ಬೆಳಕು ಗ್ರಾಮೀಣಾಭಿವೃದ್ಧಿಟ್ರಸ್ಟ್ನ ಆಶ್ರಯದಲ್ಲಿ ಗೋಕರ್ಣದ ಶ್ರೀ ಸದ್ಗುರು ನಿತ್ಯಾನಂದ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ, ಸನ್ಮಾನ, ಹಾಗೂ ನ್ಯಾಷನಲ್ ಡಿಜಿಟಲ್ ಲಿಟರಸಿ ಮಿಷನ್ ಅಡಿಯಲ್ಲಿ ಉತ್ತಿರ್ಣರಾದ ವಿಧ್ಯಾರ್ಥಿಗಳಿಗೆ ಪ್ರಮಾಣ ವಿತರಣಾ ಕಾರ್ಯಕ್ರಮವು 22/1/2018 ರಂದು ಜರುಗಿತು.
ಈ ಕಾರ್ಯಕ್ರಮವನ್ನು ಬೆಳಕು ಟ್ರಸ್ಟ್ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಉಧ್ಟಾಟಿಸಿದರು. ನಂತರ ಮಾತನಾಡಿ – ಈ ಕಾರ್ಯಕ್ರಮವನ್ನು ಮೊಟ್ಟ ಮೊದಲು ಈ ಶಾಲೆಯಿಂದಲೆ ಆರಂಭಿಸಿದ್ದು ಕುಮಟಾ ಹೊನ್ನಾವರದ ಎಲ್ಲಾ ಪ್ರೌಢಶಾಲೆಗಳಲ್ಲಿ ಈ ಕಾರ್ಯಕ್ರಮ ನಿರಂತರವಾಗಿ ಜರುಗುತ್ತಿದ್ದು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ. ಈ ಶಾಲೆ ತೀರಾ ಹಿಂದುಳಿದ ಪ್ರದೇಶದಲ್ಲಿದ್ದು ಅನೇಕ ಸೌಲಭ್ಯಗಳಿಂದ ವಂಚಿತವಾಗಿದೆ.ಆದರೆ ವಿಧ್ಯಾರ್ಥಿಗಳ ಕಲಿಕೆಗೆ ಯಾವುದೇತೊಂದರೆಉಂಟಾಗಿಲ್ಲ.
ಪ್ರತಿಯೊಬ್ಬರಲ್ಲೂ ಒಂದಲ್ಲ ಒಂದು ರೀತಿಯ ಪ್ರತಿಭೆ, ಸಾಮಥ್ರ್ಯಇದ್ದೇಇರುತ್ತದೆ. ಆ ಪ್ರತಿಭೆಯನ್ನು ಹೊರತರಲು ಪ್ರಯತ್ನದೊಂದಿಗೆ ಕಠಿಣ ಪರಿಶ್ರಮ ವಹಿಸಿದರೆ ಖಂಡಿತ ಸಾಧ್ಯ. ಮಕ್ಕಳಲ್ಲಿರುವ ಪ್ರತಿಭೆಯನ್ನುಅವರತಂದೆತಾಯಿ, ಶಿಕ್ಷಕರು, ಈ ಸಮಾಜ ಗುರುತಿಸಿ ಸೂಕ್ತ ಮಾರ್ಗದರ್ಶನ ನೀಡಬೇಕು ಹಾಗೂ ಅದಕ್ಕೆ ಪೂರಕವಾದ ವಾತಾವರಣ ನಿರ್ಮಿಸಿಕೊಡಬೇಕು. ಮಕ್ಕಳನ್ನು ಇತರೇ ವಿಧ್ಯಾರ್ಥಿಗಳೊಂದಿಗೆ ಹೋಲಿಸುವುದು ಸರಿಯಲ್ಲ .ಪ್ರತಿಯೊಬ್ಬ ವಿಧ್ಯಾರ್ಥಿಯಲ್ಲೂಆತ್ಮ ವಿಶ್ವಾಸ, ಆತ್ಮಸ್ಥೈರ್ಯವನ್ನುತುಂಬುವ ಕೆಲಸವಾಗಬೇಕು. ಸೋತೆಎಂದು ನಿರಾಶರಾಗದೆÉ ಮರಳಿ ಯತ್ನವ ಮಾಡಿದರೆಖಂಡಿತಯಶಸ್ಸು ಲಭಿಸುತ್ತದೆಎಂದರು.
