ಶಿರಸಿ : ಎಪಿಎಂಸಿ ಚುನಾವಣೆಯಲ್ಲಿ ಶಾಸಕ ವಿಶ್ವೇಶ್ವರ ಕಾಗೇರಿ ಮತದಾನ ಮಾಡಿ ತಮ್ಮ ಹಕ್ಕನ್ನು ಚಲಾಯಿಸಿದರು. ಒಟ್ಟು 13 ಕ್ಷೇತ್ರಗಳಿಗೆ ನಡೆದ ಚುನಾವಣೆಯಲ್ಲಿ 67 ಬೂತ್ ಗಳಿಂದ ಶೇ.45 ರಷ್ಟು ಮತದಾನ ಆಗುವ ಮೂಲಕ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಚುನಾವಣೆಯಲ್ಲಿ ಒಟ್ಟು 33 ಅಭ್ಯರ್ಥಿಗಳು ಕಣದಲ್ಲಿದ್ದು, ಜ.24 ರಂದು ಮತ ಎಣಿಕೆ ಕಾರ್ಯ ನಗರದ ಮಾರಿಕಾಂಬಾ ಪ್ರೌಢ ಶಾಲೆಯಲ್ಲಿ ನಡೆಯಲಿದೆ.

RELATED ARTICLES  ಭಾನುವಾರದಂದು ಅಂಕೋಲಾದಲ್ಲಿ ಉಚಿತ ನೇತ್ರ ಹಾಗೂ ದಂತ ತಪಾಸಣಾ ಶಿಬಿರ

ಎಪಿಎಂಸಿ ವ್ಯಾಪ್ತಿಯಲ್ಲಿ ಒಟ್ಟು 34, 723 ಮತದಾರರಿದ್ದು, 10,454 ಮಹಿಳೆಯರು ಹಾಗೂ 28,269 ಪುರುಷ ಮತದಾರರಿದ್ದಾರೆ. ಅದರಲ್ಲಿ 3,306 ಮಹಿಳೆಯರು ಹಾಗೂ 12, 169 ಪುರುಷರು ಮತ ಚಲಾವಣೆ ಮಾಡಿದ್ದಾರೆ ಎಂದು ಅಂದಾಜಿಸಲಾಗಿದೆ.

RELATED ARTICLES  ಕುಮಟಾದಲ್ಲಿ ಇನ್ನೊಂದು ವಾರದವರೆಗೆ ಹಾಫ್ ಡೇ ಲಾಕ್‌ಡೌನ್..!

11 ಕೃಷಿ ಕ್ಷೇತ್ರಗಳಲ್ಲಿ ಯಡಳ್ಳಿ ಕ್ಷೇತ್ರದ ಶಿರಸಿಮಕ್ಕಿ ಮತಗಟ್ಟೆ ಕೇಂದ್ರದಲ್ಲಿ ಶೇ.23 ರಷ್ಟು ಮತದಾನವಾಗಿದ್ದು, ಬನವಾಸಿ ಕ್ಷೇತ್ರದ ತಿಗಣಿ ಮತಗಟ್ಟೆ ಕೇಂದ್ರದಲ್ಲಿ ಅತೀ ಹೆಚ್ಚು ಶೇ.83 ರಷ್ಟು ಮತದಾನವಾಗಿದೆ. ವರ್ತಕರ ಕ್ಷೇತ್ರದ ಒಟ್ಟು 371 ಮತದಾರರಲ್ಲಿ 310 ಜನ ಮತ ಚಲಾವಣೆ ಮಾಡಿದ್ದಾರೆ ಎಂದು ತಿಳಿದು ಬಂದಿದೆ.