ಇಡಗುಂಜಿ:ಕರ್ನಾಟಕದ ಕರಾವಳಿ ಪ್ರದೇಶಗಳು ತಮ್ಮದೇ ಆದ ಪ್ರಾಕೃತಿಕ ಸೌಂದರ್ಯ ಹೊಂದಿದ್ದು, ಎಲ್ಲಿ ನೋಡಿದರೂ ನದಿ, ಸರೋವರ, ಝರಿ, ಜಲಪಾತಗಳಲ್ಲದೇ ಇಲ್ಲಿರುವ ಪ್ರಾಚೀನ ಪುರಾತನ ದೇವಾಲಯಗಳು ಕೂಡ ತಮ್ಮದೇ ಆದ ಪೌರಾಣಿಕ ಹಿನ್ನೆಲೆಯನ್ನು ಹೊಂದಿದೆ. ಇಂಥ ಅದ್ಭುತ ಪ್ರಕೃತಿ ಸೊಬಗನ್ನೂ ಮತ್ತು ಪೌರಾಣಿಕ ಹಿನ್ನೆಲೆಯನ್ನೂ ಹೊಂದಿದ ಶ್ರೀ ಕ್ಷೇತ್ರವೇ ಇಡಗುಂಜಿ.

ಇಂತಹ ಅದ್ಭುತ ಕ್ಷೇತ್ರದ ರಥೋತ್ಸವ ಭಕ್ತಿ ಭಾವದಿಂದ ನಡೆಯಿತು.ಜನರು ಹರಕೆ ತೀರಿಸಿ ಅಥ ಎಳೆದು, ರಥಗಾಣಿಕೆ ಸಮರ್ಪಿಸಿದರು.

ಶಿವನ 12 ಜ್ಯೋತಿರ್ಲಿಂಗಗಳಲ್ಲಿ ಒಂದಾಗಿರುವ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣ ಕ್ಷೇತ್ರದಿಂದ ಕೇವಲ 64 ಕಿ.ಮೀ ಮತ್ತು ಹೊನ್ನಾವರ ತಾಲೂಕಿನಿಂದ ಕೇವಲ 14 ಕಿ.ಮೀ ಅಂತರದಲ್ಲಿದೆ ಇಡಗುಂಜಿ. ಶರಾವತಿ ನದಿಯ ತಟದಲ್ಲಿರುವ ಈ ಕ್ಷೇತ್ರಕ್ಕೆ ಮುಂಚೆ ಇಡಾಕುಂಜ ಎಂದು ಕರೆಯಲಾಗುತ್ತಿತ್ತು. ಇಡಾ ಎಂದರೆ ಆನೆ, ಕುಂಜ ಎಂದರೆ ಸಸ್ಯರಾಶಿ. ದಟ್ಟವಾದ ಗೋಂಡಾರಣ್ಯದ ಮಧ್ಯದಲ್ಲಿರುವ ಈ ಪ್ರದೇಶ ನಂತರ ಇಡಗುಂಜಿಯಾಗಿ ರೂಢಿಯಲ್ಲಿದೆ. ಎಲ್ಲಾ ದೇವರುಗಳಲ್ಲಿ ಗಣೇಶನೇ ಪ್ರಥಮ ಪೂಜ್ಯನು.ಇಂತಹ ಸ್ಥಾನಕ್ಕೆ ಇಂದು ಭಕ್ತ ಸಾಗರವೇ ಹರಿದು ಬಂದಿತ್ತು.

RELATED ARTICLES  ಪುಟ್ಟ ಮಗುವಿನೊಂದಿಗೆ ಮಹಿಳೆ ನಾಪತ್ತೆ : ಹೊನ್ನಾವರದ ಮಂಕಿಯಲ್ಲಿ ಪ್ರಕರಣ

ವಕ್ರತುಂಡ, ಏಕದಂತ, ಕೃಷ್ಣ ಪಿಂಗಾಕ್ಷ, ಗಜವಕ್ರ, ಲಂಬೋದರ, ವಿಕಟನಾವ, ವಿಘ್ನರಾಜೇಂದ್ರ, ಧುಮ್ರವರ್ಣ, ಬಾಲಚಂದ್ರ, ವಿನಾಯಕ, ಗಣಪತಿ, ಗಜಾನನ ಹೀಗೆ 12 ಹೆಸರುಗಳನ್ನು ಹೊಂದಿದ ವಿಘ್ನನಿವಾರಕ, ವಿN°àಶ್ವರನಾಗಿ ಭಕ್ತರ ಸಂಕಷ್ಟ ನಿವಾರಕನಾಗಿದ್ದಾನೆ. ಎಲ್ಲಾ ಸಮುದಾಯದವರಿಗೂ ಈ ಕ್ಷೇತ್ರವು ಪ್ರಮುಖ ಯಾತ್ರಾಸ್ಥಳವಾಗಿದ್ದು ನಂಬಿ ಬಂದ ಭಕ್ತರ ಎಲ್ಲಾ ಇಷ್ಟಾರ್ಥಗಳನ್ನು ಪೂರೈಸಲು ಗಣೇಶ ಇಲ್ಲಿ ಬಾಲಗಣಪತಿಯ ರೂಪದಲ್ಲಿ ನೆಲೆಸಿದ್ದಾನೆ. ಈ ಬಾಲಗಣಪತಿಯ ಸನ್ನಿದಿಗೆ ಭಕ್ತರು ಪದೇ ಪದೇ ಆಗಮಿಸಿ ತಮ್ಮ ಹರಕೆ ಸಲ್ಲಿಸುವುದು ಈ ಕ್ಷೇತ್ರದ ಮಹಿಮೆಗೆ ನಿದರ್ಶನವಾಗಿದೆ. ಸಂಕಷ್ಟಿ, ವಿನಾಯಕ ಚೌತಿ, ರಥಸಪ್ತಮಿ ಇನ್ನಿತರ ಹಬ್ಬ ಹರಿದಿನಗಳಲ್ಲಿ ಮತ್ತು ವಿಶೇಷ ದಿನಗಳಲ್ಲಿ ಇಲ್ಲಿ ಭಕ್ತರ ದಂಡೇ ಹರಿದು ಬರುತ್ತದೆ. ಜಾತ್ರೆಯ ಸಂದರ್ಭದಲ್ಲಿ ಜನ ಜಂಗುಳಿಯಿಂದ ತುಂಬಿ ತುಳುಕಿದ್ದು ಕಂಡು ಬಂತು.

RELATED ARTICLES  ಇಂದಿನ(ದಿ-14/01/2019) ಉತ್ತರಕನ್ನಡ ಜಿಲ್ಲೆಯ ಪ್ರಮುಖ ತಾಲೂಕುಗಳ ಅಡಿಕೆ ಧಾರಣೆ.