ಶಿರಸಿ : ನಗರದ ರಾಘವೇಂದ್ರ ಕಲ್ಯಾಣ ಮಂಟಪದಲ್ಲಿ ಜೆಡಿಎಸ್ ವತಿಯಿಂದ ಆಯೋಜಿಸಲಾಗಿದ್ದ ಮನೆ ಮನೆಗೆ ಕುಮಾರಣ್ಣ ಕಾರ್ಯಕ್ರಮವನ್ನು ಉದ್ಘಾಟಿಸಿ ಹೊರಟ್ಟಿಯವರು ಮಾತನಾಡಿದರು. ಶಾಸನ ಸ್ಥಾನಕ್ಕಿರುವ ಘನತೆಯನ್ನೂ ಮೀರಿ ವರ್ತಿಸುವವರು ಹೆಚ್ಚಾಗುತ್ತಿರುವ ದಿನಗಳಲ್ಲಿ ಡಾ. ಶಶಿಭೂಷಣ ಹೆಗಡೆಯವರಂತ ಸುಸಂಸ್ಕೃತರನ್ನು ಆರಿಸಿ ಕಳುಹಿಸಬೇಕು.

ಶಶಿಭೂಷಣ ಹೆಗಡೆ ಉತ್ತಮ ಕುಟುಂಬದಿಂದ ಬಂದವರು. ಅವರನ್ನು ಮತದಾರರು ಶಾಸನ ಸಭೆಗೆ ಆರಿಸಿ ಕಳುಹಿಸಬೇಕು. ಅವರಿಂದ ರಾಜ್ಯದಲ್ಲಿ ಶಿರಸಿ-ಸಿದ್ದಾಪುರ ಮತಕ್ಷೇತ್ರ ಪ್ರಸಿದ್ಧಿ ಪಡೆಯುವುದರಲ್ಲಿ ಯಾವದೇ ಅನುಮಾನವಿಲ್ಲ ಎಂದರು.

RELATED ARTICLES  ಸಿ.ಎ ಪರೀಕ್ಷೆಯಲ್ಲಿ ರಶ್ಮಿ ಲಂಬೋದರ ಭಟ್ ಸಾಧನೆ.

ಬಿಜೆಪಿ ಸರ್ಕಾರ ಅತ್ಯಂತ ಭ್ರಷ್ಟ ಆಡಳಿತ ನೀಡಿದೆ. ಕಾಂಗ್ರೆಸ್ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಜ್ಯದ ಜನರ ಮೇಲೆ 36 ಸಾವಿರ ರೂ.ಗಳಷ್ಟು ಸಾಲದ ಹೊರೆಯ ಸಾಲಭಾಗ್ಯ ನೀಡಿದ್ದಾರೆ. ಒಟ್ಟಾರೆ ಅವರ ಆಡಳಿತ ಅವಧಿಯಲ್ಲಿ ರಾಜ್ಯ ಸರ್ಕಾರ 1 ಲಕ್ಷ ಕೋಟಿ ರೂ.ಗಳಿಗೂ ಅಧಿಕ ಸಾಲವನ್ನು ಮಾಡಿದೆ ಎಂದು ಟೀಕಿಸಿದರು.

RELATED ARTICLES  ಹಿರೇಗುತ್ತಿ ಹೈಸ್ಕೂಲ್ ಶಿಕ್ಷಕ ಮಹಾದೇವ ಬಿ ಗೌಡ ಜಿಲ್ಲಾಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ದ್ವಿತೀಯ ಸ್ಥಾನ