ಭಟ್ಕಳ: ತಾಲೂಕಿನ ಶಕ್ತಿ ಕ್ಷೇತ್ರಗಳಲ್ಲಿ ಒಂದಾದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಅಳ್ವೆಕೋಡಿ ಇವರ ಹೆಸರಿನಲ್ಲಿ ನಡೆಯುತ್ತಿರುವ ಶ್ರೀ ದುರ್ಗಾಪರಮೇಶ್ವರಿ ಪ್ರೌಡಶಾಲೆ ಅಳ್ವೆಕೋಡಿ ಇದರ ಅದ್ದೂರಿ ರಜತ ಮಹೋತ್ಸವದ ಸಮಾರೋಪ ಕಾರ್ಯಕ್ರಮದಲ್ಲಿ ಜಿಲ್ಲೆಯ ಭಾವಕವಿ, ತಾಲೂಕಿನ ಎಂಟನೇ ಸಾಹಿತ್ಯ ಸಮ್ಮೇಳನಾದ್ಯಕ್ಷ ಉಮೇಶ ಮುಂಡಳ್ಳಿಯವರನ್ನು ಸನ್ಮಾನಿಸಲಾಯಿತು.

ರಜತ ಮಹೋತ್ಸವದ ಸವಿ ನೆನಪಿಗಾಗಿ ಹೊರತರುತ್ತಿರುವ ‘ಶ್ರೀ ಮಾತಾ ಮಹಿಮಾ’ ಸ್ಮರಣ ಸಂಚಿಕೆಯ ಮುಖ್ಯ ಭೂಮಿಕೆಯಾದ ದುರ್ಗಾ ಪರಮೇಶ್ವರಿ ದೇವಸ್ಥಾನದ ಇತಿಹಾಸ ಕ್ಷೇತ್ರ ಪರಿಚಯ, ಅಮ್ಮನ ಪವಾಡಗಳ ಬಗ್ಗೆ ಸಾಹಿತಿ ಉಮೇಶ ಮುಂಡಳ್ಳಿಯವರು ಸವಿಸ್ತಾರವಾಗಿ ಬೆಲಕು ಚೆಲ್ಲುವ ಪ್ರಯತ್ನ ಮಾಡಿದ್ದಾರೆ. ಇದರ ಪ್ರೀತಿಗಾಗಿ ಈ ಶುಭ ಸಂಧರ್ಭದಲ್ಲಿ ಅವರನ್ನು ದೇವಸ್ಥಾನದ ಧರ್ಮದರ್ಶಿ ಮಂಡಳಿ ಮತ್ತು ಶಾಲಾ ಆಡಳಿತ ಮಂಡಳಿಯವರು ಸಾಲು ಹೊದಿಸಿ ಸನ್ಮಾನಿಸಿದರು.

RELATED ARTICLES  ಚಿತ್ರಗಿ ಪ್ರೌಢಶಾಲೆಯಲ್ಲಿ ಉಚಿತ ರಕ್ತ ಗುಂಪು ಪರೀಕ್ಷಾ ಶಿಬಿರ

ಈ ಸಂದರ್ಭದಲ್ಲಿ ದೇವಸ್ಥಾನದ ಧರ್ಮದರ್ಶಿಗಳಾದ ತಿಮ್ಮಪ್ಪ ಹೊನ್ನಿಮನೆ, ಹನುಮಂತ ನಾಯ್ಕ, ನಾರಾಯಣ ದೈಮನೆ, ಜಿ.ಪಂ. ಮಾಜಿ ಉಪಾಧ್ಯಕ್ಷ ರಾಮಾ ಮೊಗೇರ, ಕುಮಟಾ ಡಯಟ್ ಕಾಲೇಜಿನ ಹಿರಿಯ ಉಪನ್ಯಾಸಕ ದೇವಿದಾಸ ಮೊಗೇರ, ಶಾಲಾ ಆಡಳಿತ ಮಂಡಳಿಯ ದುರ್ಗಾದಾಸ ಮೊಗೇರ, ಬಾಬು ಮೊಗೇರ,ವಿಠ್ಠಲ್ ದೈಮನೆ, ತಾ.ಪಂ. ಸದಸ್ಯ ವಿಷ್ಣು ದೇವಾಡಿಗ, ಮುಖ್ಯ ಶಿಕ್ಷಕ ಕೆ.ಬಿ. ಮಡಿವಾಳ ಮೊದಲಾದ ಗಣ್ಯರು ಉಪಸ್ಥಿತರಿದ್ದರು. ಶಿಕ್ಷಕ ಶ್ರೀಧರ ಶೇಟ್ ಕಾರ್ಯಕ್ರಮ ನಿರ್ವಹಿಸಿದರು.

RELATED ARTICLES  ಎರಡು ತಿಂಗಳಿಂದ‌ ಬಂಧನದಲ್ಲಿದ್ದಾರೆ ಉತ್ತರ ಕನ್ನಡದ ಮೀನುಗಾರರು: ಓಮನ್ ನ ಸಿನಾವ್ ಕಡಲಿನಲ್ಲಿ ಮೀನುಗಾರಿಕೆ ನಡೆಸಿದ ಕುರಿತಾಗಿ ಬಂಧಿಸಿದ ಪೋಲೀಸರು.