ಭಟ್ಕಳ : ಶ್ರೀ ಸಿದ್ಧಿವಿನಾಯಕ ವಿವಿದುದ್ದೇಶ ವಿದ್ಯಾ ಪ್ರಸಾರ ಮಂಡಳಿ ಖರ್ವಾ ಕೊಳಗದ್ದೆಯ ಪ್ರತಿಭೋತ್ಸವ ಕಾರ್ಯಕ್ರಮ ಶ್ರೀ ಸಿದ್ಧಿ ವಿನಾಯಕ ಶಾಲೆಯಲ್ಲಿ ನಡೆಯಿತು.
ಶಾಸಕ ಮಂಕಾಳ ವೈದ್ಯ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯಲ್ಲಿರುವ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಪೂರ್ವ ವಿದ್ಯಾರ್ಥಿಗಳು ಮತ್ತು ಸಾಧಕರಿಗೆ ಸನ್ಮಾನ ಮಾಡಲಾಯಿತು. ಶಿಕ್ಷಣ ಸಂಸ್ಥೆ ನಡೆಸುವುದು ಬಹಳ ಕಶ್ಟದ ಕೆಲಸ ಈ ಸಂಸ್ಥೆ 50 ವರ್ಷಗಳಿಂದ ನಡೆಸಿಕೊಂಡು ಬಂದಿದ್ದಾರೆ.
55 ವರ್ಷದ ಹಿಂದೆ ನಾವು ಮತ್ತು ನಮ್ಮ ಊರು ಅಭಿವೃದ್ಧಿ ಆಗಬೇಕಾದರೆ ಶಿಕ್ಷಣ ಮುಖ್ಯ ಎಂದು ಯೋಚಿಸಿ ಸಂಸ್ಥೆ ಕಟ್ಟಿದ್ದಾರೆ. ಎಲ್ಲಾ ಭಾಷೆಗಳಲ್ಲಿ ಶಿಕ್ಷಣ ಕೊಡುತ್ತಿರುವ ಸಂಸ್ಥೆ ಎಂದರೆ ಈ ಸಿದ್ದಿ ವಿನಾಯಕ ಶಾಲೆ. ಶಿಕ್ಷಣ ಸಂಸ್ಥೆ ಮಾಡೋದು ಊರಿನವರಿಗೆ ಒಳ್ಳೇದನ್ನು ಮಾಡಲು. ಬೇರೆಲ್ಲ ಕಂಪನಿಗಳು ಸ್ಥಾಪಿಸಿದರೆ ಅದರಲ್ಲಿ ಅವರು ಲಾಭ ಮತ್ತು ನಾಲ್ಕು ಜನರಿಗೆ ಉದ್ಯೋಗ ಸಿಗಬಹುದು. ಆದ್ರೆ ಶಿಕ್ಷಣ ಸಂಸ್ಥೆ ಕಟ್ಟಿದರೆ ಎಷ್ಟೋ ಜನರಿಗೆ ಉಪಕಾರವಾಗುತ್ತದೆ. ನಾವು ಶಿಕ್ಷಣ ಹಾಗೂ ಮಾರ್ಗದರ್ಶನ ಕೊಟ್ಟು ಎತ್ತರದ ಸ್ಥಾನದಲ್ಲಿ ನೋಡಿದರೆ ಅದರಲ್ಲಿರುವ ಖುಷಿ ಬೇರೆ ಯಾವುದರಲ್ಲೂ ಸಿಗುವುದಿಲ್ಲ. ನನ್ನ ಕ್ಷೇತ್ರದಲ್ಲಿ ಶಿಕ್ಷಣಕ್ಕಾಗಿ 100ಕೋಟಿ ಅನದಾನವನ್ನು ತಂದಿದ್ದೇನೆ. ನಾನು ಶಿಕ್ಷಣ ಕೊಟ್ಟು ರಸ್ತೆ ಸೇತುವೆ ನಿರ್ಮಿಸುವ ವಿದ್ಯಾರ್ಥಿಗಳಿಗೆ ತಯಾರು ಮಾಡುವ ಕೆಲಸ ಮಾಡುತ್ತಿದ್ದೇನೆ. ಶಾಲಾ ಮಕ್ಕಳ ಕ್ರೀಡಾ ಸಾಮಾಗ್ರಿ ಖರೀದಿಸಲು 1.50 ಲಕ್ಷ ರೂಪಾಯಿ ನೀಡುತ್ತೇನೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ಯನ್ನು ಸಂಸ್ಥೆಯ ಅಧ್ಯಕ್ಷರಾದ ರಾಮಚಂದ್ರ ನಾರಾಯಣ ಭಟ್ ವಹಿಸಿದ್ದರು. ಈ ಸಂದರ್ಭದಲ್ಲಿ ಮಾಬ್ಲಾ ನಾಯ್ಕ, ಕೃಷ್ಣ ಗೌಡ ಉಪಸ್ಥಿತರಿದ್ದರು.