ಹೊನ್ನಾವರ : ತಾಲ್ಲೂಕಿನ ಚಂದಾವರ ಹಾಗೂ ಕಡತೋಕ ಪಂಚಾಯತ ವ್ಯಾಪ್ತಿಯ ಕೆಕ್ಕಾರ ಸೋನಾರಕೇರಿ ಗೌಡರಕೊಪ್ಪ ರಸ್ತೆ ನಿರ್ಮಾಣ ಕಾಮಗಾರಿಗೆ ಕುಮಟಾ ಹೊನ್ನಾವರ ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶಾರದಾ ಮೋಹನ ಶೆಟ್ಟಿ ಚಾಲನೆ ನೀಡಿದರು.

IMG 20180122 WA0005

ನಮ್ಮ ಗ್ರಾಮ ನಮ್ಮ ರಸ್ತೆ ಯೋಜನೆಯಡಿ 2 ಕೋಟಿ 73 ಲಕ್ಷ ಅನುದಾನ ಬಿಡುಗಡೆಯಾಗಿದ್ದು 2.70 ಕಿ.ಮೀ ರಸ್ತೆ ನಿರ್ಮಾಣ ಮತ್ತು ನಿರ್ವಹಣೆ ಕಾಮಗಾರಿ ಕೈಗೆತ್ತಿಕೊಳ್ಳಲಾಗಿದೆ.

RELATED ARTICLES  ಕೆ ಆರ್ ಐ ಡಿ ಎಲ್ ನಿರ್ಮಾಣ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿದ ಶಾಸಕಿ ಶಾರದಾ ಮೋಹನ ಶೆಟ್ಟಿ

ಗ್ರಾಮ ಗ್ರಾಮಗಳಲ್ಲಿ ಮೂಲ ಸೌಕರ್ಯಗಳನ್ನು ಒದಗಿಸುವ ದೃಷ್ಟಿಯಿಂದ ಈ ಎಲ್ಲಾ ಯೋಜನೆಗಳನ್ನು ರೂಪಿಸಿದ್ದು ಈಗ ಅನುದಾನ ಬಿಡುಗಡೆಯಾದ ಬಗ್ಗೆ ಶಾಸಕರು ಸಂತಸ ವ್ಯಕ್ತಪಡಿಸಿದರು.

RELATED ARTICLES  ಸರಸ್ವತಿ ಪಿ.ಯು ಕಾಲೇಜಿನಲ್ಲಿ 66 ನೇ ಕನ್ನಡ ರಾಜ್ಯೋತ್ಸವದ ಸಂಭ್ರಮಾಚರಣೆ

ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷ ಚಂದ್ರು ನಾಯ್ಕ, ಮಾಜಿ.ತಾ,ಪಂ ಸದಸ್ಯರಾದ ನಾಣಪ್ಪ ಗೌಡ, ಕಲಾವತಿ ಗೌಡ ಗ್ರಾ.ಪಂ ಸದಸ್ಯರು ಕಡತೋಕ, ಆರ್ ಎಂ ಶೇಟ, ರಾಜೇಶ ಗುನಗಾ, ಇಂಜನೀಯರ್ ಆರ್. ಜಿ ಭಟ್ಟ ಊರ ಗೌಡ ಮರ್ತು ಗೌಡ ಇನ್ನಿತರರು ಉಪಸ್ಥಿತರಿದ್ದರು.