಕರ ಸಮ್ಮಿಲನದೊಂದಿಗೆ ‘ಸಹ್ಯಾದ್ರಿ ಸಂಭ್ರಮ’ ವಿನೂತನ ಕಾರ್ಯಕ್ರಮ : ಫೇಸ್ಬುಕ್’ನ ಕ್ರಿಯಾಶೀಲ ಗ್ರೂಪ್ ‘ನಾವು ನಮ್ಮಿಷ್ಟ’ ದ ಕಾರ್ಯಕ್ರಮ.

ಕಾರ್ಯಕ್ರಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಹಿಂದು ಬಾಂಧವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ವಿವೇಕಾನಂದ ಉತ್ಸವ ಸಮಿತಿಯ ಜಿಲ್ಲಾ ಸಂಚಾಲಕ ಪ್ರಶಾಂತ ಬಸೂರತೇಕರ, ಬಜರಂಗದಳದ ತಾಲೂಕು ಸಂಚಾಲಕ ಚಂದ್ರು ಮಾಳಿ, ನಗರ ಘಟಕದ ಸಂಚಾಲಕ ಗೋಪಾಲ ಜಾಧವ, ಸಹ ಸಂಚಾಲಕ ನಾಗರಾಜ ಅನಂತಪುರ ಅವರುಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

RELATED ARTICLES  ಅಪಘಾತ : ಬೈಕ್ ಸವಾರ ಸಾವು.

ವಿವೇಕಾನಚಿದ ಜಯಂತಿ ನಿಮಿತ್ತ ಈಗಾಗಲೆ ನಗರದಲ್ಲೆಡೆ ಬ್ಯಾನರ್, ಬಂಟಿಂಗ್ಸ್, ಕೇಸರಿ ಬಾವುಟಗಳು ರಾರಾಜಿಸುತ್ತಿದ್ದು, ನಗರ ಕೇಸರಿಮಯವಾಗಿದೆ.