ಕಾರವಾರ:ಪ್ರೀತಿಗೆ ಭಾಷೆ, ಮಾತು ಮುಖ್ಯವಲ್ಲ. ಮನಸ್ಸುಗಳ ಮಿಲನವೇ ಸಾಕು ಎಂಬುದಕ್ಕೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ನಡೆದ ಮದುವೆಯೇ ಅದ್ಭುತ ಉದಾಹರಣೆಯಾಗಿದೆ.

ನಗರದ ನಂದನಗದ್ದಾದಲ್ಲಿ ಸಾಂಸ್ಕೃತಿಕ ನಗರ ಮೈಸೂರಿನ ಮೂಕ ವರ ಹಾಗೂ ಕರಾವಳಿಯ ಕಾರವಾರದ ಮುಕಿ ವಧು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮೈಸೂರಿನ ಹಿನ್ಕಲ್ ನಿವಾಸಿ ಅನಂತ ಹಾಗೂ ಕಾರವಾರದ ಪ್ರಿಯಾಂಕ ಎಂಬ ಜೋಡಿಯೇ ಗ್ರಹಸ್ಥಾಶ್ರಮದ ಮೆಟ್ಟಿಲು ಏರಿದ ಮೂಕ ಪ್ರೇಮಿಗಳು.

RELATED ARTICLES  ಕಣ್ಣುಪೊರೆ ಶಸ್ತ್ರಚಿಕಿತ್ಸೆ ಗೊಳಪಟ್ಟ 22 ಫಲಾನುಭವಿಗಳು.

ಮಾತು ಬಾರದ ಇಬ್ಬರ ಊರುಗಳು ಸಾವಿರ ಕಿ.ಮೀ. ದೂರವಿದ್ದರೂ ಕೂಡ ಮೌನ ಭಾಷೆಯಲ್ಲಿಯೇ ಪ್ರೀತಿಸಿ ಸತಿ ಪತಿಗಳಾದರು. ಪ್ರೀತಿಯು ಇಬ್ಬರನ್ನು ಒಂದಾಗಿಸಿದ್ದು ಈ ಪ್ರಣಯ ಪಕ್ಷಿಗಳು ಹಿರಿಯರ ಸಮ್ಮುಖದಲ್ಲಿ ಸಪ್ತಪದಿ ತುಳಿದರು. ಮದುವೆಯ ಸಾರ್ಥಕ ಕ್ಷಣದಲ್ಲಿ ಇವರ ನೂರಾರು ಸ್ನೇಹಿತರು ಭಾಗಿಯಾಗಿದ್ದರು.

ಇತ್ತೀಚೆಗೆ ಭಟ್ಕಳದಲ್ಲಿ ಸಮುದಾಯ ಭವನವೊಂದರ ಉದ್ಘಾಟನೆ ಕಾರ್ಯಕ್ರಮಕ್ಕೆ ಇವರಿಬ್ಬರು ಆಗಮಿಸಿದ್ದರು. ಈ ಸಂದರ್ಭದಲ್ಲಿ ಇಬ್ಬರಿಗೂ ಪರಿಚಯವಾಗಿತ್ತು. ಪರಿಚಯ ಸ್ನೇಹವಾಗಿ ಸ್ನೇಹ ಪ್ರೀತಿಗೆ ತಿರುಗಿತು. ಈ ಪ್ರೀತಿಯು ಈಗ ಮದುವೆ ವರೆಗೂ ತಂದಿರಿಸಿದೆ. ಮಾತು ಬಾರದ ಇವರಿಬ್ಬರು ಅತ್ಯಂತ ಬುದ್ಧಿವಂತರು. ಅನಂತ ಮೈಸೂರಿನ ಹೆಬ್ಬಾಳದ ಸಾಂಡ್ರಿಯಾ ಇಂಜಿನಿಯರಿಂಗ್ ಕನ್‌ಸ್ಟ್ರಟಿಂಗ್ ಕಂಪನಿಯಲ್ಲಿ ಉದ್ಯೋಗಿಯಾಗಿದ್ದು ಪ್ರಿಯಾಂಕ ಟೈಲರ್ ವೃತ್ತಿ ನಿರ್ವಹಿಸುತ್ತಿದ್ದಾರೆ.

RELATED ARTICLES  ಮಹಿಳೆಯರಿಗೂ ವರದಾನವಾಯಿತು ಉದ್ಯೋಗ ಖಾತರಿ ಯೋಜನೆ - ಉಮೇಶ ಮುಂಡಳ್ಳಿ