ಅಂಕೋಲಾ : ಕುಂಬಾರಕೇರಿಯ ಶ್ರೀ ಕಟ್ಟೆ ಮಹಾಗಣಪತಿ, ಶ್ರೀ ಮಹಾ ಮಾರುತಿ, ಶ್ರೀ ನಾಗದೇವರ ಭಜನಾ‌ ಸಪ್ತಾಹದ ರಥೋತ್ಸವ ಕಾಯ೯ಕ್ರಮ ವಿಜೃಂಭಣೆಯಿಂದ ನಡೆಯಿತು.

ನಗರದ ಲಕ್ಷ್ಮೇಶ್ವರದ ಮಿರಾಶಿ ಮನೆ ಎದುರುಗಡೆಯಿಂದ ಐಸ್ ಫ್ಯಾಕ್ಟರಿ ಮಾಗ೯ವಾಗಿ ಹೊರಟ ಮೆರವಣಿಗೆ ಕುಂಬಾರಕೇರಿಯ ಕದಂಬೇಶ್ವರ ದೇವಸ್ಥಾನದ ಮುಂದೆ ಸಾಗುವುದರಿಂದ ರಸ್ತೆಯ ಇಕ್ಕೆಲಗಳಲ್ಲಿ ಸ್ವಚ್ಛತೆ ಮಾಡುವುದರ ಮೂಲಕ ಪುರಸಭೆಯ ಪೌರಕಾರ್ಮಿಕರು ಸ್ಥಳೀಯರ ಪ್ರಶಂಸೆಗಿಟ್ಟಿಸಿಕೊಂಡರು.

RELATED ARTICLES  ಚದುರಂಗ ಕ್ಷೇತ್ರದ ವಿಶೇಷ ಪ್ರತಿಭೆ, ಹೊನ್ನಾವರದ ಸಮರ್ಥನಿಗೆ ಪ್ರತಿಭಾ ಪುರಸ್ಕಾರ.

ರಥೋತ್ಸವ ಕಾರ್ಯಕ್ರಮದಲ್ಲಿ ರಂಗೋಲಿ ಸ್ಪಧೆ೯,” ಸೇಡು ತೀರಿತು ಬಾಳು ಬೆಳಗಿತು ” ಎನ್ನುವ ನಾಟಕ ಪ್ರದಶ೯ನ ನಡೆಯಲಿದ್ದು, ಸ್ವಚ್ಛತೆಗೆ ಸಹಕರಿಸುವಂತೆ ಪುರಸಭೆಯ ಸ್ವಚ್ಛತಾ ಮೇಲ್ವಿಚಾರಕ ವಿಷ್ಣು ಗೌಡರವರಲ್ಲಿ, ಚಿನ್ನದಗರಿ ಯುವಕ ಸಂಘ ವಿನಂತಿಸಿಕೊಂಡಿತ್ತು. ಇದಕ್ಕೆ ಸ್ಪಂದಿಸಿದ ಪುರಸಭೆ ಆಡಳಿತ ವಗ೯ ಹಾಗೂ ಇಲ್ಲಿನ ಜನಪ್ರತಿನಿಧಿಗಳು ತಮ್ಮ ಪೌರಕಾಮಿ೯ಕ ಸಿಬ್ಬಂದಿಗಳಾದ ಸುಮಿತ್ರಾ ನಾರಾಯಣ ಹರಿಜನ್,ಮಂಜುಳಾ ಬಳ್ಳಾರಿ ರಾಘವೇಂದ್ರ ಡಿ. ನಾಯ್ಕ, ನೀಲೇಶ, ಬೈಂದೂರಕರ್, ಗಜಾನನ. ಆರ್.ಹುಲಸ್ವಾರ, ಅಮಿತಾ ಕೃಷ್ಣಮೂತಿ೯ ಸ್ವಾಮಿಯವರ ಮೂಲಕ ಸ್ವಚ್ಛತೆಗೆ ಸಹಕರಿಸಿದ್ದಾರೆ.

RELATED ARTICLES  ಕೋವಿಡ್ -19 : ನಗರ ಗ್ರಾಮೀಣ ಭಾಗದಲ್ಲಿ ಕಟ್ಟೆಚ್ಚರ