ನವಚೇತನ ಯುವಕ ಸಂಘ ಹಾಗೂ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಣ್ಣ ಬಲಸೆ ಇದರ ಆಶ್ರಯದಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಸಣ್ಣ ಬಲಸೆಯ ವಾರ್ಷಿಕ ಸಮ್ಮೇಳನ ನಡೆಯಿತು.

ಶಾಸಕ ಮಂಕಾಳ ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಈಶ್ವರ್ ದೇವಿದಾಸ ದೇವಾಡಿಗ ಹಾಗೂ ಎಸ್.ಎಸ್. ಎಲ್.ಸಿ ಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ಸ್ಮಿತಾ ವೆಂಕಟರಮಣ ಆಚಾರ್ಯ ವಿದ್ಯಾರ್ಥಿನಿಗೆ ಸನ್ಮಾಸಿದರು. ಶಾಲಾ ಸಾಂಸ್ಕೃತಿಕ ಹಾಗೂ ಕ್ರೀಡಾ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ದ್ವಿತೀಯ ಬಂದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಮಾಡಿದರು.

ಕಾರ್ಯಕ್ರಮದ ಉದ್ಘಾಟಕರಾದ ಶಾಸಕ ಮಾಂಕಳ ವೈದ್ಯ ಮಾತನಾಡಿ ಯುವಕ ಸಂಘದವರು ಯಾವ ಕೆಂಸ ಮಾಡಬೇಕು ಅದನ್ನು ಇಲ್ಲಿನ ಯುವಕ ಸಂಘ ಮಾಡಿದೆ. ಇಡೀ ಬೈಲುರಿಗೆ ಈ ಸಂಘದಿಂದ ಕೆಲಸ ಆಗಬೇಕು. ಶಿಕ್ಷಣಕ್ಕೆ ಎಲ್ಲಾ ರೀತಿಯ ಸಹಕಾರ ಸರ್ಕಾರದಿಂದ ಸಿಗುತ್ತಿದೆ. ನಮ್ಮೂರಿನ ಜನರಿಗೆ ನಿಮಗೆ ಬೇಕಾದ ಶಿಕ್ಷಣ ಪಡೆಯಲು ನಾನು ಸಹಕಾರ ಮಾಡುತ್ತೇನೆ. ಶಿಕ್ಷಣಕ್ಕೆ ಕೊರತೆ ಇಲ್ಲದ ತರ ನಾನು ನೋಡಿಕೊಂಡಿದೆನೇ ಎನ್ನುವುದು ನನಗೆ ಸಮಾಧಾನ ಇದೆ. ಯುವಕ ಸಂಘ ಮಾಡಿ ವರ್ಷಕ್ಕೊಂದು ಕಾರ್ಯಕ್ರಮ ಮಾಡಿದ್ರೆ ಅದು ಪ್ರಯೋಜನ ಆಗಲ್ಲ. ನಿಮ್ಮ ಸಂಘ ಶಿಕ್ಷಣ ಹಾಗೂ ದೇಶ ಪ್ರೇಮ ಎರಡನ್ನೂ ಮಾಡಿದೆ. ನಿಮ್ಮೂರಿನ ನೀರಿನ ಸಮಸ್ಯೆಯನ್ನು ಪರಿಹರಿಸಲಾಗಿದೆ. ಮುಂದಿನ ತಿಂಗಳ ಒಳಗಾಗಿ ನಿಮಗೆ ನೀರು ಸಿಗುತ್ತದೆ. ಊರಿನ ಬಗ್ಗೆ ನೀವು ಕೆಲ್ಸ ಮಾಡುತ್ತಿದ್ದೀರಾ ಅದನ್ನು ಮುಂದುವರೆಸಿ ಎಂದರು. ಶಾಸಕನಾಗಿ ಏನೇನು ಮಾಡಬಹುದು ಎನ್ನುವುದನ್ನು ನಾನು ಮಾಡಿದ್ದೇನೆ. ಬೀದಿ ದೀಪ ವ್ಯವಸ್ಥೆ ಮಾಡುತ್ತೇನೆ. ನನ್ನ ಕ್ಷೇತ್ರದಲ್ಲಿ 32 ಪಂಚಾಯತ್ ಗಳಲ್ಲಿ ಶೌಚಾಲಯ ಕೊಟ್ಟಿದ್ದೇನೆ. ನನ್ನ ಯೋಜನೆ ಎಲ್ಲರಿಗೂ ಮನೆ, ಎಲ್ಲರಿಗೂ ಶಿಕ್ಷಣ, ಎಲ್ಲರಿಗೂ ಶೌಚಾಲಯ, ಎಲ್ಲರಿಗೂ ವಿದ್ಯುತ್, ಎಲ್ಲರಿಗೂ ಅನಿಲ ಇದನ್ನು ನಾನು ನೀಡಿದ್ದೇನೆ ಎಂದರು. ಸಿಂದು ನಾಯ್ಕ ಮಾತನಾಡಿ. ವರ್ಷದ ಕೊನೆಯ ಹಂತ ವಾರ್ಷಿಕ ಸಂಬ್ರಮ, ನಮ್ಮ ಮಕ್ಕಳ ಸಾಧನೆ ಗುರುತಿಸುವುದು ವಾರ್ಷಿಕ ಸಮ್ಮೇಳನ ಎಂದರು.

RELATED ARTICLES  16 ವಿದ್ಯಾರ್ಥಿಗಳು 600 ಕ್ಕೆ 600 ಅಂಕ : ಕುಮಟಾ ಸರಸ್ವತಿ ಪಿ.ಯು ಕಾಲೇಜ್ ವಿದ್ಯಾರ್ಥಿಗಳ ಸಾಧನೆ.

ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಮಂಜುನಾಥ್ ನಾಯ್ಕ, ಸಿಂಧು ನಾಯ್ಕ, ಗೋಪಾಲ ನಾಯ್ಕ, ತಾ.ಪಂ ಸದಸ್ಯೆ ಗೌರಿ ಗಜಾನನ ದೇವಾಡಿಗ, ಕೇಶವ ಬಲಸೆ, ನಾಗಪ್ಪ ಕೊಲ್ಲೂರು ದೇವಾಡಿಗ ಉಪಸ್ಥಿತರಿದ್ದರು.

RELATED ARTICLES  ಕೋಳಿಗಳನ್ನು ತುಂಬಿದ ಬಾಕ್ಸ್ ಕಳ್ಳತನ ಆರೋಪಿಗಳು ಅಂದರ್.

ಸಭಾ ಕಾರ್ಯಕ್ರಮದ ನಂತರ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಶ್ರೀ ಅನಂತ ಪದ್ಮನಾಭ ಯಕ್ಷಗಾನ ಮಂಡಳಿ ಪೆರ್ಡೂರು ಮೇಳದವರಿಂದ *ಅಹಂ ಬ್ರಹ್ಮಾಸ್ಮಿ*ಯಕ್ಷಗಾನ ಪ್ರದರ್ಶನ ನಡೆಯಿತು.