ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ಶ್ರೀ ಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ನೇತೃತ್ವದಲ್ಲಿ ಕಾರ್ಯನಿರ್ವಹಿಸುವ
ಹವ್ಯಕ ಮಹಾ ಮಂಡಲದ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿ ವಾಹಿನಿ ಸಹಕಾರದೊಂದಿಗೆ ಕಾಸರಗೋಡು ವಲಯ ವಿದ್ಯಾರ್ಥಿವಾಹಿನಿಯ ಪ್ರಾಯೋಜಕತ್ವದಲ್ಲಿ ಶ್ರೀ ಗೋಪಾಲಕೃಷ್ಣ ಹೈಸ್ಕೂಲ್ ಕೂಡ್ಲು, ರಾಮದಾಸನಗರ ದಲ್ಲಿ ತಾ 23-1-2018 ರಂದು ಹತ್ತನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಪರೀಕ್ಷಾ ತರಬೇತಿ ” ಪರೀಕ್ಷೆ-ನಿರೀಕ್ಷೆ ” ಕಾರ್ಯಕ್ರಮ ನಡೆಯಿತು.
ಶಾಲಾ ಮುಖ್ಯೋಪಾಧ್ಯಾಯ ರಾದ ಶ್ರೀಯುತ ಶ್ರೀ ಹರಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕಾಸರಗೋಡು ವಲಯ ಅಧ್ಯಕ್ಷ ಶ್ರೀ ಯುತ ರಮೇಶ ಭಟ್ ವೈ ವಿ ಪ್ರಾಸ್ತಾವಿಕ ಮಾತುಗಳನ್ನಾಡಿದರು .
ಶ್ರೀಯುತ ಉಂಡೆಮನೆ ವಿಶ್ವೇಶ್ವರ ಭಟ್ ವಿದ್ಯಾರ್ಥಿಗಳನ್ನು ಕಾರ್ಯಕ್ರಮದತ್ತ ಸೆಳೆಯುತ್ತಾ ವಿಶೇಷ ತರಗತಿ ಆರಂಭಿಸಿದರು. ಈಗಲೇ ಪರೀಕ್ಷಾ ತಯಾರಿ ನಡೆಸಿದರೆ ಸಾಮಾನ್ಯ ದಿನಕ್ಕೆ ನಾಲ್ಕು ಗಂಟೆ ತಯಾರಿ ಸಾಕಾಗುತ್ತದೆ. ದಿನ ಕಳೆದಂತೆ ತಯಾರಿ ಆರಂಭಿಸಿದರೆ ಕಲಿಕೆಯ ವೇಗ ಹೆಚ್ಚಾಗಿ ವಿಷಯಗಳನ್ನು ಸರಿಯಾಗಿ ಮನನ ಮಾಡದೆ ಎಡವುವ ಸಾಧ್ಯತೆ ಹೆಚ್ಚು. ಆದ್ದರಿಂದ ಸಾಕಷ್ಟು ಮೊದಲೇ ತಯಾರಿ ಅಗತ್ಯ ಎಂದರು. ಅಧ್ಯಯನ ಮಾಡುವಾಗ ಸರಿಯಾಗಿ ಅರ್ಥೈಸಿಕೊಂಡು ಮಾಡುವುದು ಬಹು ಮುಖ್ಯ ಅಂಶ ರ ಎಂಬುದನ್ನು ನೆನಪಿಸಿದರು, ಪರೀಕ್ಷೆಯ ತಯಾರಿ, ಪ್ರಶ್ನೆ ಪತ್ರಿಕೆಯ ಅಧ್ಯಯನ, ಉತ್ತರಿಸಬೇಕಾದ ರೀತಿ, ಸಮಯ ಪರಿಪಾಲನೇಯನ್ನು ಮಾಡುವುದರಿಂದ ಉತ್ತಮ ಅಂಕಗಳಿಸಲು ಸಾಧ್ಯ, ಹತ್ತನೇ ತರಗತಿಯ ಅನಂತರ ಪಿ. ಯು. ಸಿ ಯಲ್ಲಿ ಯಾವ ವಿಭಾಗವನ್ನು ತೆಗೆದುಕೊಂಡರೆ ಮುಂದಿನ ಶೈಕ್ಷಣಿಕ ಜೀವನದಲ್ಲಿ ಉನ್ನತಿ ಸಾಧಿಸಬಹುದು ಎಂಬುದನ್ನು ವಿದ್ಯಾರ್ಥಿಗಳಿಗೆ ಮನದಟ್ಟು ಮಾಡಿದರು, ವಿದ್ಯಾರ್ಥಿಗಳ ಸಂಶಯ ನಿವಾರಿಸಿದರು.
ಕಾರ್ಯಕ್ರಮದ ಕೊನೆಯಲ್ಲಿ ತರಗತಿ ನಡೆಸಿದ ಶ್ರೀಯುತ ವಿಶ್ವೇಶ್ವರ ಭಟ್ಟರಿಗೆ ಮುಖ್ಯೋಪಾಧ್ಯಾಯ ಶ್ರೀ ಹರಿಯವರು ಶಾಲು,ಹಣ್ಣುಹಂಪಲು ನೀಡಿ ಗೌರವಿಸಿದರು ಸ್ಥಳಾವಕಾಶವಿತ್ತು ಸಹಕರಿಸಿದ ಶೀ ಗೋಪಾಲಕೃಷ್ಣ ಹೈಸ್ಕೂಲ್ ನ ಆಡಳಿತ ವರ್ಗ ಕೇ ಕಾಸರಗೋಡು ವಲಯ ವತಿಯಿಂದ ಮುಳ್ಳೇರಿಯ ಮಂಡಲ ವೃತ್ತಿ ನಿರತ ವಿಭಾಗದಶ್ರೀಯುತ ವೈ. ಕೆ ಗೋವಿಂದ ಭಟ್ ಅವರು ಸ್ಮರಣಿಕೆ ಇತ್ತು ಗೌರವಿಸಿದರು . ಹವ್ಯಕ ಮಹಾಮಂಡಲ ಉಲ್ಲೇಖ ವಿಭಾಗದ ಬಳ್ಳಮೂಲೆ ಗೋವಿಂದ ಭಟ್, ಪ್ರಾಧ್ಯಾಪಕ ತಲ್ಪಣಾಜೆ ವೆಂಕಟ್ರಮಣ ಭಟ್, ತರಬೇತಿ ಗೇ ಸಹಾಯನೀಡಿದ ಕಂಪ್ಯೂಟರ್ ಅಧ್ಯಾಪಕ ಶ್ರೀ ಕೃಷ್ಣ ಉಪಸ್ಥಿತರಿದ್ದರು.
ಕಾರ್ಯಕ್ರಮಕೇ ಕಾಸರಗೋಡು ವಲಯ ಕಾರ್ಯದರ್ಶಿ ಉಳುವಾನ ಈಶ್ವರ ಭಟ್ಟ ಧನ್ಯವಾದವಿತ್ತರು.
ವರದಿ :ಕೇಶವಪ್ರಸಾದ ಎಡಕ್ಕಾನ ಮುಳ್ಳೇರಿಯಾ ಮಂಡಲ ವಿದ್ಯಾರ್ಥಿವಾಹಿನಿ ಪ್ರಧಾನ