ಕುಮಟಾ: ತಾಲೂಕಿನ ವಿವೇಕ ಯುವಬಳಗದಿಂದ ವಿವೇಕಾನಂದ ಜಯಂತಿಯ ಅಂಗವಾಗಿ “ವಿವೇಕ ಬಂದ ಧಾರಣೆ” ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.ವಿವೇಕಾನಂದರ ಜೀವನ ಹಾಗೂ ಸಾಧನೆಗಳ ಬಗ್ಗೆ ಮೆಲುಕು ಹಾಕಲಾಯಿತು.
ಕಾರ್ಯಕ್ರಮದ ವಕ್ತಾರರಾಗಿ ಮಾತನಾಡಿದ ಪ್ರಗತಿ ವಿದ್ಯಾಲಯ ಮೂರೂರಿನ ಪ್ರಾಂಶುಪಾಲರಾದ ಶ್ರೀ ಎಂ ಜಿ ಭಟ್ಟ ರವರು ವಿವೇಕಾನಂದರ ಆದರ್ಶಗಳನ್ನು ನಮ್ಮ ಜೀವನದಲ್ಲಿ ಅಳವಡಿಸಿ ಕೊಳ್ಳುವುದರ ಮೂಲಕ ದೇಶ ಸೇವೆಗೆ ಸಜ್ಜಾಗಬೇಕು ಎಂದರು.ಸಂಘಟನೆಯ ಸಂಸ್ಥಾಪಕರೂ ಆದ ಶ್ರೀ ಎಂ ಜಿ ಭಟ್ಟ ರವರು ಇಂತಹ ಕಾರ್ಯಕ್ರಮವನ್ನು ಹಳ್ಳಿ ಹಳ್ಳಿಗೂ ವಿಸ್ತರಿಸಿ ಯುವಕರಲ್ಲಿ ದೇಶಪ್ರೇಮದ ಕಿಚ್ಚು ಹಚ್ಚುವ ಇರಾದೆಯಿದೆ ಎಂದರು.
ನಂತರ ಮಾತನಾಡಿದ ಶ್ರೀ ಸುಬ್ರಾಯ್ ವಾಳ್ಕೆ ಯವರು ವಿವೇಕಾನಂದರ ಜಯಂತಿಯ ಅಂಗವಾಗಿ ಆಚರಿಸಿದ ಕಾರ್ಯಕ್ರಮ ಅರ್ಥಪೂರ್ಣವಾಗಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಪುರಸಭಾ ಸದಸ್ಯ ವಿಶ್ವನಾಥ ನಾಯ್ಕ ಹಾಗೂ ಪ್ರಮುಖರು ಭಾಗವಹಿಸಿದ್ದರು. ಯುವಕರು ಭಾಗವಹಿಸಿ ಪರಸ್ಪರ ಕಂಕಣ ಕಟ್ಟುವ ಮೂಲಕ ವಿವೇಕ ಬಂಧ ಧಾರಣೆ ಮಾಡಿದರು.