ಮುಖ್ಯ ಅಥಿತಿಗಳಾಗಿ ಆಗಮಿಸಿದ ಅನಿಲ ನಾಡಕರ್ಣಿ, ಸದಾನಂದ ಹೊಸ್ಕಟ್ಟ, ವೆಂಕಟರಮಣ ಕವರಿ, ಅವರು ಮಾತನಾಡಿ ನಾಗರಾಜ ನಾಯಕತೊರ್ಕೆಯವರು ಸಮಾಜ ಸೇವೆಯಲ್ಲಿ ಎಷ್ಟು ಸಕ್ರಿಯರಾಗಿದ್ದಾರೆ ಎನ್ನುವುದಕ್ಕೆ ದಿನ ನಿತ್ಯ ಬರುವ ದಿನ ಪತ್ರಕೆಗಳೇ ಸಾಕ್ಷಿಯಾಗಿದೆ. ಪ್ರತಿ ದಿನ ಒಂದಲ್ಲ ಒಂದು ರೀತಿಯಅವರ ಸಮಾಜಸೇವೆಯ ಸುದ್ದಿ ಪ್ರಕಟಗೊಳ್ಳುತ್ತಲೇ ಇದೆ. ಆ ಭಗವಂತಅವರಿಗೆ ಆಯುರಾರೋಗ್ಯಗಳನ್ನು ನೀಡಿಕಾಪಾಡಲಿ.ಅವರಿಂದ ಈ ಸಮಾಜಕ್ಕೆಇನ್ನೂ ಹೆಚ್ಚಿನ ಸೇವೆ ದೊರೆಯಲಿ ಎಂದು ಹಾರೈಸಿ ಮುಂದಿನವರ್ಷ ಈ ಶಾಲೆಯಎಲ್ಲಾ ಮಕ್ಕಳೂ ಪ್ರತಿಭಾ ಪುರಸ್ಕಾರವನ್ನು ಪಡೆಯುವಂತಾಗಲಿ ಎಂಬ ಆಶಯವನ್ನು ವ್ಯಕ್ತಪಡಿಸಿದರು.
ಈ ಕಾರ್ಯಕ್ರಮದಅಧ್ಯಕ್ಷತೆ ವಹಿಸಿದ ಶಾಲಾಭಿವೃದ್ಧಿ ಸಮಿತಿಯ ಸದಸ್ಯರೂ ಆದ ಅರುಣಕವರಿ ತೊರ್ಕೆ ಅವರು ಮಾತನಾಡಿ ನಾಗರಾಜ ನಾಯಕ ತೊರ್ಕೆ ಯವರು ತಾವು ಕಲಿತ ಈ ಶಾಲೆಯ ಬಗ್ಗೆ ಅಪಾರವಾದ ಪ್ರೀತಿಯನ್ನು ಹೊಂದಿದ್ದು ಈ ಶಾಲೆಯಅಭಿವೃದ್ಧಿಗಾಗಿ 1 ಲಕ್ಷ ರೂಪಾಯಿಗಳ ದೇಣಿಗೆ ನೀಡಿರುತ್ತಾರೆ. ಮುಂದಿನವರ್ಷ 100% ಫಲಿತಾಂಶ ಪಡೆಯುವಉದ್ದೇಶವನ್ನು ಹೊಂದಿದ್ದು ಈ ಬಗ್ಗೆ ಶಾಲಾ ಸಮಿತಿ ಹಾಗೂ ಶಿಕ್ಷಕರು ವಿಶೇಷ ಕಾಳಜಿ ವಹಿಸುತ್ತೇವೆ ಎಂದರು.
ಇದೇ ವೇದಿಕೆಯಲ್ಲಿ ಮುಖ್ಯಾಧ್ಯಾಪಕರಾದ ಶಾರದಾ ಬಿ. ನಾಯಕ ಹಾಗೂ ಶಾಲಾ ಸಮಿತಿಯ ಪರವಾಗಿಅರುಣಕವರಿತೊರ್ಕೆಅವರನ್ನು ಸನ್ಮಾನಿಸಿ ಗೌರವಿಸಿ ಎಸ್.ಎಸ್.ಎಲ್.ಸಿ.ಯಲ್ಲಿಅತಿ ಹೆಚ್ಚು ಅಂಕ ಗಳಿಸಿದ ನಿತ್ಯಶ್ರೀ ಜಿ. ಗೌಡ, ರೇಷ್ಮಾ ಪಟಗಾರಅವರನ್ನು ಪುರಸ್ಕರಿಸಲಾಯಿತು.
ಮುಖ್ಯಾಧ್ಯಾಪಕಿ ಶ್ರೀಮತಿ ಶಾರದಾ ಬಿ. ನಾಯಕಸ್ವಾಗತಿಸಿದರು. ಶೀಲಾ ಮೇಸ್ತ ನಿರೂಪಿಸಿದರು. ಶಿಕ್ಷಕ ಶ್ರೀನಿವಾಸ ನಾಯಕ ಪುರಸ್ಕøತರ ಪರವಾಗಿ ಅನಿಸಿಕೆ ವ್ಯಕ್ತಪಡಿಸಿ ಸರ್ವರನ್ನೂ ವಂದಿಸಿದರು