ಕಾರವಾರ:ಹಾವು ಕಡಿದು ಮೃತಪಟ್ಟ ಮಹಿಳೆಯ ಮರಣೋತ್ತರ ಪರೀಕ್ಷೆಗೆ ವೈದ್ಯರು ವಿನಾಃ ಕಾರಣ ವಿಳಂಬ ಮಾಡುತ್ತಿದ್ದಾರೆ ಎಂದು ಆಕ್ಷೇಪಿಸಿ ವೈದ್ಯರ ವಿರುದ್ಧ ಆಕೆಯ ಕುಂಟುಬಸ್ಥರು ಅಸಮಾಧಾನವ್ಯಕ್ತಪಡಿಸಿ ಕಾರವಾರದ ಜಿಲ್ಲಾಸ್ಪತ್ರೆ ಶವಾಗಾರದ ಬಳಿ ಪ್ರತಿಭಟಿಸಿದರು.
ಕಾರವಾರ ತಾಲೂಕಿನ ತೋಡೂರಿನ ಪಾಲೇಕರ ವಾಡಾದ ನಿವಾಸಿ ಮಾದೇವಿ ಚಂದ್ರು ಗೌಡ (೫೭) ಎಂಬುವವರು ಬೆಳಗ್ಗೆ ಗದ್ದೆಗೆ ತೆರಳಿದಾಗ ವಿಷಕಾರಿ ಹಾವು ಕಚ್ಚಿ ಸ್ಥಳದಲ್ಲಿಯೇ ಕುಸಿದುಬಿದ್ದಿದ್ದರು. ತಕ್ಷಣ ಅವರನ್ನು ಆಸ್ಪತ್ರೆಗೆ ಸೇರಿಸಲಾಗಿತ್ತಾದರು ಕೆಲ ಹೊತ್ತಿನ ಬಳಿಕ ಮೃತಪಟ್ಟಿದ್ದರು. ಬಳಿಕ ಮೃತದೇಹವನ್ನು ಶವಾಗಾರಕ್ಕೆ ಸಾಗಿಸಲಾಗಿತ್ತು. ಆದರೆ ಮಧ್ಯಾಹ್ನವಾದರು ಶವ ಪರೀಕ್ಷೆಗೆ ಯಾರುಬಂದಿರಲಿಲ್ಲ.
ಶವ ಪರೀಕ್ಷೆಗೆ ಬರದಿದ್ದಾಗ ವೈದ್ಯರನ್ನು ಸಂಪರ್ಕಿಸಿ ಶವ ಪರೀಕ್ಷೆಗೆ ಒತ್ತಾಯಿಸಿದ್ದೇವು. ಯಾರು ಇಲ್ಲ. ಸ್ವಲ್ಪ ಸಮಯ ಬಿಟ್ಟು ಮೆಡಿಕಲ್ ಕಾಲೇಜಿನಲ್ಲಿ ಪಾಠ ಮಾಡುತ್ತಿರುವ ವೈದ್ಯರು ಬರುತ್ತಾರೆ ಎಂದು ಹೇಳಿದ್ದರು. ಆದರೆ ಮಧ್ಯಾಹ್ನ ಮೂರು ಗಂಟೆಯಾದರು ಬಂದಿಲ್ಲ’ ಎಂದು ಮೃತ ಮಹಿಳೆ ಮಗ ದಾಡು ಚಂದ್ರು ಗೌಡ ಆರೋಪಿಸಿದರು.
ಮರಣೋತ್ತರ ಪರೀಕ್ಷೆಗೆ ವೈದ್ಯರು ನಿರ್ಲಕ್ಷ್ಯ ಮಾಡುತ್ತಿದ್ದಾರೆ. ಈ ಬಗ್ಗೆ ಸ್ಥಳದಲ್ಲಿದ್ದ ಪೊಲೀಸರ ಬಳಿ ದೂರು ನೀಡಿದರು ನಮಗೆ ಜೋರು ಮಾಡುತ್ತಾರೆ. ಮಧ್ಯಾಹ್ನ ೩ ಗಂಟೆ ನಂತರ ಬಂದ ವೈದ್ಯರನ್ನು ಕೇಳಿದರೇ ತಮಗೆ ಈಗ ಮಾಹಿತಿ ನೀಡಲಾಗಿದೆ. ಆದರೆ ನಾವು ಬೆಳಿಗ್ಗೆಯಿಂದ ಕಾಯುತ್ತಿದ್ದೇವೆ. ಇಲ್ಲಿ ಆಡಳಿತ ವಿಭಾಗ ಹಾಗೂ ವೈದ್ಯರು ಸಂಬಂಧವಿಲ್ಲದವರಂತೆ ಕೆಲಸ ನಿರ್ವಹಿಸುತ್ತಿದ್ದಾರೆ. ಇನ್ನಾದರುಎಚ್ಚೆತ್ತುಕೊಂಡು ಸೂಕ್ತ ಸಮಯದಲ್ಲಿ ಶವ ಪರೀಕ್ಷೆ ನಡೆಸಬೇಕು ಆಕ್ಷೇಪಿಸಿದ್ದಾರೆ.