ಕಾರವಾರ: ಬೇಲೆಕೇರಿ ಅದಿರು ನಾಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಸಕ ಸತೀಶ್ ಸೈಲ್ ಮಾಧ್ಯಮದವರಿಗೆ ಇಂದು ಪ್ರತಿಕ್ರಿಯೆ ನೀಡಿದ್ದು, ಎಸ್‍ಐಟಿ ತನಿಖೆ ನಡೆದರೆ ನಾನು ಅದನ್ನು ಎದುರಿಸಲು ಸಿದ್ದನಿದ್ದೇನೆ ಎಂದು ಹೇಳಿದ್ದಾರೆ.

ರಾಜ್ಯ ಸರ್ಕಾರದ ಸಚಿವ ಸಂಪುಟದ ಸೂಚನೆಯ ಮೇರೆಗೆ ಪ್ರಕರಣವನ್ನು ಎಸ್‍ಐಟಿಗೆ ನೀಡಿದೆ ಎಂಬ ಮಾಹಿತಿ ಇದೆ. ಆದರೆ ನನಗೆ ಯಾವುದೇ ಮಾಹಿತಿ ಬಂದಿಲ್ಲ. ಈ ಬಗ್ಗೆ ಯಾರೇ ಮಾಹಿತಿ ಕೇಳಿದರೂ ನೀಡಲು ಸಿದ್ದನಿದ್ದೇನೆ.

RELATED ARTICLES  ಶರಾಮತಿ ಸರ್ಕಲ್ ನಲ್ಲಿ ಉರುಳಿ ಬಿದ್ದ ಗ್ಯಾಸ್ ಟ್ಯಾಂಕರ್ !

ನನ್ನ ಕಂಪನಿ ಪೋರ್ಟ್ ಆಪರೇಟರ್ ಆಗಿ ಕಾರ್ಯನಿರ್ವಹಿಸಿದೆ ಹೊರತು 350 ಕಿ.ಮೀ. ದೂರದಿಂದ ಬರುವ ಅದಿರನ್ನು ಪರಿಶೀಲಿಸುವ ಮಾಸ್ಟರ್ ಆಗಿರಲಿಲ್ಲ. ಈಗಾಗಲೇ ಸಿಬಿಐ ವಿಚಾರಣೆಯಲ್ಲಿ ಎಲ್ಲಾ ಮಾಹಿತಿ ನೀಡಿದ್ದೇನೆ. ಅದರ ತನಿಖೆ ಕೂಡ ಮುಗಿದಿದೆ ಎಂದರು.

RELATED ARTICLES  ಅಪರೂಪದ ಎದೆಗಾರಿಕೆ ಮತ್ತು ಸಂಘಟನಾ ಶಕ್ತಿ ಹೊಂದಿರುವವರು ಹಿರೇಗುತ್ತಿ ಗ್ರಾಮಸ್ಥರು:ಶಾಸಕ ದಿನಕರ ಶೆಟ್ಟಿ