ಹೊನ್ನಾವರ : ರಾಮಕ್ಷತ್ರಿಯ ವೇಲ್ ಫೇರ್ ಟ್ರಸ್ಟ್ ಆಯೋಜಿಸಿದ ಸ್ವಚ್ಚತಾ ಅಭಿಯಾನದ ಅಂಗವಾಗಿ ಹೊಸಪಟ್ಟಣ ಘಟಕದ ಸದಸ್ಯರು ಊರಿನ ನಾಗರಿಕರು ದೇವಸ್ಥಾನದ ಆಡಳಿತ ಕಮಿಟಿಯ ಸಹಯೋಗದೊಂದಿಗೆ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆವರಣ ಹಾಗೂ ರಾಮಕ್ಷತ್ರಿಯ ಸಭಾಭವನ ಸ್ವಚ್ಚಗೊಳಿಸಿದರು.
ಸ್ವಚ್ಛತಾ ಅಭಿಯಾನದಲ್ಲಿ ದೊರೆತ ಉಪಯೋಗಿ ಸಾಮಗ್ರಿಗಳನ್ನು ಸಂಗ್ರಹಿಸಿ ಅದನ್ನು ಗ್ರಾಮಸ್ಥರ ನೆರವಿನಿಂದ ಸವಾಲಿನ ಮೂಲಕ ನೀಡಲಾಯಿತು.ಸವಾಲಿನ ಮೊತ್ತವನ್ನು ದೇವಸ್ಥಾನದ ಕಾಣಿಕೆಯಾಗಿ ಸಲ್ಲಿಸಲಾಯಿತು.ಹಾಗೂ ಪರಿಸರ ಬೆಳೆಸಿ ನಾಡು ಉಳಿಸಿ ಎಂಬಂತೆ ದೇವಸ್ತಾನದ ಆವರಣ ದಲ್ಲಿ ತೆಂಗಿನ ಸಸಿಗಳನ್ನು ನೆಡುವುದರ ಮೂಲಕ ಗ್ರಾಮಸ್ಥರಿಗೆ ಪರಿಸರದ ಬಗ್ಗೆ ಅರಿವು ಮೂಡಿಸಲಾಯಿತು.ನಂತರ ಸ್ವಚ್ಚತಾ ಅಭಿಯಾನದ ಕುರಿತು ಮಾತನಾಡಿದ ನಾರಾಯಣ ನಾಯ್ಕ್ ಆರೋಗ್ಯಕರವಾದ ಸಮಾಜ ನಿರ್ಮಿಸುವಲ್ಲಿ ಸ್ವಚ್ಚತೆಯ ಪಾತ್ರ ಬಹುಮುಖ್ಯ. ಟ್ರಸ್ಟ್ ಕೈಗೊಂಡಿರುವ ಸ್ವಚ್ಚತಾ ಕಾರ್ಯಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಮುಂದಿನ ದಿನಗಳಲ್ಲಿ ಟ್ರಸ್ಟ್ ಕೈಗೊಳ್ಳುವ ಕಾರ್ಯಕ್ರಮಗಳಿಗೆ ಸಂಪೂರ್ಣ ನೆರವು ನೀಡುತ್ತೇವೆ ಎನ್ನುವುದಲ್ಲದೆ ಸ್ಥಳದಲ್ಲೇ ಅಭಿಯಾನಕ್ಕೆ ದೇಣಿಗೆಯನ್ನು ನೀಡಿದರು.ತದನಂತರ ಮಾತನಾಡಿದ ಟ್ರಸ್ಟಿನ ಸದಸ್ಯರಾದ ಸುಧಾಕರ ನಾಯ್ಕ್ ಸ್ವಚ್ಚತಯೆ ಮಹತ್ವ,ಟ್ರಸ್ಟ್ ಕೈಗೊಳ್ಳುವ ಮುಂದಿನ ಕಾರ್ಯಕ್ರಮಗಳು ತಿಳಿಸುವುದರ ಜೊತೆಯಲ್ಲಿ ಅಲ್ಲಿಯ ಸಮಸ್ತ ಜನತೆಗೆ ವಂದನಾರ್ಪಣೆ ಸಲ್ಲಿಸಿದರು.
ಟ್ರಸ್ಟ್ ನ ಸದಸ್ಯರಾದ ಸಚಿನ ಹಳದೀಪುರ್ ಅವರು ಮಾತನಾಡಿ ಆರೋಗ್ಯಕರ ಸಮಾಜ ರೂಪಿಸಲು ಸ್ವಚ್ಚತೆ ತುಂಬಾ ಪ್ರಮುಖವಾಗಿದ್ದು ನಾವೆಲ್ಲಾ ಸ್ವಚ್ಚತೆ ಬಗ್ಗೆ ಜಾಸ್ತಿ ಗಮನ ಹರಿಸಬೇಕು. ಪರಿಸರ ಬೆಳೆಸಿ ನಾಡನ್ನು ಉಳಿಸಿ ಹೇಳುತ್ತಾ ಪರಿಸರದ ಬಗ್ಗೆ ಗ್ರಾಮಸ್ಥರಿಗೆ ಅರಿವು ಮೂಡಿಸಿದರು.
ಟ್ರಸ್ಟನ ಸದಸ್ಯರಾದ ನವೀನ ನಾಯ್ಕ ,ಹರೀಶ ನಾಯ್ಕ್,ಸತೀಶ ನಾಯ್ಕ್, ಟ್ರಸ್ಟನ ಮುಂದಿನ ಕಾರ್ಯಗಳಿಗೆ ಸಹಕಾರ ನೀಡುವಂತೆ ಕೋರಿದರು.ಹೊಸಪಟ್ಟಣ ಘಟಕದ ಹಲವು ಗಣ್ಯ ವ್ಯಕ್ತಿಗಳು ಊರನಾಗರೀಕರು ಉಪಸ್ಥಿತರಿದ್ದರು. ಲಘು ಉಪಹಾರದೊಂದಿಗೆ ಕಾರ್ಯಕ್ರಮ ಯಶಸ್ವಿಯಾಗಿ ಮುಕ್ತಾಯ ಮಾಡಲಾಯಿತು.