ಭಟ್ಕಳ: ಇಲ್ಲಿನ ತಾಲೂಕಾಸ್ಪತ್ರೆಯ ಲೆಕ್ಕ ಪತ್ರ ಪರಿಶೀಲನೆಗೆ ಜಿಲ್ಲಾ ಆರೋಗ್ಯಾಧಿಕಾರಿಯ ಆದೇಶದ ಮೇರೆಗೆ ಜಿಲ್ಲಾ ಆರೋಗ್ಯ ಇಲಾಖೆ ಕಛೇರಿಯ ಆಡಳಿತ ಸಹಾಯಕ ಅಧಿಕಾರಿ ಶಿವಗಾಜು ನಾಯ್ಕ ನೇತೃತ್ವದ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಲ್ಲಿನ ತಾಲುಕಾಸ್ಪತ್ರೆಯ ಈ ಹಿಂದಿನ ಆಡಳಿತ ವೈದ್ಯಾಧಿಕಾರಿ ಹಾಗೂ ಕೆಲವೊಂದು ವೈದ್ಯರ ಕುರಿತಾಗಿ ಸಾರ್ವಜನಿಕರು ಹಾಗೂ ಕೆಲವು ಸಂಘಟನೆಗಳು ಲೆಕ್ಕ ಪತ್ರ ವಿಚಾರವಾಗಿ ದೂರು ಕೇಳಿ ಬಂದಿದ್ದರ ಹಿನ್ನೆಲೆಯಲ್ಲಿ ಇವೆಲ್ಲ ಅಂಶಗಳನ್ನು ಗಮನಕ್ಕೆ ಪಡೆದುಕೊಂಡು ಜಿಲ್ಲಾ ಆರೋಗ್ಯಾಧಿಕಾರಿಗಳು ಅವರ ಕಛೇರಿಯ ಆಡಳಿತ ಸಹಾಯಕ ಅಧಿಕಾರಿ ಶಿವಗಾಜು ನಾಯ್ಕ ನೇತೃತ್ವದ ತಂಡವನ್ನು ತಾಲುಕಾಸ್ಪತ್ರೆಗೆ ಕಳುಹಿಸಿ ಲೆಕ್ಕ ಪತ್ರ ಪರಿಶೀಲನೆಗೆ ಕೈಗೊಳ್ಳುವಂತೆ ಸೂಚನೆ ಮಾಡಿದ್ದರು.

ಬೆಳಿಗ್ಗೆಯಿಂದ ಸಂಜೆಯ ತನಕ ಜಿಲ್ಲೆಯಿಂದ ಬಂದ ಆಧಿಕಾರಿಗಳು ಆಸ್ಪತ್ರೆಯ ದಾಖಲೆ ಪತ್ರ ಹಾಗು ಹಣಕಾಸು ವಿಚಾರ ಸೇರಿದಂತೆ ಮುಖ್ಯವಾದ ಲೆಕ್ಕ ಪತ್ರಗಳ ಪರಿಶೀಲನೆ ನಡೆಸಿದರು. ಬಳಿಕ ಅಧಿಕಾರಿಗಳು ಆಸ್ಪತ್ರೆಯಲ್ಲಿನ ಅವ್ಯವಸ್ಥೆಯ ಬಗ್ಗೆ ಕುದ್ದು ಪರಿಶೀಲನೆ ನಡೆಸಿದ್ದು, ಒಂದು ಕ್ಷಣಕ್ಕೆ ಬಂದ ಅಧಿಕಾರಿಗಳಿಗೆ ಆಶ್ಚರ್ಯವಾಯಿತು. ಆಸ್ಪತ್ರೆಯಲ್ಲಿ ಕೇವಲ ಇಬ್ಬರೇ ರೋಗಿಗಳಿದ್ದು, ಆಸ್ಪತ್ರೆಯ ಬೆಡ್‍ಗಳು ಖಾಲಿ ಖಾಲಿಯಾಗಿದ್ದವು. ಆಸ್ಪತ್ರೆಯ ಕೆಲವೊಂದು ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು. ಇನ್ನು ಆಸ್ಪತ್ರೆಯ ಸ್ವಚ್ಛತೆ ಕಡೆಗಣನೆಗೆ ಬಗ್ಗೆ ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡು ಜವಾಬ್ದಾರಿಯುತ ಕೆಲಸ ಮಾಡಲು ಸೂಚನೆ ನೀಡಿದರು. ಇನ್ನು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಹುದ್ದೆ ಭರ್ತಿ ವಿಚಾರವೂ ಗೊಂದಲದಲ್ಲಿದ್ದು, ಈ ಗೊಂದಕ್ಕೆ ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿಯ ಆಡಳಿತ ಸಹಾಯಕ ಅಧಿಕಾರಿ ಶಿವಗಾಜು ನಾಯ್ಕ ಅವರು ಇಲ್ಲಿನ ಡಾ. ದಿನಕರ ಅವರನ್ನು ನೂತನವಾಗಿ ಆಡಳಿತ ವೈದ್ಯಾಧಿಕಾರಿಯಾಗಿ ನೇಮಿಸಲಾಯಿತು. ನಂತರ ಆಸ್ಪತ್ರೆಗೆ ಜಯ ಕರ್ನಾಟಕ ಸಂಘಟನೆಯ ಕಾರ್ಯಕರ್ತರು ಧಾವಿಸಿದ್ದು ಆಸ್ಪತ್ರೆಗೆ ಭೇಟಿ ನೀಡಿದ ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿಯ ಆಡಳಿತ ಸಹಾಯಕ ಅಧಿಕಾರಿ ಶಿವಗಾಜು ನಾಯ್ಕ ಅವರಿಗೆ ಆಸ್ಪತ್ರೆಯ ಅವ್ಯವಸ್ಥೆಯ ಬಗ್ಗೆ ವಿವರಿಸಿದರು.

