ಬೆಂಗಳೂರು: ಮಹದಾಯಿ, ಕಳಸಾ ಬಂಡೂರಿ ಯೋಜನೆ ಜಾರಿಗೆ ಆಗ್ರಹಿಸಿ ವಾಟಾಳ್ ನಾಗರಾಜ್ ಜನವರಿ 25ರಂದು ಕರೆ ನೀಡಿರುವ ಕರ್ನಾಟಕ ಬಂದ್ ಗೆ ಹಲವು ಸಂಘಟನೆಗಳು ಬೆಂಬಲ ನೀಡುವುದಿಲ್ಲ ಎಂದು ಹೇಳಿವೆ. ಏತನ್ಮಧ್ಯೆ ಗುರುವಾರ ಕರ್ನಾಟಕ ಬಂದ್ ವೇಳೆ ಏನೇನ್ ಇರುತ್ತೆ, ಏನೇನ್ ಇರಲ್ಲ ಎಂಬುದರ ಮಾಹಿತಿ ಇಲ್ಲಿದೆ..
ಏನೇನ್ ಇರುತ್ತೆ:
ಮೆಟ್ರೋ ಸೇವೆ ಇರಲಿದೆ. ಸರ್ಕಾರಿ ಶಾಲೆಗಳಿಗೆ ರಜೆ ಘೋಷಿಸಿಲ್ಲ. ಜಿಲ್ಲಾಧಿಕಾರಿಗಳಿಗೆ ರಜೆ ಘೋಷಣೆ ಅಧಿಕಾರ. ಹೋಟೆಲ್, ಕೆಎಸ್ ಆರ್ ಟಿಸಿ, ಬಿಎಂಟಿಸಿ ಬಸ್, ಆಸ್ಪತ್ರೆ, ಕ್ಲಿನಿಕ್, ಮೆಡಿಕಲ್ ಶಾಪ್.
ಏನೇನ್ ಇರಲ್ಲ:
ಎಪಿಎಂಸಿ ಮಾರುಕಟ್ಟೆ, ಚಲನಚಿತ್ರ ಮಂದಿರ, ಬೆಂ ವಿವಿ ಪದವಿ ಪರೀಕ್ಷೆ ಇಲ್ಲ, ಕೆಎಎಂಎಸ್ ಅಡಿಯಲ್ಲಿ ಬರುವ ಖಾಸಗಿ ಶಾಲೆಗಳಿಗೆ ರಜೆ,
ಬಂದ್ ಗೆ ಯಾವೆಲ್ಲ ಸಂಘಟನೆಗಳ ಬೆಂಬಲ:
ಹಮಾಲಿಗಳ ಸಂಘ, ಕರವೇ ನಾರಾಯಣ ಗೌಡ ಬಣ, ರಾಜಕುಮಾರ್ ಅಭಿಮಾನಿಗಳ ಸಂಘ, ಚಿಕ್ಕಬಳ್ಳಾಪುರ ಶಾಶ್ವತ ಹೋರಾಟಗಾರರ ಸಂಘ, ಕನ್ನಡ ಚಳವಳಿ ವಾಟಾಳ್ ಪಕ್ಷ, ಹಸಿರು ಸೇನೆ ರೈತ ಸಂಘಟನೆ, ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ. ವಕೀಲರ ಸಂಘ, ಲಾರಿ ಮಾಲೀಕರ ಸಂಘ, ಬಿಬಿಎಂಪಿ ಕಾರ್ಮಿಕರ ಸಂಘ, ಸಾಹಿತ್ ಪರಿಷತ್, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಕ್ರಿಯಾ ಸಮಿತಿ, ಹೋಟೆಲ್ ಮಾಲೀಕರ ಸಂಘ, ಆರ್ ಎಂಸಿ ಯಾರ್ಡ್,
ಬಂದ್ ಗೆ ವಿರೋಧ: ಅಖಿಲ ಕನ್ನಡ ಚಳವಳಿ ಸಮಿತಿ, ಕರ್ನಾಟಕ ಕಾರ್ಮಿಕ ವೇದಿಕೆ, ಕರ್ನಾಟಕ ಸಂಘಟನೆಗಳ ಒಕ್ಕೂಟ.
ಹಾಡಿನ ಮೂಲಕ ವಾಟಾಳ್ ಪ್ರಚಾರ:
ನಾಳೆಯ ಬಂದ್ ಗೆ ಬೆಂಬಲ ನೀಡಿ ಯಶಸ್ವಿಗೊಳಿಸುವಂತೆ ವಾಟಾಳ್ ನಾಗರಾಜ್ ಅವರು ಮೈಸೂರು ಬ್ಯಾಂಕ್ ವೃತ್ತದಿಂದ ಮೆಜೆಸ್ಟಿಕ್ ವರೆಗೆ ರಾಲಿ ನಡೆಸಿ ಹಾಡಿನ ಮೂಲಕ ಪ್ರಚಾರ ನಡೆಸಲು ಮುಂದಾಗಿದ್ದಾರೆ. ಯಾರೋ ನಾಲ್ಕು ಜನ ಬಂದ್ ಗೆ ಬೆಂಬಲ ನೀಡುವುದಿಲ್ಲ ಎಂದು ಹೇಳಿದ ಕೂಡಲೇ ಆಗಲ್ಲ ಎಂದು ತಿರುಗೇಟು ನೀಡಿದ್ದಾರೆ.
ಬೆಂಗಳೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್:
ನಾಳೆಯ ಕರ್ನಾಟಕ ಬಂದ್ ಹಿನ್ನೆಲೆಯಲ್ಲಿ ಬೆಂಗಳೂರಿನಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ಏರ್ಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ತಿಳಿಸಿದ್ದಾರೆ. ಬೆಂಗಳೂರು ನಗರದಲ್ಲಿ 50 ಕೆಎಸ್ ಆರ್ ಪಿ ತುಕಡಿ, 15 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದೆ. ಹೋಮ್ ಗಾರ್ಡ್ಸ್, ಕೆಎಆರ್ ತುಕಡಿಯನ್ನು ನಿಯೋಜಿಸಲಾಗುವುದು ಎಂದರು.
ಅಂಗಡಿ, ಮುಂಗಟ್ಟುಗಳನ್ನು ಬಲವಂತವಾಗಿ ಬಂದ್ ಮಾಡಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.