ಕಾರವಾರ: ಅಖಿಲ ಭಾರತೀಯ ಸಾಹಿತ್ಯ ಪರಿಷತ್ ರಾಜ್ಯ ಉಪಾಧ್ಯಕ್ಷರಾಗಿ ಹಿರಿಯ ಪತ್ರಕರ್ತ ಹರಿಪ್ರಕಾಶ ಕೋಣೆಮನೆ ಅವರನ್ನು ಆಯ್ಕೆ ಮಾಡಲಾಗಿದೆ.

ಜ.21ರಂದು ಬೆಂಗಳೂರಿನ ಕೇಶವ ಶಿಲ್ಪದಲ್ಲಿ ನಡೆದ ಪರಿಷತ್ ಸಭೆಯಲ್ಲಿ ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಶೇವಿರೆ ಅವರು ಹರಿಪ್ರಕಾಶ ಕೋಣೆಮನೆ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಣೆ ಮಾಡಿದರು. ಈ ಸಮಯದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ರಘುನಂದನ ಭಟ್ಟ ನರೂರು ಇವರು ಉಪಸ್ಥಿತರಿದ್ದರು.

RELATED ARTICLES  ಕುಮಟಾ ಲಾಯನ್ಸ್ ರೇವಣಕರ್ ಕಣ್ಣಿನ ಆಸ್ಪತ್ರೆಗೆ ದೇಣಿಗೆ.

ಹರಿಪ್ರಕಾಶ ಕೋಣೆಮನೆ ಅವರು ಯಲ್ಲಾಪುರ ತಾಲೂಕಿನವರಾಗಿದ್ದು, ರಾಷ್ಟ್ರೀಯ ಸ್ವಯಂಸೇವಕ ಸಂಘ ಹಾಗು ವಿದ್ಯಾರ್ಥಿ ಪರಿಷತ್ತಿನಲ್ಲಿ ವಿಸ್ತಾರಕರಾಗಿ ಕೆಲಸ ಮಾಡಿದವರು. ಕನ್ನಡ ಪತ್ರಿಕೊದ್ಯಮ ಹಾಗು ಇನ್ನಿತರ ಸಾಮಾಜಿಕ ಕಾರ್ಯ ಚಟುವಟಿಕೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರಾಗಿದ್ದಾರೆ.

RELATED ARTICLES  ಒಕ್ಕಲಿಗರ ಸಮುದಾಯ ಭವನ ಉದ್ಘಾಟನೆ : ಸಹಸ್ರಾರು ಸಂಖ್ಯೆಯಲ್ಲಿ ಭಾಗವಹಿಸಿದ ಸಾರ್ವಜನಿಕರು