ಕಾರವಾರ: ಶಾಸಕ ಸತೀಶ್ ಸೈಲ್ ಗೆಳೆಯರ ಬಳಗ ಆಯೋಜಿಸಿರುವ ಸತೀಶ್ ಸೈಲ್ ಕೃಷ್ಣಗಿರಿ ಕಪ್-2018 ಅಖಿಲ ಭಾರತ ಆಹ್ವಾನಿತ ಎ ಗ್ರೇಡ್ ಪುರುಷರ ಕಬಡ್ಡಿ ಪಂದ್ಯಾವಳಿಗೆ ಮಂಗಳವಾರ ರಾತ್ರಿ ಅದ್ದೂರಿ ಚಾಲನೆ ದೊರೆತಿದೆ. ಸಾವಿರಾರು ಕ್ರೀಡಾಭಿಮಾನಿಗಳ ಕಲರವದ ನಡುವೆ ರಾಷ್ಟ್ರಮಟ್ಟದ 12 ತಂಡಗಳು ಪಾಲ್ಗೊಂಡಿದ್ದು ಕಬಡ್ಡಿ ಕ್ರೇಜ್ ಹೆಚ್ಚಿಸಿವೆ.

ಪಂದ್ಯಾವಳಿಗೆ ಚಾಲನೆ ನೀಡಿದ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಠಾಗೋರ್ ಕಡಲತೀರದಲ್ಲಿ ರಾಷ್ಟ್ರಮಟ್ಟದ ಪಂದ್ಯಾವಳಿ ಆಯೋಜನೆಯಾಗುತ್ತಿರುವುದು ಹೆಮ್ಮೆಯ ವಿಷಯ. ಪ್ರಖ್ಯಾತ ಆಟಗಾರರಿಂದ ಉತ್ತಮ ರಂಜನೆ ಒದಗಲಿ ಎಂದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಶಾಸಕ ಸತೀಶ್ ಸೈಲ್ ಕಾರವಾರದಲ್ಲಿ ರಾಷ್ಟ್ರಮಟ್ಟದ ಕಬಡ್ಡಿ ಪಂದ್ಯಾವಳಿ ಆಯೋಜಿಸುವ ಕನಸು ಕೈಗೂಡಿದೆ. ಹೆಸರಾಂತ ಕ್ರೀಡಾಪಟುಗಳನ್ನು ಕರೆತರಿಸಿ ಜಿಲ್ಲೆಯ ಜನರಿಗೆ ಪರಿಚಯಿಸುವ ಜೊತೆಗೆ ದೇಸೀಯ ಕ್ರೀಡೆಗೆ ಉತ್ತೇಜಿಸುವ ಉದ್ದೇಶದಿಂದ ಕ್ರೀಡಾಕೂಟ ಆಯೋಜಿಸಿದ್ದೇವೆ. ಎಲ್ಲ ತಂಡಗಳಲ್ಲೂ ಅತ್ಯುತ್ತಮ ಆಟಗಾರರಿದ್ದು, ಸ್ಥಳೀಯ ಪ್ರತಿಭೆಗಳಿಗೆ ಹೊಸ ಹುರುಪು ತಂದುಕೊಡಲು ಪಂದ್ಯಾವಳಿ ಸಹಕಾರಿ ಎಂದರು.

RELATED ARTICLES  ತಲೆಮರೆಸಿಕೊಂಡಿದ್ದ ಆರೋಪಿಯ ಬಂಧನ : 8 ವರ್ಷದಿಂದ ಪೊಲೀಸರಿಂದ ತಪ್ಪಿಸಿಕೊಂಡಿದ್ದ ವ್ಯಕ್ತಿ.

ನಗರಸಭೆ ಅಧ್ಯಕ್ಷ ಗಣಪತಿ ವಿ.ನಾಯ್ಕ ಅಧ್ಯಕ್ಷತೆ ವಹಿಸಿದ್ದರು. ವೇದಿಕೆಯಲ್ಲಿ ಕರ್ನಾಟಕ ರಾಜ್ಯ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ರಾಕೇಶ್ ಮಲ್ಲಿ, ಉಪಾಧ್ಯಕ್ಷ ವಿ.ಜಯರಾಮ, ಜಿಲ್ಲಾ ಅಮೆಚೂರ್ ಕಬಡ್ಡಿ ಅಸೋಸಿಯೇಶನ್ ಅಧ್ಯಕ್ಷ ಸೂರಜ್ ನಾಯ್ಕ ಸೋನಿ, ತಾಲೂಕಾ ಅಮೇಚೂರ್ ಕಬಡ್ಡಿ ಅಸೋಸಿಯೇಶನ್ ಗೌರವಾಧ್ಯಕ್ಷ ಗಣಪತಿ ಉಳ್ವೇಕರ್, ಅಂಕೋಲಾ ತಾ.ಪಂ.ಅಧ್ಯಕ್ಷೆ ಸುಜಾತಾ ಗಾಂವ್ಕರ್, ಪ್ರೊ ಕಬಡ್ಡಿ ಮುಖ್ಯ ರೆಫರಿ ಷಣ್ಮುಗಂ, ಇನಾಯಿತುಲ್ಲಾ ಶಾಬಂದ್ರಿ, ನಗರಸಭೆ ಉಪಾಧ್ಯಕ್ಷೆ ಲೀಲಾಬಾಯಿ ಠಾಣೆಕರ್, ಕೆಡಿಎ ಅಧ್ಯಕ್ಷ ಸಂದೀಪ್ ತಳೇಕರ್, ಸ್ಥಾಯಿ ಸಮಿತಿ ಅಧ್ಯಕ್ಷ ವಿಠ್ಠಲ ಸಾವಂತ್, ನಗರಸಭೆ ಸದಸ್ಯ ಡಾ.ನಿತಿನ್ ಪಿಕಳೆ, ಪ್ರೇಮಾನಂದ ಗುನಗಾ, ರಮೇಶ ಗೌಡ, ಪಾಂಡುರಂಗ ರೇವಂಡಿಕರ್, ರವಿಂದ್ರ ಬಾನಾವಳಿ, ಉದ್ಯಮಿ ಮಧು ಶೆಟ್ಟಿ, ಡಾ.ಶೈಲಾ ಬೋರ್ಕರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು. ಅಕ್ಷತಾ ಕೃಷ್ಣಮೂರ್ತಿ ನಿರೂಪಿಸಿದರು. ಮೀನಾಕ್ಷಿ ಪಾಟೀಲ್ ಪ್ರಾರ್ಥಿಸಿದರು. ಕೆ.ಶಂಭು ಶೆಟ್ಟಿ ಸ್ವಾಗತಿಸಿದರು. ಸಾವಿರಾರು ಕ್ರೀಡಾಭಿಮಾನಿಗಳು ಮೊದಲ ದಿನದ ಪಂದ್ಯಗಳನ್ನು ವೀಕ್ಷಿಸಿದರು.

RELATED ARTICLES  ಮಗುವಿನೊಂದಿಗೆ ಮಹಿಳೆ ನಾಪತ್ತೆ…!