ಮುಂಬೈ: ಭಾರತೀಯ ಷೇರುಮಾರುಕಟ್ಟೆ ಮಂಗಳವಾರ ಮತ್ತೊಂದು ದಾಖಲೆ ನಿರ್ಮಿಸಿದ್ದು, ಇದೇ ಮೊದಲ ಬಾರಿಗೆ ಸೆನ್ಸೆಕ್ಸ್ 36 ಸಾವಿರ ಗಡಿ ಗಾಟಿದ್ದು, ನಿಫ್ಟಿ 11 ಸಾವಿರ ಅಂಕಗಳ ಗಡಿದಾಟಿದೆ.

ಮಂಗಳವಾರ ಬೆಳಗ್ಗೆ ಮಾರುಕಟ್ಟೆ ಆರಂಭವಾಗುತ್ತಿದ್ದಂತೆಯೇ ಸೆನ್ಸೆಕ್ಸ್ 238.53 ಅಂಕಗಳ ಏರಿಕೆಯೊಂದಿಗೆ 36,036.15 ಅಂಕಗಳಿಗೆ ಏರಿಕೆಯಾಗಿದ್ದು, ಅಂತೆಯೇ ನಿಫ್ಟಿ ಕೂಡ 72.50 ಅಂಕಗಳ ಏರಿಕೆಯೊಂದಿಗೆ 11, 040.25 ಅಂಕಗಳಿಗೆ ಏರಿಕೆಯಾಗಿದೆ. ಬೆಳಗಿನ ವಹಿವಾಟಿನಲ್ಲಿ ಸೆನ್ಸೆಕ್ಸ್ ಶೇ.0.68ರಷ್ಟು ಪ್ರಗತಿ ಸಾಧಿಸಿದ್ದು, ನಿಫ್ಟಿ ಕೂಡ ಶೇ0.68ರಷ್ಟು ಪ್ರಗತಿ ಸಾಧಿಸಿದೆ.

RELATED ARTICLES  ಇಂದಿನ ದಿನ ನಿಮ್ಮ ಪಾಲಿಗೆ ಹೇಗಿದೆ ಗೊತ್ತಾ? 26/04/2019 ರ ದಿನ ಭವಿಷ್ಯ ಇಲ್ಲಿದೆ ನೋಡಿ.

ರಿಲಯನ್ಸ್ ಇಂಡಸ್ಟ್ರೀಸ್, ಇನ್ಫೋಸಿಸ್ ಮತ್ತು ಹೆಚ್ ಡಿಎಫ್ ಸಿ ಬ್ಯಾಂಕ್ ನ ಷೇರುಗಳ ಮೌಲ್ಯ ಏರಿಕೆಯಾಗಿದ್ದು, ಆಕ್ಸಿಸ್ ಬ್ಯಾಂಕ್ ನ ಷೇರುಗಳ ಮೌಲ್ಯದಲ್ಲಿ ಶೇ.2.06ರಷ್ಚು ಮತ್ತು ಇನ್ಫೋಸಿಸ್ ಸಂಸ್ಥೆಯ ಷೇರುಗಳ ಮೌಲ್ಯದಲ್ಲಿ ಶೇ.1.76ರಷ್ಟು ಏರಿಕೆ ಕಂಡುಬಂದಿದೆ. ಉಳಿದಂತೆ ಒಎನ್ ಜಿಸಿ, ಕೋಲ್ ಇಂಡಿಯಾ, ಟಾಟಾ ಸ್ಟೀಲ್ ಸಂಸ್ಥೆಯ ಷೇರುಗಳು ಶೇ.1.3ರಷ್ಟು ಮೌಲ್ಯ ಹೆಚ್ಚಿಸಿಕೊಂಡಿವೆ.

RELATED ARTICLES  ಗ್ರಾಹಕರನ್ನು ಸುಲಿಗೆ ಮಾಡುವ ಹೊಟೆಲ್ಗಳು.