ಗೋಕರ್ಣ: ರೂಢಿಗತ ಪಂಪರೆಯಂತೆ ರಥಸಪ್ತಮಿಯ ದಿನವಾದ ಇಂದು ಶ್ರೀ ಗೋಕರ್ಣದ ಶ್ರೀ ಮಹಾಬಲೇಶ್ವರ ದೇವಾಲಯದ ಮಹಾರಥಕ್ಕೆ ಪೂಜೆ ಸಲ್ಲಿಸಲಾಯಿತು . ವೇ ನಾರಾಯಣ ಪಂಡಿತರು ಗಣಪತಿ ಪೂಜೆ ನೆರವೇರಿಸಿದರು .

RELATED ARTICLES  ಮನೆಯ ಬಾಗಿಲಿಗೇ ಬಂತು ಚಿರತೆ..!

ಉಪಾಧಿವಂತ ಮಂಡಳದ ಸದಸ್ಯರು , ಹಾಲಕ್ಕಿ ಜನಾಂಗದವರು , ಖಾರ್ವಿ ಜನಾಂಗದ ಶ್ರೀ ಮಾರುತಿ ತಾಂಡೆಲ ಹಾಗೂ ಗಾಬಿತ ಜನಾಂಗದ ಶ್ರೀ ಗಜಾನನ ಮೊರ್ಜೆ ಮತ್ತು ಊರ ನಾಗರಿಕರು, ಭಕ್ತಾದಿಗಳು ಉಪಸ್ಥಿತರಿದ್ದರು . ಮಹಾರಥ ಕಟ್ಟುವ ಕೆಲಸಕ್ಕೆ ಚಾಲನೆ ದೊರೆತಿದೆ .

RELATED ARTICLES  ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ ದುರಸ್ತಿಗೆ ಆಗ್ರಹಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ.

ದಿನಾಂಕ 16-02-2018 ಶುಕ್ರವಾರ ಈ ಸಂವತ್ಸರದ ಮಹಾರಥೋತ್ಸವ ಜರುಗಲಿದೆ . ಮಹಾಶಿವರಾತ್ರಿಗೆ ಶ್ರೀ ಕ್ಷೇತ್ರ ಗೋಕರ್ಣ ಸಿದ್ಧಗೊಳ್ಳುತ್ತಲಿದೆ .