ದಾಂಡೇಲಿ: ನಗರದ ಬಾಲ ಪ್ರತಿಭೆ, ಜೆವಿಡಿ ಆಂಗ್ಲ ಮಾಧ್ಯಮ ಶಾಲೆಯ 6 ನೇ ತರಗತಿ ವಿದ್ಯಾರ್ಥಿನಿ ಹಾಗೂ ಸಾಮಾಜಿಕ ಹೋರಟಗಾರ ದೀಪಕ ಸಾಮಂತ ಹಾಗೂ ದೀಪಾಲಿ ಸಾಮಂತ ದಂಪತಿಗಳ ಸುಪತ್ರಿ ಸಾಕ್ಷಿ ಪ್ರತಿಷ್ಟಿತ ಪ್ರಶಸ್ತಿಯಾದ ಬಸವಜ್ಯೋತಿ ರಾಜ್ಯ ಪ್ರಶಸ್ತಿ ಪುರಸ್ಕøತಗೊಂಡು ನಗರಕ್ಕೆ ಕೀರ್ತಿ ತಂದಿದ್ದಾಳೆ.
ವಿಜಯಪುರ ಆಹೇರಿಯ ಶ್ರೀ ಬಸವೇಶ್ವರ ಕರ್ಮವೀರ ಕಲಾ ಸಾಹಿತ್ಯ ಸಂಸ್ಕøತಿ ವೇದಿಕೆ (ರಿ.) ಇವರು ವಿಜಯಪುರದಲ್ಲಿ ಇತ್ತೀಚೆಗೆ ಹಮ್ಮಿಕೊಂಡಿದ್ದ 13 ನೇ ರಾಜ್ಯಮಟ್ಟದ ವಚನ ವಿಜಯೋತ್ಸವ ಸಮಾರಂಭದಲ್ಲಿ ಸಾಕ್ಷಿ ಪ್ರಶಸ್ತಿ ಸ್ವೀಕರಿಸಿದಳು.
ನಗರದ ಪ್ರತಿಭಾವಂತ ಭರತ ನಾಟ್ಯ ಕಲಾವಿದಳಾದ ಸಾಕ್ಷಿ ತನ್ನ 9 ನೇ ವಯಸ್ಸಿನಲ್ಲಿ ರಾಜ್ಯಮಟ್ಟದ ಕಿರಿಯರ ಭರತ ನಾಟ್ಯ ಸ್ಪರ್ಧೆಯಲ್ಲಿ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿ ಗಮನ ಸೆಳೆದಿದ್ದಳು. ರಾಜ್ಯ, ರಾಷ್ಟ್ರಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಗಮನ ಸೆಳೆದಿರುವ ಈಕೆ ಶಂಕರ ಟಿವಿಯಲ್ಲಿ ಭರತ ನಾಟ್ಯ ಪ್ರದರ್ಶನ ನೀಡಿ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ. ನಗರದ ಭಾರತಿ ನೃತ್ಯ ಕಲಾ ಕೇಂದ್ರದ ವಿದ್ಯಾರ್ಥಿನಿಯಾಗಿರುವ ಈಕೆ ಭರತ ನಾಟ್ಯ ಜ್ಯೂನಿಯರ್ ಪರೀಕ್ಷೆಯಲ್ಲಿ ಅತ್ಯುನ್ನತ ಅಂಕಗಳನ್ನು ಪಡೆದು ಕೇಂದ್ರಕ್ಕೆ ಮೊದಲಿಗಳಾಗಿದ್ದಾಳೆ. ವಿಧೂಷಿ ಸುಮಾ ಹೆಗಡೆಯವರ ಶಿಷ್ಯಳಾಗಿರುವ ಸಾಕ್ಷಿ ಈಗಾಗಲೆ ಹಲವಾರು ಪ್ರಶಸ್ತಿ, ಬಹುಮಾನಗಳು ಮತ್ತು ಸನ್ಮಾನಕ್ಕೆ ಭಾಜನಳಾಗಿದ್ದಾಳೆ.
ರಾಜ್ಯಮಟ್ಟದ ಪ್ರಶಸ್ತಿಗೆ ಭಾಜನಳಾದ ಸಾಕ್ಷಿಯ ಸಾಧನೆಗೆ ನಗರದ ಗಣ್ಯರನೇಕರು ಹರ್ಷ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.