ಜೆಡಿಎಸ್‌ ರೋಡ್‌ ಶೋ ಹಾಗೂ ಬೈಕ್‌ ರ್ಯಾಲಿಯ ನಂತರ ಮಾಧ್ಯಮಗಳ ಜೊತೆ ಮಾತನಾಡಿದ ಮಧು ಬಂಗಾರಪ್ಪ ಅವರು ಬಿಜೆಪಿ ಹಾಗೂ ಕಾಂಗ್ರೆಸ್‌ ಧರ್ಮವನ್ನು ಬೀದಿಗೆ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಜೆಪಿ ಧರ್ಮದ ಹೆಸರಿನಲ್ಲಿ ಗಲಭೆ ಸೃಷ್ಟಿಸಿದರೆ, ಕಾಂಗ್ರೆಸ್‌ ಅದಕ್ಕೆ ಸೀಮೆಎಣ್ಣೆ ಸುರಿಯುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂಸತ್‌ನಲ್ಲಿ ಈಗಾಗಲೇ ಕ್ಷಮೆ ಕೇಳಿದ್ದಾರೆ, ಆದರೂ ಅವರು ಬದಲಾಗಿಲ್ಲ.

RELATED ARTICLES  ಚಾರ್ಟೆಡ್ ಅಕೌಂಟ ಪರೀಕ್ಷೆಯಲ್ಲಿ ತೇರ್ಗಡೆಯಾದ ಹೊನ್ನಾವರದ ಶಶಾಂಕ್ ಹೆಗಡೆ.

ಈಗ ಬುದ್ಧಿಜೀವಿಗಳ, ಚಿಂತಕರ ಕುರಿತು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಸಮಾಜದಲ್ಲಿ ಬೆಂಕಿ ಹಚ್ಚಲು ಮಂತ್ರಿಯಾಗಿದ್ದೀರಾ. ಸಚಿವರಾಗಿ ಹೆಗಡೆ ಏನು ಮಾಡಿದ್ದಾರೆ ಎಂದು ಪ್ರಶ್ನಿಸಿದರು.

RELATED ARTICLES  ಅನಂತ್ ಕುಮಾರ್ ಹೆಗಡೆಯನ್ನು ಸಚಿವ ಸ್ಥಾನದಿಂದ ವಜಾಗೊಳಿಸುವಂತೆ ಆಗ್ರಹ ಕಾರವಾರದಲ್ಲಿ ರಸ್ತೆತಡೆ!

ಒಂದು ಧರ್ಮದ ಮತ ನನಗೆ ಬೇಡ ಎಂದು ಒಂದು ಸಮುದಾಯವನ್ನು ದ್ವೇಷಿಸುವ ಕೆಲಸ ಕೇಂದ್ರ ಸಚಿವರು ಮಾಡುತ್ತಿದ್ದಾರೆ. ಇತ್ತೀಚೆಗೆ ಜಿಲ್ಲೆಯ ಹೊನ್ನಾವರ, ಕುಮಟಾ, ಶಿರಸಿಯ ಅಮಾಯಕ ಯುವಕರು ಶಿಕ್ಷೆ ಅನುಭವಿಸುವಂತಾಯಿತು. ಕರಾವಳಿಯ ಶಾಂತಿ ಕದಡಿ ಹೋಗಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.