ಕಾರವಾರ: ಕಾರವಾರ ಯೋಜನಾ ಉದ್ಯೋಗ ವಿನಿಮಯ ಕೇಂದ್ರ,ದ ವತಿಯಿಂದ ಜನವರಿ 31 ರಂದು ಬೆಳಗ್ಗೆ 10 ರಿಂದ ಸಂಜೆ 4 ರ ವರೆಗೆ ಸರ್ಕಾರಿ ಕಲಾ ಮತ್ತು ವಿಜ್ಞಾನ ಮಹಾವಿದ್ಯಾಲಯ, ಮಾಲಾದೇವಿ ಗ್ರೌಂಡ ಹತ್ತಿರ, ಇಲ್ಲಿ ಉದ್ಯೋಗ ಮೇಳವನ್ನು ಹಮ್ಮಿಕೊಳ್ಳಲಾಗಿದೆ.

ಎಸ್.ಎಸ್.ಎಲ್.ಸಿ. ಪಿಯುಸಿ, ಐಟಿಐ, ಡಿಪ್ಲೋಮಾ, ಯಾವುದೇ ಡಿಗ್ರಿ ಅಥವಾ ಎಂ.ಎ., ಎಂ.ಎಸ್ಸಿ., ಹಾಗೂ ಎಂ.ಕಾಂ. ವಿದ್ಯಾರ್ಹತೆ ಹೊಂದಿರುವ ಅಭ್ಯರ್ಥಿಗಳಿಗಾಗಿ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಮೇಳದಲ್ಲಿ ಪ್ರತಿಷ್ಠಿತ ಖಾಸಗಿ ಕಂಪನಿಗಳು ಭಾಗವಹಿಸಲಿವೆ ಉದ್ಯೋಗ ನೋಂದಣಿಗಾಗಿ ತಮ್ಮ ವಿದ್ಯಾರ್ಹತೆಯ ಎಲ್ಲಾ ದಾಖಲಾತಿಗಳ ಜೆರಾಕ್ಸ್ ಪ್ರತಿಗಳು, ಆಧಾರ ಕಾರ್ಡ ಪ್ರತಿ, ಇತ್ತಿಚಿನ ಎರಡು ಭಾವಚಿತ್ರಗಳೂ ಮತ್ತು 5 ರೂ. ಅಂಚೆ ಚೀಟಿಯನ್ನೊಳಗೊಂಡ ಸ್ವ-ವಿಳಾಸ ಲಕೋಟೆಯನ್ನು ತರಲು ತಿಳಿಸಲಾಗಿದೆ.

RELATED ARTICLES  ಸನದಿ ವಿದ್ಯಾರ್ಥಿ ಕಾವ್ಯ ಪ್ರಶಸ್ತಿ’ ಸ್ಪರ್ಧೆಗೆ ಆಹ್ವಾನ

ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಳಿಗಾಗಿ ಕಛೇರಿಯನ್ನು ಖುದ್ದಾಗಿ ಅಥವಾ ದೂರವಾಣಿ ಸಂಖ್ಯೆ +91-9481403800 ಸಂಪರ್ಕಿಸಲು ಕಾರವಾರ ಯೋಜನಾ ಉದ್ಯೋಗ ವಿನಿಮಯ ಕೇಂದ್ರದ ಉದ್ಯೋಗಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

RELATED ARTICLES  ಹಬ್ಬ ಹಾಗೂ ಗ್ರಹಣದ ಬಗ್ಗೆ ಸ್ವರ್ಣವಲ್ಲೀ ಸಂಸ್ಥಾನದಿಂದ ಮಾಹಿತಿ