ಲಂಡನ್: ಸಿಗರೇಟ್ ನ ಗಮತ್ತು ಹೇಗಿರುತ್ತದೆ ಎಂಬುದನ್ನು ತಿಳಿಯುವ ಸಲುವಾಗಿ ಒಂದೇ ಒಂದು ಸಿಗರೇಟ್ ಎಂದು ಶುರು ಮಾಡುವ ಬಹುತೇಕ ಮಂದಿ ನಂತರ ನಿತ್ಯ ಧೂಮಪಾನಿಗಳಾಗುತ್ತಾರೆ ಎಂಬ ಆತಂಕಕಾರಿ ಅಂಶವನ್ನು ಸಂಶೋಧನಕಾರರು ಬಹಿರಂಗಪಡಿಸಿದ್ದಾರೆ.

ಸಂಶೋಧನೆಯಲ್ಲಿ ಹೆಚ್ಚು ಮಂದಿ ತಾವು ಮೊದಲ ಬಾರಿಗೆ ಸಿಗರೇಟ್ ಸೇದಿದ್ದು ನಂತರ ಅದು ದಿನ ನಿತ್ಯದ ಚಟ ಅಂಟಿಕೊಂಡಿತು ಎಂಬುದನ್ನು ಹಲವು ಮಂದಿ ಒಪ್ಪಿಕೊಂಡಿದ್ದಾರೆ ಎಂದು ಲಂಡನ್ ನ ಕ್ವೀನ್ ಮೇರಿ ವಿಶ್ವವಿದ್ಯಾಲಯದ ಪ್ರೊಫೆಸರ್ ಪೀಟರ್ ಹಜೆಕ್ ಹೇಳಿದ್ದಾರೆ.

RELATED ARTICLES  ಹಾಲು ಮತ್ತು ಬೆಲ್ಲ ಅನೇಕ ರೋಗಗಳ ನಿವಾರಣೆಗೆ ರಾಮ ಬಾಣ!

ಯಾವುದೇ ವ್ಯಸನಕಾರಿ ನಡವಳಿಕೆಯು ಮೊದಲು ಪ್ರಾಯೋಗಿಕವಾಗಿದ್ದು ನಂತರ ಅದು ದಿನ ನಿತ್ಯದ ಆಚರಣೆಗೆ ದೂಡುವ ಒಂದು ಪ್ರಮುಖ ಹೆಗ್ಗುರುತಾಗಿದೆ. ಮನರಂಜನೆಗಾಗಿ ಮಾಡುವ ಕೆಲ ವ್ಯವಸಕಾರಿ ನಡವಳಿಕೆಯೂ ನಂತರ ನಿರಂತರ ಅವಶ್ಯಕತೆಯಾಗಿ ಪರಿವರ್ತನೆಗೊಳ್ಳುತ್ತದೆ ಎಂದು ನಿಯತಕಾಲಿಕೆಯಲ್ಲಿ ಪ್ರಕಟವಾದ ವರದಿಯಲ್ಲಿ ನಿಕೋಟಿನ್ ಮತ್ತು ತಂಬಾಕು ರಿಸರ್ಚ್ ಎಂಬ ಅಧ್ಯನಯದ ನೇತೃತ್ವ ವಹಿಸಿದ್ದ ಹಜೆಕ್ ಹೇಳಿದ್ದಾರೆ.

ಮೊದಲ ಬಾರಿಗೆ ಸಿಗರೇಟ್ ಸೇದುವವರು ನಂತರ ದೈನಂದಿನ ಧೂಮಪಾನಿಗಳಾಗಿ ಪರಿವರ್ತನೆಗೊಳ್ಳುತ್ತಾರೆ ಎಂಬ ಅಂಶವನ್ನು ನಾವು ಕಂಡುಕೊಂಡಿದ್ದೇವೆ. ಈ ಅಧ್ಯಯನ ಮೂಲಕ ಆರಂಭಿಕ ಹಂತದ ಸಿಗರೇಟ್ ಪ್ರಯೋಗವನ್ನು ತಡೆಗಟ್ಟುವ ಅಂಶವನ್ನು ದೃಢಪಡಿಸಲು ಸಹಾಯ ಮಾಡುತ್ತದೆ ಎಂದರು.

RELATED ARTICLES  ಈ ಬೀಜಗಳನ್ನು ತಿನ್ನುವುದರಿಂದ ಜೀವನದಲ್ಲಿ ಎದೆನೋವು ಕಾಣಿಸಿಕೊಳ್ಳುವುದಿಲ್ಲ.

ಸಂಶೋಧಕರ ಪ್ರಶ್ನೆಗಳಿಗೆ ಒಟ್ಟಾರೆ ಶೇಖಡ 68.9ರಷ್ಟು ಮಂದಿ ಉತ್ತರಿಸಿದ್ದು ಇವರೆಲ್ಲಾ ಮೊದಲು ಪ್ರಯೋಗಿಕವಾಗಿ ಸಿಗರೇಟ್ ಸೇದಿದ್ದು ನಂತರ ದಿನನಿತ್ಯ ಧೂಮಪಾನಿಗಳಾದೆವು ಎಂದು ಹೇಳಿದ್ದಾರೆ. ಇನ್ನು 215,000 ಮಂದಿ ತಾವು ಸಿಗರೇಟ್ ಚಟದಿಂದ ಹೊರಬರಲು ಪ್ರಯತ್ನಿಸುತ್ತೇವೆ ಎಂದು ಹೇಳಿರುವುದಾಗಿ ಸಂಶೋಧಕರು ತಿಳಿಸಿದ್ದಾರೆ.