ಸಾಧನಾ ಯುವಕ ಸಂಘ ಬಗ್ಗೋಣ ಇವರ ಆಶ್ರಯದಲ್ಲಿ ದಿ| ನಾರಾಯಣ ಕೆ. ಹೆಗಡೆ ಬಗ್ಗೋಣ ಇವರ ಸ್ಮರಣಾರ್ಥ ಜಿಲ್ಲಾ ಮಟ್ಟದ ಆಹ್ವಾನಿತ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾವಳಿಯನ್ನು 20/01/18 ರಂದು ಬಗ್ಗೋಣದ ಹಿರಿಯ ಪ್ರಾಥಮಿಕ ಶಾಲಾ ಆವರಣದಲ್ಲಿ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮವನ್ನು ಉದ್ಯಮಿ ಸುಬ್ರಾಯ ವಾಳ್ಕೆ ಅವರು ಉದ್ಘಾಟಿಸಿ ಮಾತನಾಡಿ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಉತ್ತಮ ಆರೋಗ್ಯದೊಂದಿಗೆ ಮನಸ್ಸು ಕೂಡಾ ಆಹ್ಲಾಧವಾಗಿರುತ್ತದೆ ಎಂದು ಮಕ್ಕಳಿಗೆ ಶುಭ ಕೋರಿದರು.
ಕ್ರೀಡಾಂಗಣವನ್ನು ಉದ್ಘಾಟಿಸಿದ ಬಿಜೆಪಿ ಮುಖಂಡರು ಹಾಗೂ ಬೆಳಕು ಗ್ರಾಮೀಣಾಭಿವೃದ್ಧಿ ಟ್ರಸ್ಟ್‍ನ ಅಧ್ಯಕ್ಷರಾದ ನಾಗರಾಜ ನಾಯಕ ತೊರ್ಕೆಯವರು ಮಾತನಾಡಿ ಕ್ರೀಡೆಗಳು ಮಾನವನ ಸ್ವಾಸ್ಥ್ಯ ಕಾಪಾಡುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಸಾಂಸ್ಕøತಿಕ ಚಟುವಟಿಕೆಗಳೊಂದಿಗೆ ಇಂತಹ ಕ್ರೀಡಾ ಕಾರ್ಯಕ್ರಮಗಳು ತೀರಾ ಅಗತ್ಯವಾಗಿವೆ. ಕ್ರೀಡೆಯಲ್ಲಿ ತೊಡಗಿಕೊಳ್ಳುವುದರಿಂದ ದೇಹಕ್ಕೆ ವ್ಯಾಯಾಮ ದೊರೆಯುತ್ತದೆ. ಮಕ್ಕಳಲ್ಲಿ ಶಿಕ್ಷಣದಷ್ಟೇ ಕ್ರೀಡೆಗಳಿಗೂ ಕೂಡಾ ಪ್ರಾಮುಖ್ಯತೆ ನೀಡುವ ಮನೋಭಾವನೆ ಬೆಳೆಸಬೇಕು. ಆಗ ಮಗು ಭವಿಷ್ಯದಲ್ಲಿ ಆರೋಗ್ಯವಂತವಾಗಿರುತ್ತದೆ ಜೊತೆಗೆ ಉತ್ತಮ ಕ್ರೀಡಾಪಟುವಾಗಿ ಬೆಳೆಯಲು ಸಾಧ್ಯವಾಗುತ್ತದೆ. ಇಲ್ಲಿ ಹಿರಿಯ ಆಟಗಾರರನ್ನು ಸನ್ಮಾನಿಸಿರುವುದು ಶ್ಲಾಘನೀಯವಾಗಿದೆ. ಸ್ಪರ್ಧಾಳುಗಳು ಆರೋಗ್ಯಕರ ಸ್ಪರ್ಧಾತ್ಮಕ ಮನೋಭಾವದೊಂದಿಗೆ ನಿರ್ಣಾಯಕರ ನಿರ್ಣಯಗಳಿಗೆ ಬದ್ಧರಾಗಬೇಕು ಎಂಬ ಕಿವಿಮಾತು ನುಡಿದರು. ಹಾಗೂ ಇಂತಹ ಕ್ರೀಡಾ ಚಟುವಟಿಕೆಗಳಿಗೆ ತಮ್ಮ ಪೋತ್ಸಾಹ ಸದಾ ಇರಲಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ದಿನಕರ ಶೆಟ್ಟಿ ಅವರು ಮಾತನಾಡಿ ಎಲ್ಲಾ ತಂಡಗಳಿಗೂ ಶುಭ ಹಾರೈಸಿದರು.
ಈ ವೇದಿಕೆಯಲ್ಲಿ ಮಾಜಿ ವಾಲಿಬಾಲ್ ಆಟಗಾರರಾದ ರಮೇಶ ಎಂ. ಪ್ರಭು, ನಾಗರಾಜ ಜೆ. ಶೇಟ್, ಗಿರೀಶ ಗೋವಿಂದ ಹೆಗಡೆ, ಮಂಜುನಾಥ ಜಟ್ಟಿ ಗೌಡ, ಅವರುಗಳನ್ನು ಸನ್ಮಾನಿಸಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಜಿ. ಪಂ. ಸದಸ್ಯ ಗಜಾನನ ಎನ್. ಪೈ, ಪ್ರಶಾಂತ ನಾಯಕ, ವಿನಾಯಕ ನಾಯ್ಕ, ಗಿರೀಶ ಭಟ್ಟ ಸೇರಿದಂತೆ ಹಲವರು ಉಪಸ್ಥಿತರಿದ್ದರು.