ಕಾರವಾರ:ಗಣರಾಜ್ಯೋತ್ಸವದ ಅಂಗವಾಗಿ ಜ.೨೬ ರಂದು ನಗರದ ಮಾಲಾದೇವಿ ಮೈದಾನದಿಂದ ಪೊಲೀಸ್ ಮೈದಾನದ ವರೆಗೆ ಒಂದು ಕಿ.ಮೀ. ಉದ್ದದ ಬೃಹತ್ ರಾಷ್ಟ್ರ ಧ್ವಜದ ಮೆರವಣಿಗೆಯನ್ನು ನಡೆಸಲಾಗುತ್ತದೆ ಎಂದು ವಿದ್ಯಾರ್ಥಿ ಮುಖಂಡ ಸಿದ್ಧಾರ್ಥ ನಾಯಕ ತಿಳಿಸಿದ್ದಾರೆ.

RELATED ARTICLES  ಭಟ್ಕಳ: ಕೆಲಸಗಾರನಿಗೆ ಥಳಿತ ವಿಚಾರ : ಹೊಟೆಲ್ ಮ್ಯಾನೇಜರ್ ತಪ್ಪು: ಮಾಲಕರ ಸ್ಪಷ್ಟನೆ

ಅಂದು ಬೆಳಿಗ್ಗೆ ೮ ಗಂಟೆಗೆ ಜಿಲ್ಲಾ ಉಸ್ತುವಾರಿ ಸಚಿವ ಆರ್.ವಿ.ದೇಶಪಾಂಡೆ ಈ ಮೆರವಣಿಗೆಗೆ ಚಾಲನೆ ನೀಡಲಿದ್ದಾರೆ. ಕರಾವಳಿಯ ಭಾಗದಲ್ಲಿ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ರಾಷ್ಟ್ರ ಧ್ವಜದ ಮೆರವಣಿಗೆ ನಡೆಯಲಿದ್ದು ಸಾರ್ವಜನಿಕರಲ್ಲಿ ದೇಶಪ್ರೇಮ ಭಾವನೆಯನ್ನು ಉತ್ತೇಜಿಸಲು ಈ ಕಾರ್ಯ ಕೈಗೊಳ್ಳಲಾಗುತ್ತಿದೆ.

RELATED ARTICLES  ನಮ್ಮವರು ಜಾತಿ ಕಟ್ಟುವ ಕೆಲಸ ಮಾಡದೆ ಸಮಾಜ ಕಟ್ಟುವ ಕೆಲಸ ಮಾಡಿದ್ದರು : ಪ್ರದೀಪ ನಾಯಕ

ಇದರಲ್ಲಿ ಪಾಲ್ಗೊಳ್ಳಲು ಮುಕ್ತ ಅವಕಾಶ ಕಲ್ಪಿಸಲಾಗಿದ್ದು ಎಲ್ಲರೂ ಅಂದು ಬೆಳಿಗ್ಗೆ ೭.೩೦ಕ್ಕೆ ಮಾಲಾದೇವಿ ಮೈದಾನದಲ್ಲಿ ಸೇರಬೇಕು ಎಂದು ಸಿದ್ಧಾಥ್ ನಾಯಕ ಪತ್ರಿಕಾ ಪ್ರಕಟಣೆಯಲ್ಲಿ ಕೋರಿದ್ದಾರೆ.