ಕಾರವಾರ: ಕೈಗಾ ಅಣು ವಿದ್ಯುತ್ ಕೇಂದ್ರವು ಪರಿಸರ ಮುಂದಾಳತ್ವ ಕಾರ್ಯಕ್ರಮದಡಿ ಭಾನುವಾರ ಆಯೋಜಿಸಿದ್ದ ಕೈಗಾ ಬರ್ಡ್ ಮ್ಯಾರಾಥಾನ್ 8ನೇ ಆವೃತ್ತಿಯಲ್ಲಿ ಕೈಗಾ ಅಣು ವಿದ್ಯುತ್ ಸ್ಥಾವರದ ಸುತ್ತಮುತ್ತಲಿನ ಪ್ರದೇಶದಲ್ಲಿ ಒಟ್ಟೂ 8 ಹೊಸ ಪಕ್ಷಿಗಳು ಪತ್ತೆಯಾಗಿದೆ. ಈ ಮೂಲಕ ಪಕ್ಷಿ ಗಣತಿಯಲ್ಲಿ ಈವರೆಗೆ ಪತ್ತೆಯಾದ ಪಕ್ಷಿಗಳ ಸಂಖ್ಯೆಯು 284ಕ್ಕೆ ಏರಿದೆ.

ಇಂಡಿಯನ್ ಸ್ವಿಫ್ಟಲೆಟ್, ವೆಟ್ರಂಪಡ್ ಸ್ಪೆನ್ ಟೇಲ್, ಯುರೇಶಿಯನ್ ಹಾಬಿ, ನಾರ್ತರ್ನ್ ಪಿನ್ಟೇಲ್, ನಾರ್ತರ್ನ್ ಶೆವೇಲಿಯರ್, ಯುವ್ರೀ ಬೆಲ್ಲಿಡ್ ಕುಕ್ಕೂ, ಗ್ರೇಟರ್ ಸ್ಪಾಟ್ಟೆಡ್ ಈಗಲ್, ಯುರೇಶಿಯನ್ ಸ್ಪಾರ್ರೋ ಹಾಕ್ಗಳು ಈ ಬಾರಿ ಪತ್ತೆಯಾಗಿದೆ.

RELATED ARTICLES  ಬಡವರ ಪಾಲಿನ ಗೋಧಿ ಹುಳುಗಳ ಪಾಲಾಯ್ತೆ?

ಸ್ಥಳೀಯ ಕೈಗಾ ನೌಕರರು, ಶಿರಸಿಯ ಅರಣ್ಯ ಮಹಾವಿದ್ಯಾಲಯ, ಉತ್ತರಕರ್ನಾಟಕ ಪಕ್ಷಿ ವೀಕ್ಷಣಾತಂಡ, ಗೋವಾ ಬರ್ಡ್ ಕನ್ಸರ್ವೇಷನ್ ನೆಟ್ವರ್ಕ್, ಗೋವಾ ಮಹಾವಿದ್ಯಾಲಯ, ಬೆಂಗಳೂರು ಪಕ್ಷಿ ವೀಕ್ಷಣಾಕಾರರ ಸಂಘ, ಡೆಹರಾಡೂನ್ನ ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ, ಕೇರಳಾ ಬರ್ಡರ್ಸ್ ಹೀಗೆ ದೇಶದ ವಿವಿಧ ಭಾಗಗಳಿಂದ ಸುಮಾರು 115 ಪಕ್ಷಿ ವೀಕ್ಷಣಾಕಾರರು ಈ ಗಣತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಚಾಲನೆ: ಪಕ್ಷಿ ಗಣತಿಗೆ ಚಾಲನೆ ನೀಡಿದ ಕೈಗಾ ವಿದ್ಯುತ್ ಕೇಂದ್ರದ ಸ್ಥಳ ನಿರ್ದೇಶಕ ಸಂಜಯಕುಮಾರ ಕೈಗಾ ಬರ್ಡ್ ಮ್ಯಾರಾಥಾನ್ ಗೆ ಚಾಲನೆ ನೀಡಿ ವರ್ಷದಿಂದ ವರ್ಷಕ್ಕೆ ಈ ಭಾಗದಲ್ಲಿ ಪಕ್ಷಿಗಳ ಸಂಖ್ಯೆ ಹೆಚ್ಚಳವಾಗುತ್ತಿದೆ. ಇಲ್ಲಿನ ಪರಿಸರ ಆರೋಗ್ಯಕರವಾಗಿದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ. ಕೈಗಾ ಅಣುವಿದ್ಯುತ್ ಕೇಂದ್ರವು ಪರಿಸರ ಪೂರಕವಾಗಿದ್ದು, ಭಾರತದ ವಿದ್ಯತ್ಶಕ್ತಿಯ ಬೇಡಿಕೆಯನ್ನು ನೀಗಿಸುವತ್ತ ತನ್ನ ಅಮೂಲ್ಯ ಕೊಡುಗೆಯನ್ನು ನೀಡುತ್ತಿದೆ ಎಂದರು.

RELATED ARTICLES  ಕಾರವಾರದಲ್ಲಿ ಮಳೆ ಅವಾಂತರ : ವಿವಿಧ ಸ್ಥಳಕ್ಕೆ ಅಧಿಕಾರಿಗಳ ಭೇಟಿ.

ಕೈಗಾ 3 ಮತ್ತು 4ನೇ ಘಟಕದ ನಿರ್ದೇಶಕ ಜೆ.ಆರ್.ದೇಶಪಾಂಡೆ, ಭಾರತೀಯ ಅಣುವಿದ್ಯುತ್ ನಿಗಮದ ಮುಂಬೈ ಶಾಖೆಯ ಸುಶಾಂತ ಕುಮಾರ ಜೇನಾ, ವೈಲ್ಡ್ಲೈಫ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಡಾ.ಹುಸೇನ್, ಕೈಗಾ ಪರಿಸರ ಮುಂದಾಳತ್ವ ಕಾರ್ಯಕ್ರಮದ ಅಧ್ಯಕ್ಷ ಪ್ರೇಮಕುಮಾರ ಇದ್ದರು.