ಭಟ್ಕಳ: ಎವೀಸ್ ಪಬ್ಲಿಕೇಶನ್, ಕೊಲ್ಹಾಪುರ ಹಾಗೂ ಗ್ಯಾಲೆಕ್ಸಿ ಇನಮಾ, ಪುಣೆ ಇವರ ಸಹಯೋಗದಲ್ಲಿ ಹೈದರಾಬಾದನಲ್ಲಿ ನಡೆದ “ಎಡ್ವಂಟೇಜ್- 2018” ಮೂರು ದಿವಸಗಳ ತರಬೇತಿ ಕಾರ್ಯಕ್ರಮದಲ್ಲಿ ರಾಜ್ಯದ ಪ್ರತಿಷ್ಟಿತ ಅರ್ಬನ್‍ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಭಟ್ಕಳ ಅರ್ಬನ್‍ಕೋ-ಆಪರೇಟಿವ್ ಬ್ಯಾಂಕು“ಬ್ಯಾಂಕೊ ಪುರಸ್ಕಾರ್- 2017” ಪ್ರಶಸ್ತಿಗೆ ಭಾಜನವಾಗಿದೆ.

ಬ್ಯಾಂಕಿನ ಅಧ್ಯಕ್ಷ ಅಬ್ದುಲ್ ಮಜೀದ್ ಚೌಗುಲೆ ಹಾಗೂ ಬ್ಯಾಂಕಿನ ಪ್ರಧಾನ ಕಛೇರಿಯ ವ್ಯವಸ್ಥಾಪಕ ಶಂಭು ಹೆಗಡೆಯವರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ಸ್ವೀಕರಿಸಿದರು. ವಿವಿಧ ರಾಜ್ಯದಿಂದ ಭಾಗವಹಿಸಿದ ಸರಿ ಸುಮಾರು 500 ಕೋ-ಆಪರೇಟಿವ್ ಬ್ಯಾಂಕುಗಳಲ್ಲಿ ಪ್ರಶಸ್ತಿಯನ್ನು ತನ್ನದಾಗಿಸಿಕೊಳ್ಳುವಲ್ಲಿ ಭಟ್ಕಳ ಅರ್ಬನ್‍ಕೋ-ಆಪರೇಟಿವ್ ಬ್ಯಾಂಕ್ ಜಯಗಳಿಸಿದೆ.

RELATED ARTICLES  ಕುಮಟಾಕ್ಕೆ ಬಿ.ಕೆ ಹರಿಪ್ರಸಾದ್ ಭೇಟಿ.

ಈ ಪ್ರಶಸ್ತಿಯನ್ನು ತೆಲಂಗಾಣದ ಗೌರವಾನ್ವಿತ ಉಪ ಮುಖ್ಯಮಂತ್ರಿ ಮಹ್ಮದ್ ಮೆಹಮೂದ್ ಅಲಿ ಇವರು ನೀಡಿದರು. ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಿಕೊಂಡು ಗ್ರಾಹಕರಿಗೆ ಅತ್ಯುನ್ನತ ಬ್ಯಾಂಕಿಂಗ್ ಸೇವೆಯನ್ನು ನೀಡುವುದರ ಮೂಲಕ ಪ್ರಚಲಿತವಾದ ಭಟಕಳ ಅರ್ಬನ್‍ಕೋ-ಆಪರೇಟಿವ್ ಬ್ಯಾಂಕ್ ಕಳೆದ ಬಾರಿಯೂ “ರೂ.251 ರಿಂದ ರೂ.500 ಕೋಟಿ ಠೇವಣಿ ಗಳಿಸಿದ ಬ್ಯಾಂಕ್ ವಿಭಾಗದಲ್ಲಿ “ಬ್ಯಾಂಕೊ ಪುರಸ್ಕಾರ್-2016” ಪ್ರಶಸ್ತಿಯನ್ನು ಪಡೆದಿರುವುದು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ.

RELATED ARTICLES  ಇಂದು ಉತ್ತರ ಕನ್ನಡದಲ್ಲಿ ಮೂರು ಜನರಿಗೆ ಕೊರೋನಾ ಪಾಸಿಟೀವ್..! ಅಂಕೋಲಾಕ್ಕೂ ಕಾಲಿಟ್ಟ ಕೊರೋನಾ