ಚೇತನಾ ಸೇವಾಸಂಸ್ಥೆ ದಿವಗಿ ಇವರ ಆಶ್ರಯದಲ್ಲಿ ರಾಷ್ಟ್ರೀಯಯುವ ಸಪ್ತಾಹದ ಅಂಗವಾಗಿ ರಾಷ್ಟ್ರೀಯ ಯುವ ದಿನಾಚರಣೆ ಹಾಗೂ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ಸ್ವಾಮಿ ವಿವೇಕಾನಂದರ ಕನಸಿನ ಸದೃಢ ಭಾರತ ನಿರ್ಮಾಣದಲ್ಲಿ ನನ್ನ ಪಾತ್ರ ಎಂಬ ವಿಷಯದಕುರಿತಾಗಿ ತಾಲೂಕಾ ಮಟ್ಟದ ಭಾಷಣ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ ನ ಅಧ್ಯಕ್ಷರಾದ ನಾಗರಾಜ ನಾಯಕತೊರ್ಕೆಅವರು ಉದ್ಘಾಟಿಸಿದರು.

ನಂತರ ಮಾತನಾಡಿದಅವರುಚೇತನಾ ಸೇವಾಸಂಸ್ಥೆ ರಾಷ್ಟ್ರೀಯಯುವ ದಿನಾಚರಣೆಯನ್ನು ಬಹಳ ಅರ್ಥಪೂರ್ಣವಾಗಿ ಹಮ್ಮಿಕೊಂಡಿದೆ. ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು.
ಸ್ವಾಮಿ ವಿವೇಕಾನಂದರು ಯುವ ಜನತೆಯಲ್ಲಿ ಅಪಾರವಾದ ಶಕ್ತಿ ಇದೆ ಎಂದು ಬಲವಾಗಿ ನಂಬಿದ್ದರು.ಅವರು ಯುವ ಶಕ್ತಿಯನ್ನು ಸದಾ ಜಾಗ್ರತಗೊಳಿಸಲು ಹುರಿದುಂಬಿಸುತ್ತಿದ್ದರು. ಈ ದೇಶಕ್ಕೆ ಸದೃಢಯುವಜನತೆಯಅಗತ್ಯತೆಯನ್ನುಒತ್ತಿ ಹೇಳುತ್ತಿದ್ದ ಮಹಾನ್ ಸಂತರಾಗಿದ್ದರು. ಅವರ ಮಾತುಗಳು ಇಂದಿಗೂ ನಮ್ಮಲ್ಲಿ ಹೊಸ ಚೈತನ್ಯವನ್ನು ಸ್ಫೂರ್ತಿಯನ್ನುತುಂಬುತ್ತವೆ. ಸ್ವಾಮಿ ವಿವೇಕಾನಂದರು ಓರ್ವ ಹಿಂದೂವಾದಿ ಅಷ್ಟೇ ಅಲ್ಲದೇ ಅಪ್ರತಿಮ ದೇಶಭಕ್ತರಾಗಿದ್ದರು.ಪ್ರತಿಯೊಬ್ಬರೂ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಇಂತಹ ಮಹಾನ್ ಪುರುಷರ ಚರಿತ್ರೆಗಳನ್ನು, ಅವರ ಸಾಧನೆಗಳನ್ನು ತಿಳಿದುಕೊಂಡು ಅವರ ಆದರ್ಶಗಳಲ್ಲಿ ಮುನ್ನಡೆಯಬೇಕು ಎಂದರು.

RELATED ARTICLES  ಕೊಂಕಣ ಎಜ್ಯುಕೇಶನ್ ಟ್ರಸ್ಟನ ಸಿ.ವಿ.ಎಸ್.ಕೆ ಪ್ರೌಢಶಾಲೆಯ ಶಿಕ್ಷಕರಿಗೆ ಸನ್ಮಾನ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಸೂರಜ ನಾಯ್ಕ ಸೋನಿ ಅವರು ಮಾತನಾಡಿ ಸ್ವಾಮಿ ವಿವೇಕಾನಂದರುಯುವಕರಚೇತನರಾಗಿದ್ದಾರೆ.ಯುವಜನತೆ ಅವರು ಹಾಕಿಕೊಟ್ಟ ಮಾರ್ಗದಲ್ಲಿ ಮುನ್ನಡೆಯ ಬೇಕು ಎಂದರು.

RELATED ARTICLES  ಭಟ್ಕಳದಲ್ಲಿ ಆಧಾರ್‌ ಕೇಂದ್ರ ತೆರೆಯುವಂತೆ ಆಗ್ರಹಿಸಿ ಉಪವಿಭಾಗಾಧಿಕಾರಿಯವರಿಗೆ ಮನವಿ ಸಲ್ಲಿಕೆ.

ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಮಿರ್ಜಾನಜನತಾ ವಿದ್ಯಾಲಯದ ಮುಖ್ಯಾಧ್ಯಾಪಕರಾದ ಬಿ.ಲಕ್ಷ್ಮಣ, ಚೇತನ ಸೇವಾ ಸಂಸ್ಥೆಯಅಧ್ಯಕ್ಷಆರ್.ಕೆ. ಅಂಬಿಗ ಸೇರಿದಂತೆ ಹಲವರು ಉಪಸ್ಥಿತರಿದ್ದರು