RELATED ARTICLES  ಸಾರ್ವಭೌಮ ಗುರುಕುಲದಲ್ಲಿವಿದ್ಯಾರ್ಥಿ ಪರಿಷತ್ ಉದ್ಘಾಟನೆ

ಈ ಬಗ್ಗೆ ಮುಂದಿನ ದಿನದಲ್ಲಿ ಸಮಸ್ಯೆ ಪರಿಹಾರಕ್ಕೆ ಸೂಕ್ತ ಕ್ರಮವನ್ನು ಜರುಗಿಸಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಕಛೇರಿಯ ಆಡಳಿತ ಸಹಾಯಕ ಅಧಿಕಾರಿ ಶಿವಗಾಜು ನಾಯ್ಕ ತಿಳಿಸಿದರು. ಈ ಸಂಧರ್ಭದಲ್ಲಿ ಜಯ ಕರ್ನಾಟಕ ಸಂಘದ ತಾ. ಆಧ್ಯಕ್ಷ ಸುಧಾಕರ ನಾಯ್ಕ, ಪಾಂಡು ನಾಯ್ಕ, ನಾಗರಾಜ ಪೂಜಾರಿ, ವಿವೇಕ ನಾಯ್ಕ ಹಾಗೂ ಇತರರು ಉಪಸ್ಥಿತರಿದ್ದರು.

RELATED ARTICLES  ಉಪಚುನಾವಣೆಯ ಫಲಿತಾಂಶದ ನಂತರ ಮತ್ತೆ ಸಾರ್ವತ್ರಿಕ ಚುನಾವಣೆ ಎದುರಾಗಲಿದೆ: ದೇಶಪಾಂಡೆ

ಇಲ್ಲಿನ ಆಸ್ಪತ್ರೆಯಲ್ಲಿ ಒಟ್ಟು 15 ನರ್ಸಗಳಿರಬೇಕಾಗಿದ್ದಲ್ಲಿ ಕೇವಲ 9 ಮಂದಿ ನರ್ಸಗಳು ಕಾರ್ಯ ನಿರ್ವಹಿಸುತ್ತಿದ್ದು, ಆಸ್ಪತ್ರೆಗೆ ಬರುವ ರೋಗಿಗಳಿಗೆ ತೊಂದರೆಯಾಗುತ್ತಿದೆ. ಅದೇ ರೀತಿ ಆಸ್ಪತ್ರೆಯ ಔಷಧಾಲಯದ ಸಿಬ್ಬಂದಿಯ ಕೊರತೆಯೂ ಸಹ ಇದ್ದ ಕಾರಣ ಆಸಕ್ತ ಖಾಸಗಿ ಸಿಬ್ಬಂದಿಗಳಿಗೂ ಸಹ ಖಾಲಿ ಹುದ್ದೆಗೆ ನೇಮಕ ಮಾಡಲಾಗುವುದು. ಹಾಗೂ ಆಸ್ಪತ್ರೆಯಲ್ಲಿನ ಕೆಲವೊಂದು ವೈದ್ಯರು ರಜೆಯಲ್ಲಿದ್ದು ಹಾಗೂ ಇನ್ನು ಕೆಲವರು ತರಬೇತಿಯಲ್ಲಿದ್ದಾರೆ. ಈ ಕುರಿತು ಜಿಲ್ಲಾ ಆರೋಗ್ಯಾಧಿಕಾರಿಗಳಿಗೆ ವರದಿ ಸಲ್ಲಿಸಿ ಮುಂದಿನ ದಿನದಲ್ಲಿ ಆಸ್ಪತ್ರೆಯ ಅವ್ಯವಸ್ಥೆಯನ್ನು ಸರಿಪಡಿಸಿ ರೋಗಿಗಳಿಗೆ ಅನೂಕುಲವಾಗುವಂತೆ ಕಾರ್ಯ ಮಾಡಲು ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಸೂಚನೆ ನೀಡಲಾಗಿದೆ.