ಕಾರವಾರ: ಅಂಕೋಲಾದ ಅವರ್ಸಾ ಗ್ರಾಮದ ರವಿ ನಾಯ್ಕ ಎಂಬುವವರ ಮನೆಯ ಎದುರು ನಿಲ್ಲಿಸಿಟ್ಟಿದ್ದ ಸ್ವಿಫ್ಟ್ ಕಾರಿನ ಬ್ಯಾನೆಟ್‌ವೊಳಗೆ ಹೆಬ್ಬಾವೊಂದು ಪ್ರತ್ಯಕ್ಷವಾಗಿ ಕೆಲ ಕಾಲ ಜನರಲ್ಲಿ ಆತಂಕ ಉಂಟು ಮಾಡಿತು.

ಕಾರಿನ ಕೆಳಗೆ ಹಾವು ಹೋಗುತ್ತಿರುವುದನ್ನು ಸ್ಥಳೀಯರು ಕಂಡು ಮಾಲೀಕರಿಗೆ ತಿಳಿಸಿದ್ದರು. ಬಳಿಕ ಮಾಲೀಕ ರವಿ ನಾಯ್ಕ ಉರಗ ಪ್ರೇಮಿ ಮಹೇಶ್ ನಾಯಕ ಅವರಿಗೆ ಫೋನಾಯಿಸಿದರು. ತಕ್ಷಣ ಸ್ಥಳಕ್ಕಾಗಮಿಸಿದ ಮಹೇಶ್ ನಾಯಕ ಕಾರನ್ನ ಪರಿಶೀಲಿಸಿದಾಗ ಹೆಬ್ಬಾವು ಬ್ಯಾನೆಟ್ ಒಳಗೆ ಇರುವುದು ಕಂಡು ಬಂದಿದೆ.

RELATED ARTICLES  ಐಶಾರಾಮಿ ಕಾರಿನಲ್ಲಿ ಗೋ ಮಾಂಸ ಸಾಗಾಟ....!

ನಂತರ ಬಾಳೆಗುಳಿ ವೃತ್ತದ ಬಳಿಯ ಮಾರುತಿ ಶೋರೂಂಗೆ ತೆರಳಿ ಅಲ್ಲಿನ ಸಿಬ್ಬಂದಿ ಸಹಾಯದಿಂದ ಕಾರಿನ ಬ್ಯಾನೆಟ್ ತೆಗೆಸಿದಾಗ ಹಾವು ಚಲಿಸಲು ಪ್ರಾರಂಭಿಸಿತು. ತಕ್ಷಣ ಅವರು ಹೆಬ್ಬಾವನ್ನು ರಕ್ಷಿಸಿ ಅರಣ್ಯ ಪ್ರದೇಶಕ್ಕೆ ಸುರಕ್ಷಿತವಾಗಿ ಬಿಟ್ಟರು.

RELATED ARTICLES  ಅರಬೈಲ್ ಬಳಿ ಭೀಕರ ಅಪಘಾತ : ಐವರು ಮೆಡಿಕಲ್ ವಿದ್ಯಾರ್ಥಿಗಳಿಗೆ ಪೆಟ್ಟು