ಬೆಂಗಳೂರು: ಹಾಸನ ಜಿಲ್ಲಾಧಿಕಾರಿ ವರ್ಗಾವಣೆ ಸಂಬಂಧಿಸಿದಂತೆ ಸರ್ಕಾರದ ನಡೆಯನ್ನು ತೀವ್ರವಾಗಿ ವಿರೋಧಿಸಿರುವ ಮಾಜಿ ಪ್ರಧಾನಮಂತ್ರಿ ದೇವೇಗೌಡ ಅವರು, ಶ್ರವಣಬೆಳಗೊಳದಲ್ಲಿ ಗೊಮ್ಮಟೇಶ್ವರ ಭಗವಾನ್ ಬಾಹುಬಲಿಗೆ ಫೆ.7 ರಂದು ನಡೆಯಲಿರುವ ಮಹಾಮಸ್ತಕಾಭಿಷೇಕದ ಉದ್ಘಾಟನಾ ಕಾರ್ಯಕ್ರಮ ಬಹಿಷ್ಕರಿಸಲು ತೀರ್ಮಾನಿಸಿದ್ದಾರೆ.

ಮಹಾಮಜ್ಜನದ ಅದ್ದೂರಿ ಸಮಾರಂಭದಲ್ಲಿ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಭಾಗವಹಿಸುತ್ತಿದ್ದಾರೆ. ಮಾಜಿ ಪ್ರಧಾನಿಯಾಗಿ ಮತ್ತು ಹಾಸನ ಜಿಲ್ಲೆಯ ಸಂಸದಸನಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿ ರಾಷ್ಟ್ರಪತಿಗಳಿಗೆ ದೇವೇಗೌಡ ಅವರು ಗೌರವ ಸಲ್ಲಿಸಬೇಕಿತ್ತು. ಆದರೆ, ಸರ್ಕಾರದ ನಡೆ ನೋವುಂಟುಮಾಡಿದ್ದು, ಸರ್ಕಾರದ ನಡೆ ವಿರೋಧಿಸಿ ಸಮಾರಂಭವನ್ನು ಬಹಿಷ್ಕರಿಸಲಾಗುತ್ತದೆ ಎಂದು ದೇವೇಗೌಡ ಅವರು ತಿಳಿಸಿದ್ದಾರೆ.

RELATED ARTICLES  ದಿನಾಂಕ 17/05/2019ರ ದಿನ ಭವಿಷ್ಯ ಇಲ್ಲಿದೆ.

ಸಮಾರಂಭದಲ್ಲಿ ಗೈರು ಹಾಜರಾಗುವ ಕುರಿತು ರಾಷ್ಟ್ರಪತಿಗಳಿಗೇ ಪತ್ರ ಬರೆಯಲಾಗುವುದು. ಪತ್ರದಲ್ಲಿ ಸರ್ಕಾರದ ಕ್ರಮಗಳ ಕುರಿತು ವಿವರಿಸಲಾಗುತ್ತದೆ. ಇನ್ನು ಮುಂದೆ ಹಾಸನ ಜಿಲ್ಲೆಯಲ್ಲಿ ಜರುಗುವ ಕಾರ್ಯಕ್ರಗಳಲ್ಲಿ ಮುಖ್ಯಮಂತ್ರಿಗಳ ಜತೆ ವೇದಿಕೆ ಹಂಚಿಕೊಳ್ಳುವುದಿಲ್ಲ. ನನ್ನ ಜಿಲ್ಲೆ ಹಾಸನದಲ್ಲಿಯೇ ಇಂತಹ ಪರಿಸ್ಥಿತಿ ಇರುವಾಗ ಬೇರೆ ಜಿಲ್ಲೆಯಲ್ಲಿ ಇನ್ನು ಯಾವ ರೀತಿ ಪರಿಸ್ಥಿತಿ ಇರಬಹುದು ಎಂದು ಕಿಡಿಕಾರಿದ್ದಾರೆ.

RELATED ARTICLES  ಕೇಂದ್ರ ಸರ್ಕಾರ ಹೊಸ ಬಿ.ಇಡಿ ಕೋರ್ಸ್‌ಗೆ ಅಧಿಸೂಚನೆ :ನಾಲ್ಕೇ ವರ್ಷದಲ್ಲಿ ಪದವಿ ಮತ್ತು ಬಿಇಡಿ ಶಿಕ್ಷಣ ಎರಡೂ ಸಂಪೂರ್ಣ.

ಪೊಲೀಸರೇ ರಕ್ಷಣೆ ಕೋರಿ ಗೃಹ ಕಾರ್ಯದರ್ಶಿ ಅವರಿಗೆ ಮನವಿ ಮಾಡುತ್ತಿದ್ದಾರೆ ಗೃಹ ಇಲಾಖೆ ಸಲಹೆಗಾರ ಕೆಂಪಯ್ಯ ಅವರ ಅಧಿಕಾರದಲ್ಲಿ ನಾವು ಕೆಲಸ ಮಾಡಲು ಸಾಧ್ಯವಿಲ್ಲ. ಜನ ಹೊಡೆಯುತ್ತಾರೆ ಎಂಬುದಾಗಿ ಪೊಲೀಸರು ಹೇಳುತ್ತಾರೆ ಎಂದರೆ ಇನ್ನು ಯಾರಾದರೂ ಸರ್ಕಾರ ಎಂದು ಕರೆಯಲು ಸಾಧ್ಯವೇ. ಇಂತಹ ಕೆಟ್ಟ ಹಾಗೂ ಭ್ರಷ್ಟ ಸರ್ಕಾರವನ್ನು ಎಲ್ಲಿಯೂ ನೋಡಿಯೇ ಇಲ್ಲ ಎಂದಿದ್ದಾರೆ.