ಎಲ್ಲೆಡೆಯಲ್ಲಿಯೂ ಚುನಾವಣಾ ಬಿಸಿ ಏರಿತ್ತಿದೆ. ಒಂದೆಡೆ ಟಿಕೆಟ್ ಗಾಗಿ ಲಾಬಿ ನಡೆಯುತ್ತಿದೆ ಎಂದರೂ ಬಿಜೆಪಿಗರು ಸಂಘಟನೆಯತ್ತ ಮುಖ ಮಾಡಿದ್ದಾರೆ.

ಹೌದು ಬಹು ನಿರೀಕ್ಷೆ ಮೂಡಿಸಿರುವ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಗರು ಒಂದೆಡೆ ಸೇರಿ ಪಕ್ಷ ಸಂಘನೆಯತ್ತ ಮುಖ ಮಾಡಿದ್ದಾರೆ.

ಇತ್ತೀಚಿಗೆ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್ ನ ಅಧ್ಯಕ್ಷರು ಮತ್ತು ಬಿಜೆಪಿ ಪ್ರಮುಖರಾದ ನಾಗರಾಜ ನಾಯಕ ತೊರ್ಕೆ,ಶ್ರೀ ಕುಮಾರ ಟ್ರಾವೆಲ್ಸ ನ ಮಾಲಿಕರಾದ ವೆಂಕಟ್ರಮಣ ಹೆಗಡೆ, ಶ್ರೀ ಸೂರಜ ನಾಯ್ಕ ಸೋನಿ, ಶ್ರೀಮತಿ ಗಾಯತ್ರಿ ಗೌಡ ಇವರೆಲ್ಲರೂ ಒಂದೆಡೆ ಕಾಣಿಸಿಕೊಂಡು ಗಮನ ಸೆಳೆದರು.

RELATED ARTICLES  ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ ನಿಧಿ ಸಾಧನೆ.

ವಿವಿಧ ವಿಭಾಗಗಳಲ್ಲಿ ಪಕ್ಷಸಂಘಟನೆ ಮಾಡಿತ್ತಿರುವ ಎಲ್ಲ ಕಾರ್ಯಕರ್ತರರಂತೆ ಅವರು ಕಾಣಿಸಿಕೊಂಡು ಗಮನ ಸೆಳೆದರು. ನಾವೆಲ್ಲ ಒಟ್ಟಾಗಿ ಸೇರಿ ಬಿಜೆಪಿಯ ಕಾರ್ಯದಲ್ಲಿ ಸಕ್ರಿಯವಾಗಿ ಮುಂದುವರಿಯುತ್ತೇವೆ ಎಂದು ಸಂದೇಶ ರವಾನಿಸುತ್ತಿರುವ ಈ ಭಾವಚಿತ್ರ ಈಗ ವೈರಲ್ ಆಗಿದೆ.

RELATED ARTICLES  ಹುತಾತ್ಮ ಯೋಧರಿಗೆ ಭಾವಪೂರ್ಣ ಶೃದ್ಧಾಂಜಲಿ ಸಲ್ಲಿಸಿದ ಕುಮಟಾ ಬ್ಲಾಕ್ ಕಾಂಗ್ರೆಸ್

ಬಿಜೆಪಿ ನಾಯಕರುಗಳು ಒಟ್ಟಿಗೆ ಸೇರಿ ಚುನಾವಣಾ ತಂತ್ರ ರೂಪಿಸುತ್ತಿದ್ದಾರಾ ಎಂಬ ಪ್ರಶ್ನೆ ಜನತೆಯನ್ನು ಕಾಡುತ್ತಿದ್ದರೆ. ನಾವೆಲ್ಲ ಜೊತೆಗೂಡಿ ಪಕ್ಷಕ್ಕಾಗಿ ದುಡಿಯುತ್ತೇವೆ ಎನ್ನುತ್ತಿದ್ದಾರೆ ಈ ನಾಯಕರು.

ಬಿಜೆಪಿ ಪ್ರಮುಖರು ಕೈ ಜೋಡಿಸಿದ ಚಿತ್ರ ಈಗ ಎಲ್ಲ ಪಕ್ಷದ ಹಾಗೂ ಜನಸಾಮಾನ್ಯ ನೋಡುಗರಿಗೆ ಸಂಘಟನೆ ಹಾಗೂ ನಾವೆಲ್ಲ ಒಂದೆಂಬ ಸಂದೇಶ ಸಾರುತ್ತಿದೆ.