ಕುಮಟಾ: ಜಿಲ್ಲಾ ಪಂಚಾಯತ್ ಉತ್ತರ ಕನ್ನಡ, ತಾಲೂಕಾ ಪಂಚಾಯತ್ ಕುಮಟಾ, ಗ್ರಾಮ ಪಂಚಾಯತ್ ಬಾಡ, ಧಾರವಾಡ ಸಹಕಾರಿ ಹಾಲು ಒಕ್ಕೂಟ ಹಾಗೂ ಪಶುಸಂಗೋಪನಾ ಇಲಾಖೆ ಕುಮಟಾ ಇವರ ಸಂಯುಕ್ತ ಆಶ್ರಯದಲ್ಲಿ, ಖಾದಿ ಗ್ರಾಮೋದ್ಯೋಗ ಕೇಂದ್ರದ ಆವರಣ ಬಾಡದಲ್ಲಿ “ಜಾನುವಾರು ಪ್ರದರ್ಶನ” ನಡೆಯಿತು.

IMG 20180123 WA0001

ಜಾನುವಾರ ಪ್ರದರ್ಶನದ ಸಭಾ ಕಾರ್ಯಕ್ರಮವನ್ನು ಶಾಸಕರು ಹಾಗೂ ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಶ್ರೀಮತಿ ಶಾರದಾ ಮೋಹನ್ ಶೆಟ್ಟಿಯವರು ದೀಪಬೆಳಗಿಸಿ ಉದ್ಘಾಟಿಸಿದರು.

RELATED ARTICLES  ಪತ್ರಕರ್ತರು ಖಡ್ಡಾಯವಾಗಿ ವಯಕ್ತಿಕ ವಿಮೆ ಮಾಡಿಸಿಕೊಳ್ಳಿ: ಸುಬ್ರಾಯ ಭಟ್ಟ

ಇದೇ ಸಂದರ್ಭದಲ್ಲಿ ಪಶುಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಚೆಕ್ ಗಳನ್ನು ಮತ್ತು ಜಾನುವಾರು ಪ್ರದರ್ಶನದಲ್ಲಿ ವಿಜೇತರಿಗೆ ಬಹುಮಾನಗಳನ್ನು ವಿತರಿಸಿ ಮತ್ತು ಕಾಗಾಲ, ಬಾಡ ಮತ್ತು ಹೊಲನಗದ್ದೆ ಪಂಚಾಯತಿಯ ಬಸವ ವಸತಿ ಯೋಜನೆಯ ಫಲಾನುಭವಿಗಳಿಗೆ ಆದೇಶ ಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು.

RELATED ARTICLES  ಅಪರೂಪದ ಕರು ಜನನ ಬೆನ್ನಿನ ಮೇಲೆ ಮೂಡಿದೆ ಬಾಲ?

ಹೈನುಗಾರಿಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ಇಂತಹ ಕಾರ್ಯಕ್ರಮಗಳು ಬಹು ಉಪಯುಕ್ತ, ರೈತರು ಇಂತಹ ಕಾರ್ಯಕ್ರಮದ ಉಪಯೋಗ ಪಡೆಯಬೇಕು ಎಂದರು.

ಈ ಸಂದರ್ಭದಲ್ಲಿ ವಿವಿಧ ರೀತಿಯ ಜಾನುವಾರು ಪ್ರದರ್ಶನ ಗಮನ ಸೆಳೆಯಿತು.

ಈ ಸಂದರ್ಭದಲ್ಲಿ ಜಿ.ಪಂ‌ ಸದಸ್ಯ ರತ್ನಾಕರ ನಾಯ್ಕ,ಗ್ರಾ.ಪಂ ಅಧ್ಯಕ್ಷರು,ಸದಸ್ಯರು ಹಾಗೂ ವಿವಿಧ ಇಲಾಖಾ ಅಧಿಕಾರಿಗಳು ಹಾಜರಿದ್ದರು.