ಕುಮಟಾ: ಚೌಡೇಶ್ವರಿ ಶಾಂತಿಕಾ ಕ್ರೀಡಾ ಬಳಗ ಗುಡಾಳ, ಹೆರವಟ್ಟ ಇವರ ಆಶ್ರಯದಲ್ಲಿ 16 ನೇ ವರ್ಷದ ಹಾಲಕ್ಕಿ ಸಮಾಜದ ಆಹ್ವಾನಿತ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯ ಸಮಾರೋಪ ಸಮಾರಂಭವು ಹೆರವಟ್ಟದ ಗುಡಾಳ ಕ್ರೀಡಾಂಗಣದಲ್ಲಿ ಜರುಗಿತು.

ಈ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಕಳೆದ 16 ವರ್ಷಗಳಿಂದ ಸತತವಾಗಿ ಹಾಲಕ್ಕಿ ಸಮಾಜದವರು ಸಂಘಟಿತರಾಗಿ ಇಂತಹ ಕ್ರೀಡಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತ ಬರುತ್ತಿರುವುದು ನಿಜಕ್ಕೂ ಶ್ಲಾಘನೀಯ. 19 ವರ್ಷದೊಳಗಿನ ರಾಷ್ಟ್ರಮಟ್ಟದ 3000 ಮೀಟರ ಓಟದಲ್ಲಿ ಬಂಗಾರದ ಪದಕ ಗಳಿಸಿ ಶ್ರೀಲಂಕಾ ಗೆ ತೆರಳುತ್ತಿರುವ ದಾಮೋದರ ಗಣಪತಿ ಗೌಡ ಹಾಗೂ ಪಿಯುಸಿ ವಾಣಿಜ್ಯ ವಿಭಾಗದಲ್ಲಿ 93 % ಅಂಕಗಳಿಸಿದ ಕೃಷ್ಣ ಎಚ್. ಗೌಡ ಅವರಂತಹ ಅತ್ಯದ್ಭುತ ವಿಭಿನ್ನ ಪ್ರತಿಭೆಗಳನ್ನು ಗುರುತಿಸಿ ಪೋತ್ಸಾಹಿಸಿರುವದು ಅಭಿನಂದನಾರ್ಹ. ಸಾಧಕರನ್ನು ಸನ್ಮಾನಿಸಿ ಗೌರವಿಸುವುದು ನಮ್ಮ ಸಮಾಜದ ಆದ್ಯ ಕರ್ತವ್ಯ . ಇಂತಹ ಪುರಸ್ಕಾರ, ಸನ್ಮಾನಗಳಿಂದ ಸಾಧಕರಿಗೆ ಇನ್ನಷ್ಟು ಪ್ರೋತ್ಸಾಹ ದೊರೆಯುತ್ತದೆ. ಹಾಗೂ ಇತರರಲ್ಲೂ ಸ್ಫೂರ್ತಿಯನ್ನು ತುಂಬುತ್ತದೆ. ದಾಮೋದರ ಗೌಡ ಅವರು ಇನ್ನೂ ಹೆಚ್ಚಿನ ಏಕಾಗ್ರತೆ ಮತ್ತು ಕಠಿಣ ಪರಿಶ್ರಮದಿಂದ ಮುಂದುವರೆದು ನಮ್ಮ ಜಿಲ್ಲೆಯ, ರಾಜ್ಯದ, ರಾಷ್ಟ್ರ ಮಟ್ಟದಲ್ಲಿ ಕೀರ್ತಿ ತರುವಂತಾಗಿ ಒಲಿಂಪಿಕ್ಸ್ ನಲ್ಲಿ ಭಾಗವಹಿಸುವ ಅವಕಾಶವನ್ನು ಗಿಟ್ಟಿಸಿಕೊಳ್ಳಬೇಕು. ಅಂತೆಯೇ ಕೃಷ್ಣ ಗೌಡ ಕೂಡಾ ಇನ್ನೂ ಸತತ ಅಭ್ಯಾಸದ ಮೂಲಕ ಹೆಚ್ಚಿನ ಅಂಕ ಗಳಿಸುವ ನಿಟ್ಟಿನಲ್ಲಿ ಪ್ರಯತ್ನಿಸಬೇಕು ಎಂದು ಸಲಹೆ ನೀಡಿ ಸತತ ಪರಿಶ್ರಮದ ಮೂಲಕ ಮುನ್ನಡೆದರೆ ಖಂಡಿತ ಯಶಸ್ಸು ಲಭಿಸುತ್ತದೆ ಎನ್ನುವುದನ್ನು ಒತ್ತಿ ಒತ್ತಿ ಹೇಳಿದರು.

RELATED ARTICLES  ಕುಮಟಾದಲ್ಲಿ ಜುಲೈ 29 ಕ್ಕೆ ಪತ್ರಿಕಾ ದಿನಾಚರಣೆ.

ಮುಖ್ಯ ಅತಿಥಿಗಳಾಗಿ ಆಗಮಿಸಿದ ದಿನಕರ ಶೆಟ್ಟಿ ಅವರು ಮಾತನಾಡಿ ಕಳೆದ ಹಲವಾರು ವರ್ಷಗಳಿಂದ ಈ ಕಾರ್ಯಕ್ರಮ ನಡೆಯುತ್ತಿದ್ದು ಪ್ರತಿವರ್ಷ ಈ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿದ್ದೇನೆ. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಉತ್ಸಾಹದೊಂದಿಗೆ ಈ ಕಾರ್ಯಕ್ರಮ ಜರುಗಲಿ ಎಂದು ಆಶಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ರವಿಕುಮಾರ ಶೆಟ್ಟಿ, ಪುರಸಭೆ ಅಧ್ಯಕ್ಷ ಮಧುಸೂದನ ಶೇಟ್, ಪ್ರದೀಪ ನಾಯಕ ದೇವರಬಾವಿ, ಅನಿಲ ಎಸ್. ಗೌಡ ಮುಂತಾದವರು ಕ್ರೀಡಾಪಟುಗಳಿಗೆ ಶುಭ ಹಾರೈಸಿದರು.

RELATED ARTICLES  ಹಿಂದೂ ಸಾಮಾಜಿಕ ಕಾರ್ಯಕರ್ತರ ಮೇಲೆ ಸರಕಾರಿ ಪ್ರಯೋಜಿತ ದಬ್ಬಾಳಿಕೆ!

ಇದೇ ವೇದಿಕೆಯಲ್ಲಿ 19 ವರ್ಷದೊಳಗಿನ ರಾಷ್ಟ್ರ ಮಟ್ಟದ 3000 ಮೀಟರ ಓಟದಲ್ಲಿ ಬಂಗಾರದ ಪದಕ ಗಳಿಸಿರುವ ಕೃಷ್ಣ ಹರಿಶ್ಚಂದ್ರ ಗೌಡ ಇವರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ರವಿ ಎಂ. ಗೌಡ ಸೂರ್ಯಕಾಂತ ಗೌಡ, ಪರಮೇಶ್ವರ ಗೌಡ, ನಾಗರಾಜ ಗೌಡ, ಶಿವಾನಂದ ಗೌಡ ಮುಂತಾದವರು ಉಪಸ್ಥಿತರಿದ್ದರು.