ಕಾರವಾರ: ಯಾವುದೇ ಆಮೀಷಗಳಿಗೆ ಒಳಗಾಗದೆ ಯುವ ಮತದಾರರು ಮತದಾನ ಮಾಡುವದರಿಂದ ದೇಶದ ಭವಿಷ್ಯ ಯುವ ಮತದಾರರ ಕೈಯಲ್ಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ಹೇಳಿದರು.

ಅವರು ಗುರುವಾರ ಜಿಲ್ಲಾ ರಂಗಮಂದಿರದಲ್ಲಿ 8ನೇ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಯುವ ಮತದಾರರು ಮತದಾನ ದಿನದಂದು ತಪ್ಪದೇ ಮತದಾನ ಮಾಡಬೇಕು. ಮತದಾನ ಮಾಡುವದು ಕೂಡಾ ಕರ್ತವ್ಯವಾಗಿದೆ. ಯಾರೂ ತಮ್ಮ ಕರ್ತವ್ಯದಿಂದ ಜಾರಿಕೊಳ್ಳಬಾರದು. ಯಾವುದೇ ಆಮೀಷಗಳಿಗೆ ಒಳಗಾಗದೆ ಮುಕ್ತ ಮನಸ್ಸಿನಿಂದ ಮತದಾನ ಮಾಡಬೇಕು. ದೇಶದಲ್ಲಿ ಯುವ ಜನತೆ ಪ್ರಮಾಣ ಹೆಚ್ಚು ಇರುವದರಿಂದ ದೇಶದ ಭವಿಷ್ಯ ಯುವಜನರ ಕೈಯಲ್ಲಿದೆ. ವ್ಯವಸ್ಥೆ ಸುಧಾರಣೆಗೆ ಚುನಾವಣಾ ವೇಳೆಯಲ್ಲಿ ಅರ್ಹ ಅಭ್ಯರ್ಥಿಗೆ ಮತ ಹಾಕಬೇಕು ಎಂದು ಅವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿವಾಣಾಧಿಕಾರಿ ಎಲ್ ಚಂದ್ರಶೇಖರ ನಾಯಕ ಮಾತನಾಡಿ ಈ ವರ್ಷ ಚುನಾವಣಾ ಆಯೋಗ ಸುಗಮ್ಯ ಚುನಾವಣೆ ಎಂಬ ಘೋಷಣೆಯನ್ನು ಘೋಷಿಸಿದೆ. ಸುಗಮ್ಯ ಚುನಾವಣಾ ಎಂದರೆ ಯಾವುದೇ ವ್ಯಕ್ತಿಗೆ ಮತದಾನ ಮಾಡಲು ತೊಂದರೆ ಆಗದಂತೆ ಚುನಾವಣೆ ನಡೆಸುವದಾಗಿದೆ. ವಿಕಲಚೇತನರು, ವಯೋವೃದ್ಧರಂತಹ ವ್ಯಕ್ತಿಗಳು ಸುಗಮವಾಗಿ ಮತದಾನ ಮಾಡುವುದೇ ಸುಗಮ್ಯ ಚುನಾವಣೆಯಾಗಿದೆ. ಯಾವುದೇ ಆಮೀಷಗಳಿಗೆ ಬಲಿಯಾಗದೇ ಯೋಗ್ಯ ಅಭ್ಯರ್ಥಿಗೆ ಮತದಾನ ಮಾಡುವುದು ನೈತಿಕ ಮತದಾನವಾಗುತ್ತದೆ ಎಂದು ಹೇಳಿದರು.

RELATED ARTICLES  ಮಾತಾಜಿ ಅಮೋಘಮಯಿ ಇವರಿಗೆ ಗೋಕರ್ಣ ಗೌರವ

ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ವಿಠ್ಠಲ ಧಾರವಾಡಕರ ಕಾರ್ಯಕ್ರಮ ಉದ್ಘಾಟಿಸಿದರು. . ಸರ್ಕಾರಿ ವಿಜ್ಞಾನ ಮತ್ತು ಕಲಾ ಕಾಲೇಜು ಉಪನ್ಯಾಸಕ ಡಾ. ವೆಂಕಟೇಶ ಗಿರಿ ಸ್ವಾಗತಿಸಿದರು. ಕಾರವಾರ ತಹಶೀಲ್ದಾರ ಮತದಾರರ ಪ್ರತಿಜ್ಞಾವಿಧಿ ಬೋಧಿಸಿದರು. ಹಿರಿಯ ಸಿವ್ಹಿಲ್ ನ್ಯಾಯಾಧೀಶ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಟಿ.ಗೊವಿಂದಯ್ಯ, ಅಪರ ಜಿಲ್ಲಾಧಿಕಾರಿ ಎಚ್.ಪ್ರಸನ್ನ, ಸರಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಸುಪಾಲರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ಬಹುಮಾನ ವಿತರಣೆ: ಮತದಾರರ ದಿನಾಚರಣೆ ಅಂಗವಾಗಿ ಆಯೋಜಿಸಲಾಗಿದ್ದ ವಿವಿಧ ಸ್ಪರ್ಧಾ ಕಾರ್ಯಕ್ರಮಗಳ ವಿಜೇತರಿಗೆ ಬಹುಮಾನ ವಿತರಿಸಲಾಯಿತು.
ರಸಪ್ರಶ್ನೆ ಸ್ಪರ್ಧೆ: ಶ್ರೀರಾಮ ಹೆಗಡೆ ಮತ್ತು ಮಹಾಲಸಾ ಪೈ, (ಪ್ರಥಮ), ಇನಿ ಎಂ.ನಾಯ್ಕ ಮತ್ತು ಸ್ವಾತಿ ಆರ್.ಹೆಗಡೆ (ದ್ವಿತೀಯ) ಬಹುಮಾನ ಪಡೆದರು.
ಮಿಲೇನಿಯಮ ವೋಟರ್ಸ್: ವೈಶಾಲಿ ಚಾಂಡಿಯಾ, ಐಶ್ವರ್ಯ ನಾಯ್ಕ, ಪೂನಮ್ ಗಜನೇಕರ ಮಂಜುನಾಥ ನಾಯ್ಕ ಇವರನ್ನು ಮಿಲೇನಿಯಮ್ ವೊಟರ್ಸ್ ಎಂದು ಗುರುತಿಸಿ ಮತದಾರರ ಗುರುತಿನ ಚೀಟಿ ನೀಡಲಾಯಿತು.

RELATED ARTICLES  ನಮ್ಮವರು ಜಾತಿ ಕಟ್ಟುವ ಕೆಲಸ ಮಾಡದೆ ಸಮಾಜ ಕಟ್ಟುವ ಕೆಲಸ ಮಾಡಿದ್ದರು : ಪ್ರದೀಪ ನಾಯಕ