ಹೊನ್ನಾವರ: ವಂದೂರಿನ ಶ್ರೀ ಶಂಭುಲಿಂಗೇಶ್ವರ
ಸ್ಪೋಟ್ರ್ಸ ಕ್ಲಬ್‍ನ ಆಶ್ರಯದಲ್ಲಿ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದ ಹತ್ತಿರ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು ಹಮ್ಮಿಕೊಳ್ಳಲಾಗಿತ್ತು.

ಈ ಕಾರ್ಯಕ್ರಮವನ್ನು ಜಿ.ಪಂ.ಸದಸ್ಯ ಪ್ರದೀಪ ನಾಯಕ ದೇವರಬಾವಿ ಅವರು ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ಇಂತಹ ಗ್ರಾಮೀಣ ಪ್ರದೇಶಗಳಲ್ಲಿ ಇಂತಹ ಕ್ರೀಡಾ ಚಟುವಟಿಕೆಗಳು ಹೆಚ್ಚೆಚ್ಚು ನಡೆದಾಗ ಯುವಜನತೆಯಲ್ಲಿ , ವಿದ್ಯಾರ್ಥಿಗಳಲ್ಲಿ ಕ್ರೀಡಾಸಕ್ತಿ ಬೆಳೆಯುತ್ತದೆ. ಹಾಗೂ ಸಮಾಜದ ಒಗ್ಗೂಡುವಿಕೆಗೆ ಸಹಕಾರಿಯಾಗುತ್ತದೆ ಎಂದು ನುಡಿದರು.

ಕ್ರೀಡಾಂಗಣವನ್ನು ಉದ್ಘಾಟಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ
ಇಂತಹ ಕ್ರೀಡಾ ಚಟುವಟಿಕೆಗಳು ಪರಸ್ಪರರಲ್ಲಿ ಸೌಹಾರ್ದತೆಯನ್ನು ಮೂಡಿಸುತ್ತವೆ ಹಾಗೂ ಜಿಲ್ಲಾ ಹಾಗೂ ರಾಜ್ಯಮಟ್ಟದ ಕ್ರೀಡಾಪಟುಗಳಲ್ಲಿ ಸೌಹಾರ್ದತೆಯೊಂದಿಗೆ ತಮ್ಮ ತಾಲೂಕು, ಜಿಲ್ಲೆ, ರಾಜ್ಯ ಮತ್ತು ರಾಷ್ಟ್ರವೆಂಬ ಅಭಿಮಾನ ಮೂಡಿಸುತ್ತದೆ. ಪ್ರತಿಯೊಬ್ಬರೂ ಕೂಡಾ ಸಮಾಜ ಸೇವಾ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು, ಬಡವರಿಂದಲೂ ಕೂಡಾ ಸಮಾಜಸೇವೆ ಮಾಡಲು ಸಾದ್ಯ ಎನ್ನುವುದಕ್ಕೆ ಶ್ರೀಮತಿ ಕನ್ನೆ ಮುಕ್ರಿ ಅವರು ಸಾಕ್ಷಿಯಾಗಿದ್ದಾರೆ. ಗದ್ದೆ ನೆಟ್ಟಿ ಮಾಡಿ ಕಷ್ಟಪಟ್ಟು ದುಡಿದ ಹಣದಲ್ಲಿ ಇವರು ಸಮಾಜಸೇವಾ ಮನೋಭಾವನೆಯೊಂದಿಗೆ ಕಪಾಟನ್ನು ಶಾಲೆಗೆ ದೇಣಿಗೆಯನ್ನಾಗಿ ನೀಡಿ ಎಲ್ಲರಿಗೂ ಮಾದರಿಯಾಗಿದ್ದಾರೆ ಎಂದು ಅವರನ್ನು ಶ್ಲಾಘಿಸಿದರು. ಅಲ್ಲದೇ ಪ್ರತಿಯೊಬ್ಬರೂ ಸೇವಾ ಮನೋಭಾವನೆಯೊಂದಿಗೆ ದೇಶಾಭಿಮಾನವನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

RELATED ARTICLES  ಮಹಾತ್ಮಾ ಗಾಂಧಿ ಪ್ರೌಢಶಾಲೆ: ಸಂಪೂರ್ಣ ಉಚಿತ ಶಿಕ್ಷಣಕ್ಕೆ ಒಲವು -ಮೋಹನ ಶಾನಭಾಗ

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಿನಕರ ಶೆಟ್ಟಿ ಅವರು ಮಾತನಾಡಿ ಕಾರ್ಯಕ್ರಮದ ಸಂಘಟಕರನ್ನು ಶ್ಲಾಘಿಸಿದರು.

ಈ ಸಂದರ್ಭದಲಕ್ಲಿ ಬಿಜೆಪಿ ಧುರೀಣರಾದ ಸೋರಜ ನಾಯ್ಕ ಸೋನಿ, ಸುಬ್ರಾಯ ಗೌಡ, ಎಂ. ಜಿ. ಹೆಗಡೆ,

RELATED ARTICLES  ಸಂಗೀತೋತ್ಸವಕ್ಕೆ ಅದ್ದೂರಿ ಚಾಲನೆ: ವಿಷ್ಣುಗುಪ್ತ ವಿವಿಯಲ್ಲಿ ನಾದವೈಭವ

ಗೋವಿಂದ ಗೌಡ, ಶ್ರೀಕಾಂತ ಮೊಗೇರ, ಮಂಜುನಾಥ ಎಚ್. ಗೌಡ, ಶ್ರೀಮತಿ ರೂಪಾ ಪಟಗಾರ, ಶ್ರೀಮತಿ ಕನ್ನೆ ಮುಕ್ರಿ, ನಾಗಪ್ಪ ಗೌಡ ಕೂಜಳ್ಳಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.